Pinarayi Vijayan Oath Taking: ಇಂದು ಸಂಜೆ 3 ಗಂಟೆಗೆ ಕೇರಳದ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಪ್ರಮಾಣ ವಚನ, ವಿಪಕ್ಷ ಭಾಗಿಯಾಗಲ್ಲ

|

Updated on: May 20, 2021 | 4:31 PM

Pinarayi Vijayan: ಪಿಣರಾಯಿ ನೇತೃತ್ವದ ಸಚಿವ ಸಂಪುಟ 21 ಸದಸ್ಯರನ್ನೊಳಗೊಂಡಿದೆ ಮತ್ತು ಆಹ್ವಾನಿತರಲ್ಲಿ 140 ಶಾಸಕರು, 29 ಸಂಸದರು, ನ್ಯಾಯಾಂಗ, ಮಾಧ್ಯಮ ಮತ್ತು ಉನ್ನತ ಅಧಿಕಾರಿಗಳು ಸೇರಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗುವವರು ಕೊವಿಡ್ ನೆಗೆಟಿವ್​ಪರೀಕ್ಷಾ ಫಲಿತಾಂಶವನ್ನು 48 ಗಂಟೆಗಳ ಮೊದಲು ತೆಗೆದುಕೊಳ್ಳಬೇಕು

Pinarayi Vijayan Oath Taking: ಇಂದು ಸಂಜೆ 3 ಗಂಟೆಗೆ ಕೇರಳದ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಪ್ರಮಾಣ ವಚನ, ವಿಪಕ್ಷ ಭಾಗಿಯಾಗಲ್ಲ
ಪಿಣರಾಯಿ ವಿಜಯನ್
Follow us on

ತಿರುವನಂತಪುರಂ: ಕೇರಳದ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಮತ್ತು ಕೇರಳ ಸರ್ಕಾರದ ನೂತನ ಸಚಿವರು ಇಂದು ಸಂಜೆ 3ಗಂಟೆಗೆ ತಿರುವನಂತಪುರಂನಲ್ಲಿರುವ ಸೆಂಟ್ರಲ್ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. 21 ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 500 ಮಂದಿ ಭಾಗಿಯಾಗಲಿದ್ದಾರೆ. ಮಂಗಳವಾರ ಸಿಪಿಐ (ಎಂ) ರಾಜ್ಯ ಸಮಿತಿ ಪಿಣರಾಯಿ ವಿಜಯನ್ ಅವರನ್ನು ಸಿಪಿಐ (ಎಂ) ಸಂಸದೀಯ ಪಕ್ಷದ ಮುಖಂಡ ಮತ್ತು ಕೇರಳದ ಮುಖ್ಯಮಂತ್ರಿಯಾಗಿ ನೇಮಿಸಿತ್ತು.

ಪಿಣರಾಯಿ ನೇತೃತ್ವದ ಸಚಿವ ಸಂಪುಟ 21 ಸದಸ್ಯರನ್ನೊಳಗೊಂಡಿದೆ ಮತ್ತು ಆಹ್ವಾನಿತರಲ್ಲಿ 140 ಶಾಸಕರು, 29 ಸಂಸದರು, ನ್ಯಾಯಾಂಗ, ಮಾಧ್ಯಮ ಮತ್ತು ಉನ್ನತ ಅಧಿಕಾರಿಗಳು ಸೇರಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗುವವರು ಕೋವಿಡ್ ನೆಗೆಟಿವ್ ಪರೀಕ್ಷಾ ಫಲಿತಾಂಶವನ್ನು 48 ಗಂಟೆಗಳ ಮೊದಲು ತೆಗೆದುಕೊಳ್ಳಬೇಕು ಅಥವಾ ಲಸಿಕೆಯ ಎರಡೂ ಡೋಸ್ ತೆಗೆದುಕೊಳ್ಳಬೇಕು ಎಂದು ಪಿಣರಾಯಿ ವಿಜಯನ್ ನಿರ್ದೇಶಿಸಿದ್ದಾರೆ.

ಕೆ.ಕೆ.ಶೈಲಜಾ ಅವರನ್ನು ಕೈಬಿಡುವ ನಿರ್ಧಾರ ಪಕ್ಷದ್ದು: ಪಿಣರಾಯಿ ವಿಜಯನ್
ಕೆ.ಕೆ ಶೈಲಜಾ ಅವರು ರಾಜ್ಯ ಸಚಿವ ಸಂಪುಟದಿಂದ ಕೈಬಿಟ್ಟಿರುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ವಿಜಯನ್, ಕೆ ಕೆ ಶೈಲಜಾ ಅವರನ್ನು ತಮ್ಮ ಎರಡನೇ ಅವಧಿಯಲ್ಲಿ ರಾಜ್ಯ ಸಚಿವ ಸಂಪುಟದಿಂದ ಕೈಬಿಡುವ ನಿರ್ಧಾರವನ್ನು ಪಕ್ಷದ್ದು ಎಂದಿದ್ದಾರೆ. ಕಳೆದ ಸರ್ಕಾರದಲ್ಲಿ ಇತರ ಸಚಿವರೂ ಚೆನ್ನಾಗಿಯೇ ಕಾರ್ಯನಿರ್ವಹಿಸಿದ್ದರು. ಹೀಗಿರುವಾಗ ಶೈಲಜಾ ಅವರಿಗೆ ಮಾತ್ರ ವಿನಾಯಿತಿ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.

