ಯುಪಿ, ಮಧ್ಯ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ತೆರಿಗೆ ಮುಕ್ತ ಯಾಕೆ ಎಂಬುದಕ್ಕೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೊಟ್ಟ ಕಾರಣ ಹೀಗಿದೆ
ಎಂಪಿ ಮತ್ತು ಯುಪಿಯಲ್ಲಿ ಬಿಜೆಪಿ ಆಡಳಿತದಲ್ಲಿದೆ. ಅವರು ಭಾರತದ ಕ್ರಾಂತಿಕಾರಿ ವ್ಯಕ್ತಿಗಳಿಗೆ ಸಂಬಂಧಿಸಿದ ಚಲನಚಿತ್ರಗಳನ್ನು ಪ್ರದರ್ಶಿಸುವುದಿಲ್ಲ. ಅವರು 'ದಿ ಕೇರಳ ಸ್ಟೋರಿ' ಮತ್ತು 'ದಿ ಕಾಶ್ಮೀರ ಫೈಲ್ಸ್' ಅನ್ನು ಮಾತ್ರ ಪ್ರದರ್ಶಿಸುತ್ತಾರೆ.
ಸುದೀಪ್ತೋ ಸೇನ್ ಅವರ ವಿವಾದಾತ್ಮಕ ಚಲನಚಿತ್ರ ‘ದಿ ಕೇರಳ ಸ್ಟೋರಿ‘ (The Kerala Story)ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತ ಮಾಡಿದ್ದು ಯಾಕೆ ಎಂಬುದಕ್ಕೆ ಬಂಗಾಳ ಕಾಂಗ್ರೆಸ್ (Congress) ಮುಖ್ಯಸ್ಥ ಅಧೀರ್ ರಂಜನ್ ಚೌಧರಿ (Adhir Ranjan Chowdhury)ಕೆಲವು ಕಾರಣಗಳನ್ನು ಕೊಟ್ಟಿದ್ದಾರೆ. ಆ ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದ್ದು ‘ವಿಭಜಕ ರಾಜಕೀಯ’ದ ಅಜೆಂಡಾದ ಭಾಗವಾಗಿದೆ ಇದು. ಎಂಪಿ ಮತ್ತು ಯುಪಿಯಲ್ಲಿ ಬಿಜೆಪಿ ಆಡಳಿತದಲ್ಲಿದೆ. ಅವರು ಭಾರತದ ಕ್ರಾಂತಿಕಾರಿ ವ್ಯಕ್ತಿಗಳಿಗೆ ಸಂಬಂಧಿಸಿದ ಚಲನಚಿತ್ರಗಳನ್ನು ಪ್ರದರ್ಶಿಸುವುದಿಲ್ಲ. ಅವರು ‘ದಿ ಕೇರಳ ಸ್ಟೋರಿ’ ಮತ್ತು ‘ದಿ ಕಾಶ್ಮೀರ ಫೈಲ್ಸ್’ ಅನ್ನು ಮಾತ್ರ ಪ್ರದರ್ಶಿಸುತ್ತಾರೆ. ಉಚಿತ ಏಕೆಂದರೆ ಅವರು ವಿಭಜಕ ರಾಜಕೀಯ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ದಿ ಕೇರಳ ಸ್ಟೋರಿ’ಯ ಸಾರ್ವಜನಿಕ ಪ್ರದರ್ಶನದ ಮೇಲಿನ ಬಂಗಾಳ ಸರ್ಕಾರದ ನಿಷೇಧವನ್ನು ಸುಪ್ರೀಂ ಕೋರ್ಟ್ ತಡೆಹಿಡಿದ ಬೆನ್ನಲ್ಲೇ ಚೌಧರಿ ಈ ರೀತಿ ಹೇಳಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಅನುಮತಿ ದೊರೆತಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದು ಚುನಾಯಿತ ರಾಜ್ಯ ಸರ್ಕಾರದ ಕರ್ತವ್ಯ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
‘The Kerala Story’ is tax-free in M.P. & U.P. because those states are governed by BJP. They won’t show films related to the revolutionary personalities of India. They will only showcase ‘The Kerala Story’ and ‘The Kashmir Files’ free of cost because then they will be able to do… pic.twitter.com/dnMSZFgfVQ
— ANI (@ANI) May 18, 2023
ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯಿಸಿದ ಬಂಗಾಳದ ಮಹಿಳಾ ಮತ್ತು ಸಮಾಜ ಕಲ್ಯಾಣ ಸಚಿವ ಶಶಿ ಪಂಜಾ, ಸುಪ್ರೀಂಕೋರ್ಟ್ ತನ್ನ ಅವಲೋಕನವನ್ನು ನೀಡಿದೆ, ನಂತರ ಸಿಎಂ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಅವರು ಹೇಳುತ್ತಾರೆ ಆದರೆ ಯಾವುದೇ ಸಮುದಾಯಕ್ಕೆ ನೋವಾಗಬಾರದು ಎಂಬುದು ಅವರ ಉದ್ದೇಶವಾಗಿತ್ತು.ಯಾವುದೇ ಸಮುದಾಯವನ್ನು ನೋಯಿಸಿದರೆ ಮತ್ತು ಪ್ರತಿಕ್ರಿಯಿಸಿದರೆ, ಯಾವುದೇ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಗೆ ಭಂಗ ಉಂಟಾದರೆ ಇದಕ್ಕಾಗಿ ಅವರು ಈ ತೀರ್ಮಾನ ಕೈಗೊಂಡರು ಎಂದಿದ್ದಾರೆ.
ಇದನ್ನೂ ಓದಿ: The Kerala Story: ಬಂಗಾಳದಲ್ಲಿ “ದಿ ಕೇರಳ ಸ್ಟೋರಿ” ಸಿನಿಮಾ ನಿಷೇಧಕ್ಕೆ ಸುಪ್ರೀಂ ತಡೆ
ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಬ್ಯಾನ್ ಯಾಕೆ?
ರಾಜ್ಯದ ಯಾವುದೇ ಚಿತ್ರಮಂದಿರಲ್ಲೂ ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನ ಆಗಬಾರದು ಎಂದು ಆದೇಶಿಸಲಾಗಿದೆ. ‘ಶಾಂತಿ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದ್ವೇಷ ಮತ್ತು ಹಿಂಸೆ ಹರಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎಂದು ವರದಿ ಆಗಿದೆ. ಸುದೀಪ್ತೋ ಸೇನ್ ನಿರ್ದೇಶನದ ಈ ಸಿನಿಮಾದಲ್ಲಿ ಅದಾ ಶರ್ಮಾ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಲವ್ ಜಿಹಾದ್ ಕುರಿತು ಈ ಸಿನಿಮಾದಲ್ಲಿ ತೋರಿಸಲಾಗಿದೆ.
‘ದಿ ಕೇರಳ ಸ್ಟೋರಿ’ ಸಿನಿಮಾದ ಟೀಸರ್ ರಿಲೀಸ್ ಆದಾಗಲೇ ವಿವಾದ ಶುರುವಾಗಿತ್ತು. ಟ್ರೇಲರ್ ಕೂಡ ವಿವಾದಕ್ಕೆ ಕಾರಣ ಆಗಿತ್ತು. ಈ ಸಿನಿಮಾದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ಗೆ ಕೇರಳ ಸರ್ಕಾರ ಮನವಿ ಮಾಡಿತ್ತು. ಆದರೆ ಆ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಮೇ 5ರಂದು ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:57 pm, Thu, 18 May 23