Covishield: ಡೆಲ್ಟಾ ಪ್ರಭೇದದ ಬ್ರೇಕ್ ಥ್ರೂ ಪ್ರಕರಣ ತಡೆಯಲು ಕೊವಿಶೀಲ್ಡ್ ಲಸಿಕೆ ವಿಫಲ – ಅಧ್ಯಯನ

ಇನ್ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಅಂಡ್ ಇಂಟಿಗ್ರೇಟೆಡ್ ಬಯೋಲಾಜಿ ಹಾಗೂ ಮ್ಯಾಕ್ಸ್ ಆಸ್ಪತ್ರೆ ನಡೆಸಿದ ‌ಜಂಟಿ‌ ಅಧ್ಯಯನದಲ್ಲಿ ಕೊರೊನಾದ ಡೆಲ್ಟಾ ಪ್ರಭೇದದ ಬ್ರೇಕ್ ಥ್ರೂ ಪ್ರಕರಣಗಳನ್ನು ತಡೆಯಲು ಕೊವಿಶೀಲ್ಡ್ ಲಸಿಕೆ ವಿಫಲ ಎಂಬ ಮಾಹಿತಿ ಹೊರಬಿದ್ದಿದೆ.

Covishield: ಡೆಲ್ಟಾ ಪ್ರಭೇದದ ಬ್ರೇಕ್ ಥ್ರೂ ಪ್ರಕರಣ ತಡೆಯಲು ಕೊವಿಶೀಲ್ಡ್ ಲಸಿಕೆ ವಿಫಲ - ಅಧ್ಯಯನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on: Aug 30, 2021 | 10:37 AM

ದೆಹಲಿ: ಕೊರೊನಾ ವೈರಾಣು ಹರಡುವಿಕೆಯನ್ನು ಹತೋಟಿಗೆ ತರಲು ಲಸಿಕೆಯೊಂದೇ ಸದ್ಯಕ್ಕಿರುವ ಪ್ರಬಲ ಅಸ್ತ್ರ ಎಂದು ತಜ್ಞರಾದಿಯಾಗಿ ಎಲ್ಲರೂ ನಂಬಿದ್ದಾರೆ. ಭಾರತದಲ್ಲಿ ಈ ವರ್ಷದ ಆರಂಭದಿಂದ ವಿತರಿಸಲಾಗುತ್ತಿರುವ ಕೊರೊನಾ ಲಸಿಕೆ ಬಗ್ಗೆ ಶುರುವಿನಲ್ಲಿ ಕೆಲ ಅನುಮಾನ, ಗೊಂದಲುಗಳು ಎದ್ದಿದ್ದವಾದರೂ ನಂತರ ಜನರಿಗೆ ಲಸಿಕೆ ಮೇಲೆ ತಕ್ಕಮಟ್ಟಿಗೆ ವಿಶ್ವಾಸ ಬಂದಿತ್ತು. ಆದರೆ, ಎರಡನೇ ಅಲೆ ಹಾಗೂ ಡೆಲ್ಟಾ ಪ್ರಭೇದದ ಉಪಟಳ ಜಾಸ್ತಿ ಆದಾಗ ಮತ್ತೆ ಲಸಿಕೆಯ ಪರಿಣಾಮಕಾರಿತನದ ಬಗ್ಗೆ ಸಂದೇಹ ಮೂಡಿತ್ತು. ಆ ಸಂದರ್ಭದಲ್ಲೂ ಸ್ಪಷ್ಟನೆ ನೀಡಿದ್ದ ತಜ್ಞರು ಲಭ್ಯವಿರುವ ಕೊರೊನಾ ಲಸಿಕೆಗಳು ಡೆಲ್ಟಾ ತಳಿ ವಿರುದ್ಧ ಸಶಕ್ತವಾಗಿ ಹೋರಾಡಬಲ್ಲವು ಎಂದು ಹೇಳಿ ಅನುಮಾನ ಶಮನ ಮಾಡಿದ್ದರು. ಆದರೆ, ಇದೀಗ ಇನ್ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಅಂಡ್ ಇಂಟಿಗ್ರೇಟೆಡ್ ಬಯೋಲಾಜಿ ಹಾಗೂ ಮ್ಯಾಕ್ಸ್ ಆಸ್ಪತ್ರೆಯ ‌ಜಂಟಿ‌ ಅಧ್ಯಯನದಲ್ಲಿ ತುಸು ಆಘಾತಕಾರಿ ಎನ್ನುವ ಅಂಶವೊಂದು ಹೊರಬಿದ್ದಿದೆ.