ಮಾಜಿ ಆರೋಗ್ಯ ಸಚಿವರಾಗಿದ್ದ ಶೈಲಜಾ ಅವರು ಕೇರಳದಲ್ಲಿ ಕೊವಿಡ್ 19 ಮೊದಲ ಅಲೆಯನ್ನು ನಿಭಾಯಿಸಿದ್ದಕ್ಕಾಗಿ ಜಾಗತಿಕ ಪ್ರಶಂಸೆ ಗಳಿಸಿದ್ದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ ಬಹಿಷ್ಕಾರ
ಕೊವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಪ್ರಮಾಣವಚನ ಕಾರ್ಯಕ್ರಮವನ್ನು ಬಹಿಷ್ಕರಿಸಲು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ನಿರ್ಧರಿಸಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ವಿಜಯನ್ ಇದು ದುರದೃಷ್ಟಕರ ಎಂದಿದ್ದಾರೆ .

ಪ್ರಮಾಣ ವಚನ ಸಮಾರಂಭದಲ್ಲಿ ಕೊವಿಡ್ -19 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇರಳ ಹೈಕೋರ್ಟ್ ಹೇಳಿದೆ. ಕೊವಿಡ್ ನಿರ್ಬಂಧಗಳನ್ನು ಉಲ್ಲಂಘಿಸಬಾರದು ಅಥವಾ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕಾಗಿ ಮಾತ್ರ ಸರ್ಕಾರವು ಅದನ್ನು ಬದಲಾಯಿಸಬಾರದು ಎಂದು ನ್ಯಾಯಾಲಯ ಹೇಳಿದೆ.

ಸಿಪಿ (ಎಂ) ನೇತೃತ್ವದ ಎಲ್​ಡಿಎಫ್ ವಿಧಾನಸಭಾ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನ 41 ಸ್ಥಾನಗಳನ್ನು ಗೆದ್ದಿದೆ. ಪಿಣರಾಯಿ ವಿಜಯನ್ ನೂತನ ಸಚಿವ ಸಂಪುಟದಲ್ಲಿ ಎಂ.ವಿ.ಗೋವಿಂದನ್, ಕೆ.ರಾಧಾಕೃಷ್ಣನ್, ಕೆ.ಎನ್. ಬಾಲಗೋಪಾಲ್, ಪಿ ರಾಜೀವ್, ವಿ.ಎನ್. ವಾಸವನ್, ಸಾಜಿ ಚೆರಿಯನ್, ವಿ. ಶಿವಂಕುಟ್ಟಿ, ಮೊಹಮ್ಮದ್ ರಿಯಾಸ್, ಡಾ.ಆರ್.ಬಿಂದು, ವೀಣಾ ಜಾರ್ಜ್, ಮತ್ತು ವಿ ಅಬ್ದುರೆಹಮಾನ್ ಇದ್ದಾರೆ.

ಪುನ್ನಪ್ರ-ವಯಲಾರ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂ ಮತ್ತು ಸಿಪಿಐ ನೇಮಕಗೊಂಡ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ ಇಂದು ಬೆಳಗ್ಗೆ ವಯಲಾರ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದ್ದಾರೆ. ನಿಯುಕ್ತ ಸ್ಪೀಕರ್ ಎಂಬಿ ರಾಜೇಶ್ ಮತ್ತು ಎಲ್​ಡಿಎಫ್ ಕನ್ವೀನರ್ ಎ. ವಿಜಯರಾಘವನ್ ಉಪಸ್ಥಿತರಿದ್ದರು. ಪುನ್ನಪ್ರ-ವಯಾಲಾರ್ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಎರಡನೇ ಪಿಣರಾಯಿ ವಿಜಯನ್ ಸಂಪುಟ ಇಂದು ಪ್ರಮಾಣವಚನ ಸ್ವೀಕರಿಸಲಿದೆ.

ಇದನ್ನೂ ಓದಿ:ಫಲಿತಾಂಶ ವಿಶ್ಲೇಷಣೆ: 40 ವರ್ಷಗಳ ನಂತರ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಪಿಣರಾಯಿ ವಿಜಯನ್  

ಕೆ.ಕೆ ಶೈಲಜಾ ನಿರ್ವಹಿಸಿದ್ದ ಕೇರಳದ ಆರೋಗ್ಯ ಸಚಿವರ ಸ್ಥಾನಕ್ಕೆ ಮಾಜಿ ಪತ್ರಕರ್ತೆ ವೀಣಾ ಜಾರ್ಜ್

(Pinarayi Vijayan will take oath as the Chief Minister of Kerala at 3 pm today)

Published On - 11:20 am, Thu, 20 May 21