ಶರ್ಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ; ಕೇರಳದ ಹಿರಿಯ ವ್ಯಕ್ತಿ ಪ್ರಾಣಾಪಾಯದಿಂದ ಪಾರು

|

Updated on: May 18, 2023 | 9:08 PM

ಇದ್ದಕ್ಕಿದ್ದಂತೆ ಮೊಬೈಲ್ ಸಿಡಿದು ಬೆಂಕಿ ಹತ್ತಿಕೊಂಡಿದೆ. ಕೂಡಲೇ ಅವರು ಜೇಬಿನಿಂದ ಮೊಬೈಲ್ ಹೊರ ತೆಗೆದು ಬಿಸಾಡಿದ್ದಾರೆ. ಈ ಘಟನೆಯಲ್ಲಿ ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ

ಶರ್ಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ; ಕೇರಳದ ಹಿರಿಯ ವ್ಯಕ್ತಿ ಪ್ರಾಣಾಪಾಯದಿಂದ ಪಾರು
ಶರ್ಟ್ ಜೇಬಲ್ಲಿ ಫೋನ್ ಸ್ಫೋಟ
Follow us on

ಕೇರಳದ(Kerala) ತ್ರಿಶೂರ್ ಜಿಲ್ಲೆಯ 76ರ ಹರೆಯದ ವ್ಯಕ್ತಿಯೊಬ್ಬರ ಶರ್ಟ್ ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್ (Mobile Phone), ಸಿಡಿದು (Phone Blast) ಬೆಂಕಿಹೊತ್ತಿಕೊಂಡಿದೆ. ಹೋಟೆಲ್​​ವೊಂದರಲ್ಲಿ ಕುಳಿತಿದ್ದ ವ್ಯಕ್ತಿ ಶರ್ಟ್ ಜೇಬಿನಲ್ಲಿ ಮೊಬೈಲ್ ಫೋನ್ ಇರಿಸಿದ್ದರು. ಇದ್ದಕ್ಕಿದ್ದಂತೆ ಮೊಬೈಲ್ ಸಿಡಿದು ಬೆಂಕಿ ಹತ್ತಿಕೊಂಡಿದೆ. ಕೂಡಲೇ ಅವರು ಜೇಬಿನಿಂದ ಮೊಬೈಲ್ ಹೊರ ತೆಗೆದು ಬಿಸಾಡಿದ್ದಾರೆ. ಈ ಘಟನೆಯಲ್ಲಿ ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ತ್ರಿಶೂರ್ ಜಿಲ್ಲೆಯ ಮರೋಟ್ಟಿಚಾಲ್ ಪ್ರದೇಶದ ಟೀ ಅಂಗಡಿಯಲ್ಲಿ ಈ ಘಟನೆ ನಡೆದಿದೆ.

ಒಂದು ತಿಂಗಳೊಳಗೆ ರಾಜ್ಯದಲ್ಲಿ ಮೊಬೈಲ್ ಸ್ಫೋಟಗೊಂಡು ಅನಾಹುತ ಸಂಭವಿಸಿದ ಮೂರನೇ ಘಟನೆ ಇದಾಗಿದೆ.


ವರ್ಷದ ಹಿಂದೆ ₹1,000 ನೀಡಿ ಮೊಬೈಲ್ ಖರೀದಿಸಿದ್ದು, ಫೀಚರ್ ಫೋನ್ ಎಂದು ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ. ಇಲ್ಲಿಯವರೆಗೆ, ಸಾಧನದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಅವರು ಹೇಳಿರುವುದಾಗಿ ಜಿಲ್ಲೆಯಲ್ಲಿ ಘಟನೆ ನಡೆದಿರುವ ಒಲ್ಲೂರು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: Fact Check: ಬಿಜೆಪಿ ಧ್ವಜದ ಮೇಲೆ ಗೋಹತ್ಯೆ ಮಾಡಿದ ಫೋಟೋ ಕರ್ನಾಟಕದ್ದು ಅಲ್ಲ, ಮಣಿಪುರದ ಫೋಟೊ ವೈರಲ್

ಕಳೆದ ವಾರ, ಕೋಯಿಕ್ಕೋಡ್ ನಗರದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಪ್ಯಾಂಟ್ ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ವ್ಯಕ್ತಿಯೊಬ್ಬರಿಗೆ ಸುಟ್ಟಗಾಯಗಳಾಗಿತ್ತು. ಅದಕ್ಕೂ ಮೊದಲು ಏಪ್ರಿಲ್ 24 ರಂದು ತ್ರಿಶೂರ್ ಮೂಲದ ಎಂಟು ವರ್ಷದ ಬಾಲಕಿ ತಾನು ಬಳಸುತ್ತಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ಸಾವನ್ನಪ್ಪಿದ್ದಳು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:05 pm, Thu, 18 May 23