ಮಾಟ-ಮಂತ್ರದ ವಿಚಾರವಾಗಿ ಕಲಹ, ಪತ್ನಿ ಮೇಲೆ ಬಿಸಿ ಬಿಸಿ ಫಿಶ್ ಕರಿ ಎರಚಿದ ಪತಿ
ಮಾಟ ಮಂತ್ರ(Black Magic)ದ ವಿಚಾರವಾಗಿ ಪತಿ-ಪತ್ನಿ ನಡುವೆ ವಾಗ್ವಾದ ನಡೆದಿದೆ. ಪತಿ ಕೋಪದಲ್ಲಿ ಪತ್ನಿಯ ಮೇಲೆ ಬಿಸಿ ಬಿಸಿ ಫಿಶ್ ಕರಿ ಎರಚಿರುವ ಘಟನೆ ಕೇರಳದ ಕೊಲ್ಲಂನಲ್ಲಿ ವರದಿಯಾಗಿದೆ. ಚಡಯಮಂಗಲಂ ಸಮೀಪದ ವೈಕ್ಕಲ್‌ನ ಸಂತ್ರಸ್ತೆ ರೆಜಿಲಾ ಗಫೂರ್ (36) ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯ ಪತಿ ಸಜೀರ್ ತಲೆಮರೆಸಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಕೊಲ್ಲಂ, ಅಕ್ಟೋಬರ್ 31: ಮಾಟ ಮಂತ್ರ(Black Magic)ದ ವಿಚಾರವಾಗಿ ಪತಿ–ಪತ್ನಿ ನಡುವೆ ವಾಗ್ವಾದ ನಡೆದಿದೆ. ಪತಿ ಕೋಪದಲ್ಲಿ ಪತ್ನಿಯ ಮೇಲೆ ಬಿಸಿ ಬಿಸಿ ಫಿಶ್ ಕರಿ ಎರಚಿರುವ ಘಟನೆ ಕೇರಳದ ಕೊಲ್ಲಂನಲ್ಲಿ ವರದಿಯಾಗಿದೆ. ಚಡಯಮಂಗಲಂ ಸಮೀಪದ ವೈಕ್ಕಲ್‌ನ ಸಂತ್ರಸ್ತೆ ರೆಜಿಲಾ ಗಫೂರ್ (36) ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯ ಪತಿ ಸಜೀರ್ ತಲೆಮರೆಸಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸಜೀರ್ ರೆಜಿಲಾ ಅವರ ಕೂದಲನ್ನು ಸಡಿಲಗೊಳಿಸಿ, ತನ್ನ ಮುಂದೆ ಕುಳಿತು, ಭಸ್ಮ ಹಚ್ಚಿಕೊಳ್ಳುವಂತೆ ಮತ್ತು ಮಾಟಮಂತ್ರ ಮಾಡುವವರು ನೀಡಿದ ಲಾಕೆಟ್ ಧರಿಸುವಂತೆ ಕೇಳಿಕೊಂಡಿದ್ದ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ಆಕೆ ನಿರಾಕರಿಸಿದಾಗ, ಅಡುಗೆಮನೆಯ ಒಲೆ ಮೇಲೆ ಕುದಿಯುತ್ತಿದ್ದ ಫಿಶ್ ಕರಿಯ ಪಾತ್ರೆಯನ್ನು ತೆಗೆದುಕೊಂಡು ಬಂದು ಪತ್ನಿಯ ಮೇಲೆ ಸುರಿದಿದ್ದಾನೆ.
ಆಕೆಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದಿದ್ದಾರೆ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಜೀರ್ ತನ್ನ ಪತ್ನಿಗೆ ದೆವ್ವ ಹಿಡಿದಿದೆ ಎಂದು ಭಾವಿಸಿ, ಈ ಹಿಂದೆ ಹಲವಾರು ಬಾರಿ ಆಕೆಯ ಮೇಲೆ ಹಲ್ಲೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮೊದಲು, ಪತಿ ತನ್ನ ಮೇಲೆ ಹಲ್ಲೆ ನಡೆಸಿದ ನಂತರ ಆಕೆ ಪೊಲೀಸರನ್ನು ಸಂಪರ್ಕಿಸಿದ್ದರು.
ಮತ್ತಷ್ಟು ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾಟ ಮಂತ್ರಗಳ ಕಾಟ! ಭಯಭೀತರಾದ ವಾಹನ ಸವಾರರು
ಆಗ ಆತನಿಗೆ ಎಚ್ಚರಿಕೆ ನೀಡಲಾಗಿದ್ದರೂ, ನಂತರ ಆತ ಮಾಟಮಂತ್ರ ಮಾಡುವವರನ್ನು ಸಂಪರ್ಕಿಸುವುದನ್ನು ಬಿಟ್ಟಿರಲಿಲ್ಲ. ಗಂಡ ತಮ್ಮ ಮಗನ ಮೇಲೂ ಆಗಾಗ ಹಲ್ಲೆ ನಡೆಸುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