ಇನ್ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಅಂಡ್ ಇಂಟಿಗ್ರೇಟೆಡ್ ಬಯೋಲಾಜಿ ಹಾಗೂ ಮ್ಯಾಕ್ಸ್ ಆಸ್ಪತ್ರೆ ನಡೆಸಿದ ‌ಜಂಟಿ‌ ಅಧ್ಯಯನದಲ್ಲಿ ಕೊರೊನಾದ ಡೆಲ್ಟಾ ಪ್ರಭೇದದ ಬ್ರೇಕ್ ಥ್ರೂ ಪ್ರಕರಣಗಳನ್ನು ತಡೆಯಲು ಕೊವಿಶೀಲ್ಡ್ ಲಸಿಕೆ ವಿಫಲ ಎಂಬ ಮಾಹಿತಿ ಹೊರಬಿದ್ದಿದೆ. ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕವೂ ಕೊರೊನಾ ಸೋಂಕು ತಗುಲುತ್ತಿದೆ ಎಂಬ ಅಂಶವನ್ನಿಟ್ಟುಕೊಂಡು ದೆಹಲಿ, ಸುತ್ತಮುತ್ತಲಿನ ನಗರಗಳ ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಿದಾಗ ಈ ಸಂಗತಿ ಬಯಲಾಗಿದೆ. ಕೊವಿಶೀಲ್ಡ್ ಲಸಿಕೆಯ 2 ಡೋಸ್ ಪಡೆದ ಶೇ.25 ರಷ್ಟು ಮಂದಿಯಲ್ಲಿ ಡೆಲ್ಟಾ ಪ್ರಭೇದದ ವೈರಸ್ ಪತ್ತೆಯಾಗಿದ್ದರೆ, ಒಂದು ಡೋಸ್ ಪಡೆದ ಶೇ.48 ರಷ್ಟು ಮಂದಿಯಲ್ಲಿ ಡೆಲ್ಟಾ ಪ್ರಭೇದದ ವೈರಸ್ ಕಂಡುಬಂದು ಲಸಿಕೆಯ ಪರಿಣಾಮಕಾರಿತನದ ಬಗ್ಗೆ ಮತ್ತೆ ಜನಸಾಮಾನ್ಯರಲ್ಲಿ ಪ್ರಶ್ನೆಗಳನ್ನು ಮೂಡಿಸಿದೆ.

ಬ್ರೇಕ್ ಥ್ರೂ ಪ್ರಕರಣ ಎಂದರೇನು? ಇನ್ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಅಂಡ್ ಇಂಟಿಗ್ರೇಟೆಡ್ ಬಯೋಲಾಜಿ ಹಾಗೂ ಮ್ಯಾಕ್ಸ್ ಆಸ್ಪತ್ರೆ ಕೈಗೊಂಡ ಅಧ್ಯಯನದಲ್ಲಿ ಬಹುಮುಖ್ಯವಾಗಿ ಉಲ್ಲೇಖಿಸಿರುವ ಸಂಗತಿ ಎಂದರೆ ಕೊವಿಶೀಲ್ಡ್ ಲಸಿಕೆ ಕೊರೊನಾ ವೈರಾಣುವಿನ ಡೆಲ್ಟಾ ಪ್ರಭೇದದ ಬ್ರೇಕ್ ಥ್ರೂ ಪ್ರಕರಣಗಳನ್ನು ತಡೆಯಲು ವಿಫಲವಾಗುತ್ತಿದೆ ಎನ್ನುವುದು. ಬ್ರೇಕ್ ಥ್ರೂ ಪ್ರಕರಣ ಎಂದು ಯಾವುದಕ್ಕೆ ಹೇಳುತ್ತಾರೆ ಎನ್ನುವ ಬಗ್ಗೆ ಜನರಿಗೆ ಕೊಂಚ ಗೊಂದಲವಿದೆ. ಅಂದಹಾಗೆ ಬ್ರೇಕ್ ಥ್ರೂ ಪ್ರಕರಣ ಎಂದರೆ ಒಬ್ಬ ವ್ಯಕ್ತಿ ಕೊರೊನಾ ಲಸಿಕೆ ಪಡೆದ ಬಳಿಕವೂ ಮತ್ತೆ ಸೋಂಕಿಗೆ ತುತ್ತಾಗುವುದು ಎಂದರ್ಥ. ಈ ಅಧ್ಯಯನದಲ್ಲಿ ಕೊವಿಶೀಲ್ಡ್ ಲಸಿಕೆಯ 2 ಡೋಸ್ ಪಡೆದ ಶೇ.25 ರಷ್ಟು ಮಂದಿಯಲ್ಲಿ ಹಾಗೂ ಒಂದು ಡೋಸ್ ಪಡೆದ ಶೇ.48 ರಷ್ಟು ಮಂದಿಯಲ್ಲಿ ಡೆಲ್ಟಾ ಪ್ರಭೇದದ ವೈರಸ್ ಕಂಡುಬಂದಿದೆ.

ಇದನ್ನೂ ಓದಿ: ದಿನಕ್ಕೆ 1 ಕೋಟಿ ಡೋಸ್​ ಕೊರೊನಾ ಲಸಿಕೆ ವಿತರಿಸುವ ಗುರಿ ತಲುಪಿದ ಭಾರತ; ಗ್ರಾಮೀಣ ಭಾಗಗಳದ್ದೇ ಮೇಲುಗೈ 

ಕರ್ನಾಟಕದಲ್ಲಿ ಲಸಿಕೆ ಪಡೆದ ಮೇಲೂ ಸೋಂಕಿಗೆ ತುತ್ತಾದವರ ಸಂಖ್ಯೆ 13,768; ಕೊವಿಶೀಲ್ಡ್​ ಲಸಿಕೆ ಪಡೆದ 11,150 ಮಂದಿಗೆ ಪಾಸಿಟಿವ್

(Covishield Vaccine unable to halt breakthrough Delta infections says study)

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್