ಬೆಂಗಳೂರಿನಲ್ಲಿ ರಾತ್ರಿ ಮತ್ತೊಂದು ಶಾಸಕ ಪುತ್ರಿ ಕಾರ್ ಅಪಘಾತ: ಯಲಹಂಕ ಫ್ಲೈ ಓವರ್ ಮೇಲೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು

ಫಾರೂಖ್ ಒಡೆತನದ MH 02 FF 5555 ನಂಬರಿನ ಐಷಾರಾಮಿ ಫೆರಾರಿ ಪೋರ್ಟೋಫಿನೋ ಕಾರು ನಿಯಂತ್ರಣ ತಪ್ಪಿ ಮೊದಲಿಗೆ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಬಳಿಕ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಬೆಂಗಳೂರಿನಲ್ಲಿ ರಾತ್ರಿ ಮತ್ತೊಂದು ಶಾಸಕ ಪುತ್ರಿ ಕಾರ್ ಅಪಘಾತ: ಯಲಹಂಕ ಫ್ಲೈ ಓವರ್ ಮೇಲೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು
ಅಪಘಾತಕ್ಕೀಡಾದ ಐಷಾರಾಮಿ ಕಾರು

ಬೆಂಗಳೂರು: ನಿನ್ನೆ ರಾತ್ರಿ 9ಗಂಟೆ ವೇಳೆಗೆ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಬಿ.ಎಂ.ಫಾರೂಕ್ ಒಡೆತನದ ಐಷಾರಾಮಿ ಕಾರು ಅಪಘಾತವಾಗಿದೆ. ಬೆಂಗಳೂರಿನ ಯಲಹಂಕ ಫ್ಲೈಓವರ್‌ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಕಾರು ಅಪಘಾತಕ್ಕೀಡಾಗಿದೆ.

ಫಾರೂಖ್ ಒಡೆತನದ MH 02 FF 5555 ನಂಬರಿನ ಐಷಾರಾಮಿ ಫೆರಾರಿ ಪೋರ್ಟೋಫಿನೋ ಕಾರು ನಿಯಂತ್ರಣ ತಪ್ಪಿ ಮೊದಲಿಗೆ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಬಳಿಕ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಚಲಾಯಿಸುತ್ತಿದ್ದವರು ಯಾರು ಎಂಬ ಬಗ್ಗೆ ಇನ್ನೂ ಪೊಲೀಸರು ಮಾಹಿತಿ ಬಿಟ್ಟುಕೊಟ್ಟಿಲ್ಲ. ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ಹೆಚ್ಚಾಗಿ ಈ ಕಾರನ್ನು ಫಾರೂಖ್ ಪುತ್ರಿ ಬಳಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಘಟನೆ ಬಳಿಕ ಪರಸ್ಪರ ರಾಜಿಯೊಂದಿಗೆ 2 ಕಾರಿನ ಚಾಲಕರು ವಾಪಾಸಾಗಿದ್ದಾರೆ. ಅಪಘಾತವಾದ ಕಾರಿನ ನೊಂದಣಿ ಪ್ರಕ್ರಿಯೆ ಅಪೂರ್ಣವಾಗಿದೆ ಎಂದು ತಿಳಿದು ಬಂದಿದೆ.

MLA Car Accident

ಬೆಂಗಳೂರಿನಲ್ಲಿ ರಾತ್ರಿ ಮತ್ತೊಂದು ಶಾಸಕರ ಕಾರ್ ಅಪಘಾತ

ಇದನ್ನೂ ಓದಿ: ತಾಲಿಬಾನ್ ಆಡಳಿತಕ್ಕೆ ವಿಶ್ವಸಂಸ್ಥೆ ಅಭಯ: ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್​-ಮುಲ್ಲಾ ಬಾರದಾರ್ ಭೇಟಿ

Click on your DTH Provider to Add TV9 Kannada