ಮೊಬೈಲ್ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ಜೀವ ಬೆದರಿಕೆ ಹಾಕಿದ ವಿದ್ಯಾರ್ಥಿ

ಮೊಬೈಲ್ ವಶಪಡಿಸಿಕೊಂಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಶಿಕ್ಷಕರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಕೇರಳದ ಪಾಲಕ್ಕಾಡ್​ನಲ್ಲಿ ನಡೆದಿದೆ. ವಿದ್ಯಾರ್ಥಿ ತರಗತಿಯಲ್ಲಿ ಮೊಬೈಲ್ ಬಳಕೆ ಮಾಡಿ ಶಾಲಾ ನಿಯಮಗಳನ್ನು ಉಲ್ಲಂಘಿಸಿದ ಘಟನೆ ನಡೆದಿದೆ. ಶಾಲೆಯು ಕಟ್ಟುನಿಟ್ಟಾದ ನೋ-ಫೋನ್ ನೀತಿಯನ್ನು ಹೊಂದಿದೆ. ಮತ್ತು ಫೋನ್ ವಶಪಡಿಸಿಕೊಂಡಿದ್ದಕ್ಕಾಗಿ ಶಿಕ್ಷಕರ ಕ್ರಮದ ವಿರುದ್ಧ ವಿದ್ಯಾರ್ಥಿ ಆಕ್ರೋಶಗೊಂಡಿದ್ದ.

ಮೊಬೈಲ್ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ಜೀವ ಬೆದರಿಕೆ ಹಾಕಿದ ವಿದ್ಯಾರ್ಥಿ
ಮೊಬೈಲ್ -ವಿದ್ಯಾರ್ಥಿ
Image Credit source: Guardian

Updated on: Jan 22, 2025 | 9:35 AM

ಸಾಮಾನ್ಯವಾಗಿ ಯಾವ ಶಾಲೆಗಳಲ್ಲೂ ಮೊಬೈಲ್​ಗಳೊಟ್ಟಿಗೆ ಮಕ್ಕಳು ಬರುವಂತಿಲ್ಲ, ಅದನ್ನು ವಶಪಡಿಸಿಕೊಂಡು ಪೋಷಕರಿಗೆ ಕರೆ ಮಾಡಿ ಎಚ್ಚರಿಕೆ ನೀಡಲಾಗುತ್ತದೆ. ಯಾಕೆಂದರೆ ಮಕ್ಕಳು ಮೊಬೈಲ್​ ಕಡೆಗೆ ಗಮನ ಕೊಟ್ಟರೆ ವಿದ್ಯಾಭ್ಯಾಸದಲ್ಲಿ ಹಿಂದುಳಿಯಬೇಕಾಗುತ್ತದೆ. ಹೀಗಾಗಿ ಶಾಲೆ ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಆದರೆ ಮಕ್ಕಳು ಮೊಬೈಲ್​ಗಳನ್ನು ತೆಗೆದುಕೊಂಡು ಶಿಕ್ಷಕರ ಬಳಿ ಸಿಕ್ಕಿಬೀಳುವ ಪ್ರಕರಣಗಳೂ ಹೆಚ್ಚಾಗಿದೆ.

ಅದು ಇದು ಸಬೂಬು ಹೇಳಿ ಅವರಿಂದ ಮೊಬೈಲ್ ವಾಪಸ್ ಪಡೆಯುವುದು ಹೇಗೆ ಎಂಬುದನ್ನು ನೋಡುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಶಿಕ್ಷಕರಿಗೇ ಜೀವ ಬೆದರಿಕೆಯೊಡ್ಡಿದ್ದಾರೆ.

ಮೊಬೈಲ್ ವಶಪಡಿಸಿಕೊಂಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಶಿಕ್ಷಕರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಕೇರಳದ ಪಾಲಕ್ಕಾಡ್​ನಲ್ಲಿ ನಡೆದಿದೆ. ವಿದ್ಯಾರ್ಥಿ ತರಗತಿಯಲ್ಲಿ ಮೊಬೈಲ್ ಬಳಕೆ ಮಾಡಿ ಶಾಲಾ ನಿಯಮಗಳನ್ನು ಉಲ್ಲಂಘಿಸಿದ ಘಟನೆ ನಡೆದಿದೆ. ಶಾಲೆಯು ಕಟ್ಟುನಿಟ್ಟಾದ ನೋ-ಫೋನ್ ನೀತಿಯನ್ನು ಹೊಂದಿದೆ. ಮತ್ತು ಫೋನ್ ವಶಪಡಿಸಿಕೊಂಡಿದ್ದಕ್ಕಾಗಿ ಶಿಕ್ಷಕರ ಕ್ರಮದ ವಿರುದ್ಧ ವಿದ್ಯಾರ್ಥಿ ಆಕ್ರೋಶಗೊಂಡಿದ್ದ.

ಮತ್ತಷ್ಟು ಓದಿ: ಹಣಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ, ಗುತ್ತಿಗೆದಾರ ಆತ್ಮಹತ್ಯೆ!

ವಿದ್ಯಾರ್ಥಿಯು ತನ್ನ ಫೋನ್ ತೆಗೆದುಕೊಂಡಾಗ ಆರಂಭದಲ್ಲಿ ಗಲಾಟೆ ಮಾಡಿದ್ದಾನೆ. ನಂತರ ಆತನನ್ನು ಪ್ರಾಂಶುಪಾಲರ ಕಚೇರಿಗೆ ಕರೆಸಿಕೊಂಡು, ಶಾಲೆಯಿಂದ ಹೊರಗೆ ಕಾಲಿಟ್ಟರೆ ತನಗೆ ಕೊಲೆ ಮಾಡುವುದಾಗಿ ಹೇಳಿ ಶಿಕ್ಷಕರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆ ಶುಕ್ರವಾರ ನಡೆದಿದ್ದು, ಶಿಕ್ಷಕರು ಇದುವರೆಗೆ ಯಾವುದೇ ದೂರು ದಾಖಲಿಸಿಲ್ಲ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us