ಕರುಳಿನ ಕಥೆ.. ಇದು ನಿಜಕ್ಕೂ ಹೃದಯವಿದ್ರಾವಕ: ನೀವೇ ಓದಿ ನೋಡಿ
ತಿರುವನಂತಪುರಂ: ಭೂಕುಸಿತದಲ್ಲಿ ಹೆತ್ತ ಮಗನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಪ್ರತಿನಿತ್ಯ ಆತನ ಮೃತದೇಹಕ್ಕಾಗಿ ಘಟನಾಸ್ಥಳದಲ್ಲಿ ಸತತ 40 ದಿನಗಳಿಂದ ಹುಡುಕಾಟ ನಡೆಸುತ್ತಿರುವ ಹೃದಯವಿದ್ರಾವಕ ಘಟನೆ ಕೇರಳದ ಪೆಟ್ಟಿಮುಡಿಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಆಗಸ್ಟ್ನಲ್ಲಿ ಪೆಟ್ಟಿಮುಡಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸುಮಾರು 70 ಜನ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಅದರಲ್ಲಿ ವ್ಯಕ್ತಿಯ 22 ವರ್ಷದ ಮಗನೂ ಸಹ ಒಬ್ಬ. ಹಲವಾರು ದಿನಗಳ ತನಕ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಯುವಕನ ಮೃತದೇಹ ದೊರೆತಿರಲಿಲ್ಲ. ಹಾಗಾಗಿ, ಅಧಿಕಾರಿಗಳು ಶೋಧಕಾರ್ಯವನ್ನು ಸ್ಥಗಿತಗೊಳಿಸಿದ್ದರು. ಹೆತ್ತ ಕರುಳು ಕೇಳಬೇಕಲ್ಲ.. […]
ತಿರುವನಂತಪುರಂ: ಭೂಕುಸಿತದಲ್ಲಿ ಹೆತ್ತ ಮಗನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಪ್ರತಿನಿತ್ಯ ಆತನ ಮೃತದೇಹಕ್ಕಾಗಿ ಘಟನಾಸ್ಥಳದಲ್ಲಿ ಸತತ 40 ದಿನಗಳಿಂದ ಹುಡುಕಾಟ ನಡೆಸುತ್ತಿರುವ ಹೃದಯವಿದ್ರಾವಕ ಘಟನೆ ಕೇರಳದ ಪೆಟ್ಟಿಮುಡಿಯಲ್ಲಿ ಬೆಳಕಿಗೆ ಬಂದಿದೆ.
ಕಳೆದ ಆಗಸ್ಟ್ನಲ್ಲಿ ಪೆಟ್ಟಿಮುಡಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸುಮಾರು 70 ಜನ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಅದರಲ್ಲಿ ವ್ಯಕ್ತಿಯ 22 ವರ್ಷದ ಮಗನೂ ಸಹ ಒಬ್ಬ. ಹಲವಾರು ದಿನಗಳ ತನಕ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಯುವಕನ ಮೃತದೇಹ ದೊರೆತಿರಲಿಲ್ಲ. ಹಾಗಾಗಿ, ಅಧಿಕಾರಿಗಳು ಶೋಧಕಾರ್ಯವನ್ನು ಸ್ಥಗಿತಗೊಳಿಸಿದ್ದರು.
ಹೆತ್ತ ಕರುಳು ಕೇಳಬೇಕಲ್ಲ.. ಆದರೆ, ಹೆತ್ತ ಕರುಳು ಕೇಳಬೇಕಲ್ಲವೇ. ತನ್ನ ಮಗನ ಮೃತದೇಹ ಸಿಗುವವರೆಗೂ ನಾನು ನೆಮ್ಮದಿಯಾಗಿ ನಿದ್ದೆ ಮಾಡೋಕೆ ಆಗುವುದಿಲ್ಲ. ಅವನ ಮೃತದೇಹವಿಲ್ಲದೆ ಅಂತ್ಯಕ್ರಿಯೆ ಮತ್ತು ಇತರೆ ಕಾರ್ಯಗಳನ್ನು ಹೇಗೆ ನೆರವೇರಿಸೋಕೆ ಸಾಧ್ಯ? ಆದ್ದರಿಂದ ನನ್ನ ಮಗನ ಮೃತದೇಹಕ್ಕಾಗಿ ಜನವರಿಯವರೆಗೂ ಶೋಧಕಾರ್ಯ ನಡೆಸುತ್ತೇನೆ ಎಂದು ಆ ವ್ಯಕ್ತಿ ಹೇಳಿದ್ದಾನಂತೆ.. (Image Courtesy: The News Minute)
ಇದೇ ಆ ಘಟನೆ, ಓದಿ ಈ ಬಾರಿಯೂ ಕೇರಳದಲ್ಲಿ ಮಳೆ ಆರ್ಭಟ.. Red Alert ಭೂಕುಸಿತಕ್ಕೆ 13 ಮಂದಿ ಸಾವು