Coronavirus cases in India: ಭಾರತದಲ್ಲಿ 42,909 ಹೊಸ ಕೊವಿಡ್ ಪ್ರಕರಣ ಪತ್ತೆ, 380 ಮಂದಿ ಸಾವು
Covid-19: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 380 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 4,38,210 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. 34,763 ಮಂದಿ ಚೇತರಿಸಿಕೊಂಡಿದ್ದು ಈವರೆಗೆ ಒಟ್ಟು 3,19,23,405 ಮಂದಿ ಚೇತರಿಸಿಕೊಂಡಿದ್ದಾರೆ.
ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 42,909 ಹೊಸ ಕೊವಿಡ್ ಮತ್ತು 380 ಸಾವುಗಳು ವರದಿಯಾಗಿದ್ದು, ಕೇರಳದಲ್ಲಿ ನಿನ್ನೆ 29,836 ಪ್ರಕರಣಗಳು ಮತ್ತು 75 ಸಾವುಗಳು ದಾಖಲಾಗಿವೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 380 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 4,38,210 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. 34,763 ಮಂದಿ ಚೇತರಿಸಿಕೊಂಡಿದ್ದು ಈವರೆಗೆ ಒಟ್ಟು 3,19,23,405 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,76,324 ಕ್ಕೆ ತಲುಪಿದೆ.
ಉತ್ತರಪ್ರದೇಶ ಸರ್ಕಾರದಿಂದ 2 ದಿನ ರಾತ್ರಿ ಕರ್ಫ್ಯೂ ಸಡಿಲ ಜನ್ಮಾಷ್ಟಮಿ ಹಬ್ಬದ ನಿಮಿತ್ತ ರಾಜ್ಯಾದ್ಯಂತ ಸೋಮವಾರ ಮತ್ತು ಮಂಗಳವಾರ ರಾತ್ರಿ ಕರ್ಫ್ಯೂನಲ್ಲಿ ಉತ್ತರ ಪ್ರದೇಶ ಸರ್ಕಾರ ಸಡಿಲಿಕೆ ಘೋಷಿಸಿದೆ. ಬೆಳಿಗ್ಗೆ 6 ರಿಂದ ರಾತ್ರಿ 10 ರ ನಡುವೆ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ ಹೊರತುಪಡಿಸಿ ಎಲ್ಲಾ ನಿರ್ಬಂಧಗಳನ್ನು ಸರ್ಕಾರ ತೆಗೆದುಹಾಕಿದೆ.
India reports 42,909 new COVID-19 cases and 34,763 recoveries in the last 24 hours, taking total recoveries to 3,19,23,405 and active caseload to 3,76,324
Vaccination: 63.43 crores pic.twitter.com/NkRCImOgmz
— ANI (@ANI) August 30, 2021
380 deaths reported in the last 24 hours, taking the total death toll to 4,38,210: Union Health Ministry
Of 42,909 fresh COVID infections & 380 deaths reported in India in the last 24 hours, Kerala recorded 29,836 cases and 75 deaths yesterday
— ANI (@ANI) August 30, 2021
ಭಾರತದ ಒಟ್ಟು ಕೊವಿಡ್ -19 ವ್ಯಾಕ್ಸಿನೇಷನ್ 63.43 ಕೋಟಿ ಮೀರಿದೆ. ಪ್ರಸ್ತುತ ಚೇತರಿಕೆ ದರ ಶೇ 97.51.ಆಗಿದೆ. ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 3,76,324 ಆಗಿದ್ದು ಇದು ಒಟ್ಟು ಪ್ರಕರಣಗಳ ಶೇ 1.15 ಆಗಿದೆ. ಕಳೆದ 66 ದಿನಗಳಲ್ಲಿ ಸಾಪ್ತಾಹಿಕ ಧನಾತ್ಮಕ ದರ (2.41%) ಶೇ 3ಕ್ಕಿಂತ ಕಡಿಮೆ ಇದೆ.
ಹಿಮಾಚಲ ಪ್ರದೇಶದಲ್ಲಿ ಎಲ್ಲ ವಯಸ್ಕರಿಗೆ ಕೊವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ ಹಿಮಾಚಲ ಪ್ರದೇಶ ಸರ್ಕಾರವು ಕೊವಿಡ್ -19 ಲಸಿಕೆಯ ಮೊದಲ ಡೋಸೇಜ್ ಎಲ್ಲ ವಯಸ್ಕರಿಗೆ ನೀಡಿದೆ ಎಂದು ರಾಜ್ಯದ ಆರೋಗ್ಯ ಸಚಿವ ಡಾ.ರಾಜೀವ್ ಸೈಜಲ್ ಅವರು ಹೇಳಿದ್ದಾರೆ. ಶನಿವಾರ ಹಿಮಾಚಲ ಪ್ರದೇಶವು ರಾಜ್ಯದಲ್ಲಿ 18 ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆಲ್ಲ ಕೊವಿಡ್ -19 ಲಸಿಕೆಯ ಮೊದಲ ಡೋಸ್ ಅನ್ನು ಪೂರೈಸಿದ ದೇಶದ ಮೊದಲ ರಾಜ್ಯವಾಗಿದೆ.
ಈ ಬಗ್ಗೆ ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಸೈಜಲ್ ರಾಜ್ಯವು 18 ಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ 100 ಪ್ರತಿಶತದಷ್ಟು ಮೊದಲ ಡೋಸ್ ಲಸಿಕೆಗಳನ್ನು ಪೂರ್ಣಗೊಳಿಸಿದೆ. ನವೆಂಬರ್ 30, 2021 ರೊಳಗೆ ಎರಡೂ ಡೋಸ್ಗಳ 100 ಪ್ರತಿಶತದಷ್ಟು ವ್ಯಾಕ್ಸಿನೇಷನ್ ಅನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಎಂದಿದ್ದಾರೆ. ಕೊವಿಡ್ -19 ನಿರ್ವಹಣೆಗಾಗಿ ಮತ್ತು ಲಸಿಕೆ ಕ್ಷೇತ್ರದಲ್ಲಿಯೂ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯವರ ಪ್ರಯತ್ನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ರಾಜ್ಯವು ಮೊದಲಿನಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಎಂದು ಅವರು ಹೇಳಿದರು.
ಇದನ್ನೂ ಓದಿ: ಫೇಸ್ಬುಕ್ ಪುಟದಲ್ಲಿ ಕೊವಿಡ್ ಸಂಬಂಧಿತ ಮಾಹಿತಿ ಒದಗಿಸುವ ಕೇರಳದ ವ್ಯಕ್ತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೌರವ
ಇದನ್ನೂ ಓದಿ: ಡ್ರಗ್ಸ್ ಕೇಸ್: ಬೆಂಗಳೂರಲ್ಲಿ ಸೆಲೆಬ್ರಿಟಿಗಳ ಮನೆ ಮೇಲೆ ಪೊಲೀಸ್ ದಾಳಿ; ಮತ್ತೋರ್ವ ಕನ್ನಡದ ನಟಿಗೆ ಬಂಧನ ಭೀತಿ
(Coronavirus 42,909 fresh Covid infections 380 deaths reported in India in the last 24 hours)
Published On - 10:45 am, Mon, 30 August 21