Crime News: ಕೊಟ್ಟಿಗೆಗೆ ನುಗ್ಗಿ ಹಸುಗಳ ಮೇಲೆ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ; ಬೇಸತ್ತು ದನಗಳನ್ನೇ ಮಾರುತ್ತಿದ್ದಾರೆ ರೈತರು
Shocking News: ಅಪರಿಚಿತ ವ್ಯಕ್ತಿ ಕೊಟ್ಟಿಗೆಗೆ ನುಗ್ಗಿ, ಹಸುಗಳನ್ನು ಕಟ್ಟಿ ಹಾಕಿ, ಹೊಡೆದು, ಅವುಗಳ ಗುದದ್ವಾರಕ್ಕೆ ಕೋಲನ್ನು ತುರುಕಿ, ಕಲ್ಲುಗಳಿಂದ ಹಸುಗಳ ಮೊಲೆಗಳನ್ನು ಚುಚ್ಚಿ ಲೈಂಗಿಕ ಹಿಂಸೆ ನೀಡುತ್ತಿದ್ದಾನೆ.
ಕೊಲ್ಲಂ: ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಮಯ್ಯಾನಾಡ್ನಲ್ಲಿ ಸುಮಾರು 20 ರೈತರು ವಿಚಿತ್ರವಾದ ಆರೋಪವೊಂದನ್ನು ಮಾಡಿದ್ದಾರೆ. ಆ ಊರಿನ ವ್ಯಕ್ತಿಯೊಬ್ಬ 2021ರ ಜನವರಿ ತಿಂಗಳಿನಿಂದ ತಾವು ಸಾಕಿರುವ ಹಸುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಹಸು ಸಾಕಾಣಿಕೆದಾರರು ಆರೋಪಿಸಿದ್ದಾರೆ. ಕಾಮುಕನ ಉಪಟಳ ತಾಳಲಾರದೆ ತಂಬಿ ಎಂಬ ರೈತ ತನ್ನ ಬಳಿಯಿದ್ದ 7 ಹಸುಗಳಲ್ಲಿ 4 ಹಸುಗಳನ್ನು ಮಾರಾಟ ಮಾಡಿದ್ದಾನೆ. ನನ್ನ ಕೊಟ್ಟಿಗೆಯಲ್ಲಿದ್ದ ಹಸುಗಳ ಮೇಲೆ ಜನವರಿಯಿಂದ 5 ಬಾರಿ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು ಎಂದು ಆತ ಆರೋಪಿಸಿದ್ದಾನೆ.
ಆರಂಭದಲ್ಲಿ ನಮ್ಮ ಮೇಲೆ ವೈಯಕ್ತಿಕ ದ್ವೇಷ ಇರುವವರು ಈ ರೀತಿ ನಮ್ಮ ಹಸುಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ನಾವು ಅನುಮಾನ ಪಟ್ಟಿದ್ದೆವು. ನಂತರ ನಮ್ಮ ರೀತಿಯಲ್ಲೇ ಬೇರೆ ರೈತರು ಕೂಡ ತಮ್ಮ ಕೊಟ್ಟಿಗೆಯ ಹಸುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಹೇಳತೊಡಗಿದರು. ಆ ಕಾಮುಕ ಹಸುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂಬ ವಿಷಯ ನಂತರ ನಮಗೆ ಗೊತ್ತಾಯಿತು ಎಂದು ತಂಬಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಹಸುಗಳನ್ನು ಕಟ್ಟಿ ಹಾಕಿ, ಹೊಡೆದು, ಅವುಗಳ ಗುದದ್ವಾರಕ್ಕೆ ಕೋಲನ್ನು ತುರುಕಿ, ಕಲ್ಲುಗಳಿಂದ ಹಸುಗಳ ಮೊಲೆಗಳನ್ನು ಚುಚ್ಚಿ ಹಿಂಸೆ ನೀಡಲಾಗುತ್ತಿದೆ. ವಾರದಲ್ಲಿ ನಾಲ್ಕೈದು ದಿನ ವೈದ್ಯರು ಬಂದು ಹಸುಗಳಿಗೆ ಚಿಕಿತ್ಸೆ ನೀಡಿ ಹೋಗುತ್ತಿದ್ದಾರೆ. ಈ ಕ್ರೂರವಾದ ವರ್ತನೆಗೆ ವೈದ್ಯರು ಕೂಡ ಆಘಾತ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಒಂದು ಹಸು ಕಾಡಿನ ಬಳಿ ಪ್ರಜ್ಞಾಹೀನವಾಗಿ ಬಿದ್ದಿತ್ತು. ಅಷ್ಟು ನೋವಾಗುವಂತೆ ಅದಕ್ಕೆ ಕಿರುಕುಳ ನೀಡಲಾಗಿತ್ತು. ಆ ಹಸುವಿನ ಬಾಯಿಯಿಂದ ಬಿಳಿ ಬಣ್ಣದ ವಸ್ತು ಸೋರುತ್ತಿತ್ತು. ಇಲ್ಲಿದ್ದು ನಮ್ಮ ಹಸುಗಳು ಚಿತ್ರಹಿಂಸೆ ಅನುಭವಿಸುವುದು ಬೇಡವೆಂದು ಅವುಗಳನ್ನು ಮಾರುತ್ತಿದ್ದೇವೆ ಎಂದು ಹಸು ಸಾಕಾಣಿಕೆದಾರರು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ನಾವು ಸ್ಥಳೀಯರೇ ಸೇರಿಕೊಂಡು ಆ ವ್ಯಕ್ತಿಯನ್ನು ಹುಡುಕಲು ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ತಪಾಸಣೆ ಮಾಡಿದೆವು. ರಾತ್ರಿ ವೇಳೆ ಆ ವ್ಯಕ್ತಿ ಕಾಂಪೌಂಡ್ ಹಾರಿಕೊಂಡು ಕೊಟ್ಟಿಗೆಗೆ ಬಂದು ಈ ಕೃತ್ಯ ಎಸಗಿರುವ ದೃಶ್ಯಾವಳಿಗಳು ನಮಗೆ ಸಿಕ್ಕಿವೆ. ಆ ಫೋಟೋವನ್ನು ಊರಿನ ತುಂಬ ಹಂಚಿದ ಬಳಿಕ ಎರಡು ದಿನಗಳ ಹಿಂದೆ ಆ ವ್ಯಕ್ತಿ ಸಿಕ್ಕಿಬಿದ್ದ. ಅವನನ್ನು ನಾವೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ. ಆದರೆ, ಅವನ ವಿರುದ್ಧ ಸೂಕ್ತ ಸಾಕ್ಷಿಗಳು ಇಲ್ಲ ಎಂಬ ಕಾರಣಕ್ಕೆ ಅದೇ ದಿನ ಪೊಲೀಸರು ಆತನನ್ನು ಬಿಡುಗಡೆ ಮಾಡಿದರು ಎಂದು ರೈತರು ಬೇಸರ ಹೊರಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ರೈತರು ಹಿಡಿದುಕೊಟ್ಟ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದ. ಅವನ ವಿರುದ್ಧ ಸರಿಯಾದ ಸಾಕ್ಷಿಗಳೂ ಇರಲಿಲ್ಲ. ಹೀಗಾಗಿ, ಆತನನ್ನು ಬಿಟ್ಟು ಕಳಿಸಲಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಪಾರ್ಸಲ್ ಕೊಡಲು ತಡವಾಗಿದ್ದಕ್ಕೆ ರೆಸ್ಟೋರೆಂಟ್ ಮಾಲೀಕನಿಗೆ ಗುಂಡಿಕ್ಕಿ ಕೊಂದ ಸ್ವಿಗ್ಗಿ ಡೆಲಿವರಿ ಬಾಯ್!
Crime News: ಅಕ್ರಮ ಸಂಬಂಧದ ಶಂಕೆ; ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿ ಮುಚ್ಚಿದ ಪತಿರಾಯ!
(Crime News Kerala cattle farmers allege Female cows being Brutally sexually assaulted in Kollam District)