ಫೇಸ್ಬುಕ್ ಪುಟದಲ್ಲಿ ಕೊವಿಡ್ ಸಂಬಂಧಿತ ಮಾಹಿತಿ ಒದಗಿಸುವ ಕೇರಳದ ವ್ಯಕ್ತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೌರವ
ಡೇಟಾ ಅನಾಲಿಸಿಸ್ ನನ್ನ ಹವ್ಯಾಸ. ಎಂಬಿಎ ನಂತರ 10 ವರ್ಷಗಳಿಗೂ ಹೆಚ್ಚು ಕಾಲ ನಾನು ಟಾಟಾ ಮ್ಯೂಚುವಲ್ ಫಂಡ್‌ನಲ್ಲಿ ಕೆಲಸ ಮಾಡಿದ್ದೇನೆ. ಆದರೆ ನಂತರ ಕೆಲವು ಕಾರಣಗಳಿಂದಾಗಿ, ನಾನು ಕೇರಳಕ್ಕೆ ಹೋಗಬೇಕಾಯಿತು. ರಾಜ್ಯ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆ ಪಾಸ್ ಮಾಡಿದ ನಂತರ ಸರ್ಕಾರಿ ಸೇವೆಗೆ ಸೇರಿಕೊಂಡೆ
ತಿರುವನಂತಪುರಂ: ಸಾಮಾಜಿಕ ಮಾಧ್ಯಮ ಕಾರ್ಯಕರ್ತರಲ್ಲಿ ಕೃಷ್ಣಪ್ರಸಾದ್ ಒಬ್ಬರು. ಅವರ ಫೇಸ್ಬುಕ್ ಪುಟವನ್ನು ಹಲವಾರು ತಜ್ಞರು ಮತ್ತು ವೈದ್ಯಕೀಯ ವೃತ್ತಿಪರರು ಫಾಲೋ ಮಾಡುತ್ತಿದ್ದಾರೆ. ಕೊವಿಡ್ ಸಂಬಂಧಿತ ಎಲ್ಲ ಮಾಹಿತಿ,ಅಂಕಿ ಅಂಶಗಳು ಇವರ ಪುಟದಲ್ಲಿ ಲಭ್ಯವಾಗಿದ್ದು, ಈ ಪ್ರಯತ್ನಕ್ಕಾಗಿ ದಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಕೃಷ್ಣಪ್ರಸಾದ್ ಅವರನ್ನು ಗೌರವಿಸಿದೆ.
“ನಾನು ಏಪ್ರಿಲ್ 2020 ರಲ್ಲಿ ಹವ್ಯಾಸವಾಗಿ ಸಾಂಕ್ರಾಮಿಕ ರೋಗದ ಬಗ್ಗೆ ಅಂಕಿಅಂಶಗಳನ್ನು ಸಂಗ್ರಹಿಸಲು ಆರಂಭಿಸಿದೆ. ನಂತರ, ನಾನು ಅದರಲ್ಲಿ ಹೆಚ್ಚಿನ ಜನರು ಆಸಕ್ತಿ ಹೊಂದಿದ್ದನ್ನು ಕಂಡುಕೊಂಡೆ. ಹಾಗಾಗಿ ನಾನು ಎಲ್ಲಾ ವಿವರಗಳನ್ನು ತಪ್ಪದೇ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದೆ. ಅಂದಿನಿಂದ ನಾನು 10,800 ಕ್ಕೂ ಹೆಚ್ಚು ಅಪ್‌ಡೇಟ್‌ಗಳನ್ನು ಪೋಸ್ಟ್ ಮಾಡಿದ್ದೇನೆ ಎಂದು ರಾಜ್ಯ ಆರೋಗ್ಯ ಇಲಾಖೆಯಲ್ಲಿ ಜೂನಿಯರ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿರುವ ಕೃಷ್ಣಪ್ರಸಾದ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ವ್ಯಾಕ್ಸಿನೇಷನ್ ಸ್ಲಾಟ್‌ಗಳು, ಹಾಸಿಗೆ ಲಭ್ಯತೆ ಅಥವಾ ಒಟ್ಟು ಪ್ರಕರಣಗಳು ಮತ್ತು ಚೇತರಿಸಿಕೊಂಡ ರೋಗಿಗಳ ಸಂಖ್ಯೆಯಿಂದ, ‘ಒನ್ ಸ್ಟಾಪ್ ಡೆಸ್ಟಿನೇಶನ್’ ರಾಜ್ಯದಲ್ಲಿ ಸಾಂಕ್ರಾಮಿಕ ರೋಗದ ಎಲ್ಲಾ ವಿವರಗಳನ್ನು ಹೊಂದಿದೆ. ಕೃಷ್ಣ ಪ್ರಸಾದ್ ಅವರ ಫೇಸ್ ಬುಕ್ ಪುಟದಲ್ಲಿ ದೇಶ ಮತ್ತು ಪ್ರಪಂಚದಾದ್ಯಂತ ಧನಾತ್ಮಕ ಪ್ರಕರಣಗಳು ಮತ್ತು ಸಾವುಗಳ ವಿವರಗಳನ್ನು ಹೊಂದಿದೆ. ವೆಬ್‌ಪುಟಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರು ಚಂದಾದಾರರಾಗಿದ್ದಾರೆ.
