ಕೊಚ್ಚಿ: ಕೇರಳದಲ್ಲಿ ಕೊವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 12 ವಾರಗಳಿಗೆ ಬದಲು, ನಾಲ್ಕು ವಾರಗಳ ಅಂತರದಲ್ಲಿ ಕೊವಿಶೀಲ್ಡ್ ಲಸಿಕೆಯ 2ನೇ ಡೋಸ್ ಪಡೆದುಕೊಳ್ಳಲು ಜನರಿಗೆ ಅವಕಾಶ ಕೊಡಬೇಕು. ಈ ಸಂಬಂಧ ಕೊವಿನ್ ಆ್ಯಪ್ನಲ್ಲಿ ಅಗತ್ಯ ಬದಲಾವಣೆ ಮಾಡಬೇಕು. ಕಡಿಮೆ ಅಂತರದಲ್ಲಿ 2ನೇ ಡೋಸ್ ಪಡೆದುಕೊಳ್ಳಲು ಇಚ್ಛಿಸುವವರಿಗೆ ಅವಕಾಶ ಸಿಗಬೇಕು ಎಂದು ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
‘ಸರ್ಕಾರವು ಒದಗಿಸುವ ಉಚಿತ ಲಸಿಕೆ ಪಡೆಯುವವರಿಗೆ ಪರಿಪೂರ್ಣ ಸುರಕ್ಷೆ ಮತ್ತು ಅತ್ಯುತ್ತಮ ಸುರಕ್ಷೆಯ ನಡುವೆ ಆಯ್ಕೆ ಇರಬೇಕೆ ಎಂಬ ಪ್ರಶ್ನೆಯನ್ನು ನಾನು ಪರಿಗಣಿಸಿಲ್ಲ’ ಎಂದು ಕೇರಳ ಹೈಕೋರ್ಟ್ ಸ್ಪಷ್ಡಪಡಿಸಿದೆ.
ಪ್ರಸ್ತುತ ಎರಡೂ ಡೋಸ್ಗಳ ನಡುವೆ 84 ದಿನಗಳ ಅಂತರ ಇರಬೇಕು ಎಂಬ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ಅವಧಿಗೂ ಮೊದಲೇ 2ನೇ ಲಸಿಕೆ ಪಡೆದುಕೊಳ್ಳಲು ಜನರಿಗೆ ಅವಕಾಶ ಕಲ್ಪಿಸಬೇಕು ಎಂದು ಕೇರಳ ಹೈಕೋರ್ಟ್ ಹೇಳಿದೆ.
ವಿದೇಶಗಳಿಗೆ ತೆರಳುತ್ತಿರುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೀಘ್ರ ಸುರಕ್ಷೆ ಮತ್ತು ಪರಿಪೂರ್ಣ ಸುರಕ್ಷೆ ನಡುವೆ ಆಯ್ಕೆಗೆ ಅವಕಾಶ ನೀಡಲು ಸಾಧ್ಯವಾದರೆ ಅದೇ ಆಯ್ಕೆಯನ್ನು ಇಲ್ಲಿರುವವರಿಗೆ ಏಕೆ ವಿಸ್ತರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಪಿ.ಬಿ.ಸುರೇಶ್ಕುಮಾರ್ ಪ್ರಶ್ನಿಸಿದರು.
ಸೆಪ್ಟೆಂಬರ್ 3ರಂದು ಕೇರಳ ಹೈಕೋರ್ಟ್ ಈ ಸಂಬಂಧ ಹೊರಡಿಸಿರುವ ಆದೇಶವು ಸೋಮವಾರ ಸಾರ್ವಜನಿಕರಿಗೆ ಲಭ್ಯವಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ ನೀತಿಯ ಅನ್ವಯವೂ ಬೇಗನೇ 2ನೇ ಡೋಸ್ ನೀಡಲು ಅವಕಾಶವಿದೆ ಎಂದು ಹೇಳಿದೆ.
ಈ ಆದೇಶ ಜಾರಿಗೆ ತರಲು ಕೊವಿನ್ ಪೋರ್ಟಲ್ನಲ್ಲಿ ಕೇಂದ್ರ ಸರ್ಕಾರ ಅಗತ್ಯ ಮಾರ್ಪಾಡುಗಳನ್ನು ಮಾಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.
(Kerala coronavirus allow covishield 2nd dose after 4 weeks Kerala high court orders govt of India)
ಇದನ್ನೂ ಓದಿ: Covishield: ಡೆಲ್ಟಾ ಪ್ರಭೇದದ ಬ್ರೇಕ್ ಥ್ರೂ ಪ್ರಕರಣ ತಡೆಯಲು ಕೊವಿಶೀಲ್ಡ್ ಲಸಿಕೆ ವಿಫಲ; ಅಧ್ಯಯನ
ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಿರುವ ಜಿಲ್ಲಾಡಳಿತಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ
Published On - 6:50 pm, Mon, 6 September 21