ಕೇರಳ: ಚಲಿಸುತ್ತಿರುವ ರೈಲಿನಿಂದ ಟಿಟಿಇಯನ್ನು ತಳ್ಳಿದ್ದ ವ್ಯಕ್ತಿಯ ಬಂಧನ
ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಚಲಿಸುತ್ತಿರುವ ರೈಲಿನಿಂದ ಟಿಟಿಇಯನ್ನು ತಳ್ಳಿರುವ ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಇದರ ಪರಿಣಾಮ ಟಿಟಿಇ ಸಾವನ್ನಪ್ಪಿದ್ದಾರೆ, ಪಾಟ್ನಾ ಸೂಪರ್‌ಫಾಸ್ಟ್ ರೈಲಿನ ಕೋಚ್ ಸಂಖ್ಯೆ ಎಸ್11ರಲ್ಲಿ ಟಿಟಿಇ ವಿನೋದ್ ಕುಮಾರ್ ಟಿಕೆಟ್ ಪರಿಶೀಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಆಗ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕನೊಬ್ಬ ವಿನೋದ್ ಅವರನ್ನು ತಳ್ಳಿದ್ದಾನೆ, ಆತನನ್ನು ಪಾಲಕ್ಕಾಡ್ನಲ್ಲಿ ವಶಕ್ಕೆ ಪಡೆಯಲಾಗಿದೆ.

ಟಿಕೆಟ್ ಕೇಳಿದಾಗ ಆರೋಪಿ ಟಿಟಿಇಯನ್ನು ರೈಲಿನಿಂದ ತಳ್ಳಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭಿಸಿದ ರೈಲ್ವೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರೈಲು ಪ್ರಯಾಣಿಕರ ಹೇಳಿಕೆಗಳ ಪ್ರಕಾರ, ಆರೋಪಿಗಳು ತ್ರಿಶೂರ್‌ನಿಂದ ಸೂಪರ್‌ಫಾಸ್ಟ್ ರೈಲಿನ ಸ್ಲೀಪರ್ ಕೋಚ್ಗೆ ಮದ್ಯಪಾನ ಮಾಡಿ ಹತ್ತಿದ್ದ.
ಕಾಯ್ದಿರಿಸಿದ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಕಾರಣ ಪಾವತಿಸಬೇಕಾದ ದಂಡದ ಬಗ್ಗೆ ಟಿಟಿಇ ಜತೆಗೆ ಜಗಳವಾಡಿದ್ದ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: Big News: ರೈಲಿನಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಟಿಕೆಟ್ ಬುಕ್ ಮಾಡಬೇಕಾ?; ರೈಲ್ವೆ ಇಲಾಖೆಯ ನಿಯಮ ಹೀಗಿದೆ
ಟಿಟಿಇ ರೈಲ್ವೆ ಹಳಿ ಮೇಲೆ ಬಿದ್ದ ತಕ್ಷಣ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದ ಮತ್ತೊಂದು ರೈಲಿಗೆ ಸಿಲುಕಿ ನುಜ್ಜುಗುಜ್ಜಾಗಿದ್ದಾರೆ. ಎರ್ನಾಕುಲಂ-ಪಾಟ್ನಾ ಎಕ್ಸ್ಪ್ರೆಸ್ ತ್ರಿಶೂರ್ ರೈಲು ನಿಲ್ದಾಣದಿಂದ ಹೊರಟ ಬಳಿಕ ಈ ಘಟನೆ ನಡೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