ಸಾಂಕ್ರಾಮಿಕ ರೋಗದ ಬಗ್ಗೆ ಪ್ರಮುಖ ವೈದ್ಯಕೀಯ ನಿಯತಕಾಲಿಕೆಗಳು ಮತ್ತು ಲಭ್ಯವಿರುವ ವೈಜ್ಞಾನಿಕ ಪತ್ರಿಕೆಗಳನ್ನು ಕೃಷ್ಣಪ್ರಸಾದ್ ಸೂಕ್ಷ್ಮವಾಗಿ ಸ್ಕ್ಯಾನ್ ಮಾಡುತ್ತಾರೆ ಮತ್ತು ನವೀಕರಣಗಳನ್ನು ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
“ನನ್ನ ನಿಯಮಿತ ಕೆಲಸವು ಬಹಳಷ್ಟು ಸಮಯವನ್ನು ತೆಗೆದುಕೊಳ್ಳುವುದರಿಂದ, ನಾನು ರಾತ್ರಿ ಹೊತ್ತು ಕೊವಿಡ್ ಅಪ್ ಡೇಟ್ ಹೆಚ್ಚಾಗಿ ಪೋಸ್ಟ್ ಮಾಡುತ್ತೇನೆ. ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ದೇಶ ಮತ್ತು ವಿದೇಶಗಳಿಂದ ಅನೇಕ ವೈದ್ಯಕೀಯ ವೃತ್ತಿಪರರು ಮತ್ತು ಡೇಟಾ ತಜ್ಞರು ನನ್ನನ್ನು ಚೆನ್ನಾಗಿ ಪ್ರೋತ್ಸಾಹಿಸಿದರು. ಇದರಿಂದ ನಾನು ಯಾವುದೇ ವಿತ್ತೀಯ ಲಾಭವನ್ನು ಗಳಿಸುತ್ತಿಲ್ಲ, ಅದನ್ನು ಸಮಾಜದ ಕಡೆಗೆ ನನ್ನ ಕರ್ತವ್ಯವೆಂದು ನಾನು ನೋಡುತ್ತೇನೆ “ಎಂದು 40ರ ಹರೆಯದ ಕೃಷ್ಣ ಪ್ರಸಾದ್ ಹೇಳಿದ್ದಾರೆ. ಆರಂಭದಲ್ಲಿ, ಶಿಕ್ಷಕಿಯಾಗಿರುವ ಪತ್ನಿಸಹಾಯ ಮಾಡಿದರು ಮತ್ತು ಅವರು ಅವರಿಗೆ ಸಾಕಷ್ಟು ಸ್ಫೂರ್ತಿ ತುಂಬಿದರು ಅಂತಾರೆ ಕೃಷ್ಣಪ್ರಸಾದ್.
“ಡೇಟಾ ಅನಾಲಿಸಿಸ್ ನನ್ನ ಹವ್ಯಾಸ. ಎಂಬಿಎ ನಂತರ 10 ವರ್ಷಗಳಿಗೂ ಹೆಚ್ಚು ಕಾಲ ನಾನು ಟಾಟಾ ಮ್ಯೂಚುವಲ್ ಫಂಡ್‌ನಲ್ಲಿ ಕೆಲಸ ಮಾಡಿದ್ದೇನೆ. ಆದರೆ ನಂತರ ಕೆಲವು ಕಾರಣಗಳಿಂದಾಗಿ, ನಾನು ಕೇರಳಕ್ಕೆ ಹೋಗಬೇಕಾಯಿತು. ರಾಜ್ಯ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆ ಪಾಸ್ ಮಾಡಿದ ನಂತರ ಸರ್ಕಾರಿ ಸೇವೆಗೆ ಸೇರಿಕೊಂಡೆ ಎಂದು ಅವರು ಹೇಳಿದರು. ಕೃಷ್ಣಪ್ರಸಾದ್ ಮಾಹಿತಿ ಸಂಗ್ರಹವು ಶ್ರಮದಾಯಕ ಪ್ರಯತ್ನವಾಗಿದೆ ಮತ್ತು ಅದರ ಸತ್ಯಾಸತ್ಯತೆ ಮತ್ತು ನಿಖರತೆಯನ್ನು ಪರಿಶೀಲಿಸುವುದು ಸಮಯ ತೆಗೆದುಕೊಳ್ಳುತ್ತದೆ.
ನಾನು ಎಲ್ಲಾ ವೈದ್ಯಕೀಯ ಸಂಸ್ಥೆಗಳು, ವೈದ್ಯಕೀಯ ನಿಯತಕಾಲಿಕೆಗಳು, ತಜ್ಞರು, ಟ್ವಿಟರ್ ಹ್ಯಾಂಡಲ್‌ಗಳು ಮತ್ತು ಸಂಶೋಧನಾ ಪತ್ರಿಕೆಗಳ ಅಧಿಕೃತ ವೆಬ್‌ಸೈಟ್‌ಗಳನ್ನು ನಿಯಮಿತವಾಗಿ ನೋಡುತ್ತೇನೆ. ಡೇಟಾ, ಸಾಮಾಜಿಕ ಬದ್ಧತೆ ಮತ್ತು ಹವ್ಯಾಸವನ್ನು ವಿಶ್ಲೇಷಿಸುವ ನನ್ನ ಆಸಕ್ತಿ ಎಲ್ಲವೂ ಚೆನ್ನಾಗಿ ಮಿಳಿತವಾಗಿದೆ, ಅನೇಕ ತಜ್ಞರು ಸಹ ತಮ್ಮ ಡೇಟಾವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ, ”ಅವರು ಹೇಳಿದರು. ಕೆಲವು ತುರ್ತು ಕೆಲಸಗಳ ಕಾರಣದಿಂದಾಗಿ ಅವರು ಪೋಸ್ಟ್ ಮಾಡುವುದನ್ನು ನಿಲ್ಲಿಸಿದಾಗ ಹಲವಾರು ಮಂದಿ ವಿಚಾರಿಸಿದ್ದರು. “ಅವರು ಬದ್ಧ ಸಮಾಜ ಸೇವಕರು. ಅವರ ನೀಡಿರುವ ಡೇಟಾವನ್ನು ಚೆನ್ನಾಗಿ ಸಂಶೋಧಿಸಿದ ಮತ್ತು ವಿಶ್ಲೇಷಣೆ ಮಾಡಿರುವುದು. ಅವರು ಸಮಾಜಕ್ಕೆ ಉತ್ತಮ ಸೇವೆಯನ್ನು ಮಾಡುತ್ತಿದ್ದಾರೆ ಮತ್ತು ದಿನಕ್ಕೆ ಹಲವಾರು ಅಪ್‌ಡೇಟ್‌ಗಳನ್ನು ಪೋಸ್ಟ್ ಮಾಡುವುದು ಅರ್ಥಹೀನ ಕೆಲಸವಲ್ಲ ಎಂದು ಸಾರ್ವಜನಿಕ ಆರೋಗ್ಯ ತಜ್ಞ ಡಾ ಪದ್ಮನಾಭ ಶೆಣೈ ಹೇಳಿದರು.
“ಒಬ್ಬ ವ್ಯಕ್ತಿ ಸೇನೆ, ಅವರ ಕೊಡುಗೆ ನಿಜಕ್ಕೂ ಅದ್ಭುತ ಮತ್ತು ಸ್ಫೂರ್ತಿದಾಯಕ” ಎಂದು ವೈದ್ಯಕೀಯ ತಜ್ಞರಾದ ಡಾ ಎನ್ ಎಂ ಅರುಣ್ ಹೇಳಿದರು. ಅವರ ಕೊಡುಗೆಗಾಗಿ ಆಗಸ್ಟ್ 3 ರಂದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅವರನ್ನು ಗೌರವಿಸಿದೆ.
ಇದನ್ನೂ ಓದಿ: ಕೊವಿಡ್ ನಿಯಮಗಳನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ
(Kerala Krishnaprasad’s FB page provides all Covid-related information The Indian Book of Records honoured him )