ಕೌಟುಂಬಿಕ ದೌರ್ಜನ್ಯ ಬಗ್ಗೆ ಕರೆ ಮಾಡಿ ದೂರು ನೀಡಿದ ಮಹಿಳೆಯಲ್ಲಿ ‘ಹಾಗಾದರೆ ನೀನು ಸಹಿಸಿಕೊಂಡಿರು’ ಎಂದು ಉತ್ತರಿಸಿದ ಕೇರಳದ ಮಹಿಳಾ ಆಯೋಗದ ಅಧ್ಯಕ್ಷೆ

MC Josephine: ಸುದ್ದಿ ವಾಹಿನಿಯೊಂದರ ಲೈವ್ ಫೋನ್ ಇನ್ ಕಾರ್ಯಕ್ರಮದಲ್ಲಿ ಎರ್ನಾಕುಲಂ ಜಿಲ್ಲೆಯಿಂದ ಕರೆ ಮಾಡಿದ ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಅತ್ತೆ ನನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಅವಲತ್ತುಕೊಂಡಿದ್ದಾರೆ. ಹೀಗಿರುವಾಗ ಪೊಲೀಸರಿಗೆ ಯಾಕೆ ದೂರು ನೀಡಿಲ್ಲ? ಎಂದು ಜೋಸೆಫೀನ್ ಆಕೆಯಲ್ಲಿ ಕೇಳಿದಾಗ, ಅವರು ಯಾರಿಗೂ ಹೇಳಲಿಲ್ಲ ಎಂದು ಆ ಮಹಿಳೆ ಉತ್ತರಿಸಿದ್ದಾರೆ.

ಕೌಟುಂಬಿಕ ದೌರ್ಜನ್ಯ ಬಗ್ಗೆ ಕರೆ ಮಾಡಿ ದೂರು ನೀಡಿದ ಮಹಿಳೆಯಲ್ಲಿ ‘ಹಾಗಾದರೆ ನೀನು ಸಹಿಸಿಕೊಂಡಿರು’ ಎಂದು ಉತ್ತರಿಸಿದ ಕೇರಳದ ಮಹಿಳಾ ಆಯೋಗದ ಅಧ್ಯಕ್ಷೆ
ಜೋಸೆಫೈನ್
Edited By:

Updated on: Jun 25, 2021 | 5:35 PM

ಕೊಚ್ಚಿ : ಕೇರಳದ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ ಜೋಸೆಫೈನ್ ಕೌಟುಂಬಿಕ ಹಿಂಸೆಗೊಳಗಾಗಿರವ ಮಹಿಳೆಯಿಂದ ದೂರು ಆಲಿಸುತ್ತಿರುವಾಗ ಒರಟಾಗಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಳಲ್ಲಿ ವೈರಲ್ ಆಗಿದ್ದು ಜೋಸೆಫೀನ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೋರಮ ನ್ಯೂಸ್ ಲೈವ್ ಫೋನ್ ಇನ್ ಕಾರ್ಯಕ್ರಮದಲ್ಲಿ ಎರ್ನಾಕುಲಂ ಜಿಲ್ಲೆಯಿಂದ ಕರೆ ಮಾಡಿದ ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಅತ್ತೆ ನನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಅವಲತ್ತುಕೊಂಡಿದ್ದಾರೆ. ಹೀಗಿರುವಾಗ ಪೊಲೀಸರಿಗೆ ಯಾಕೆ ದೂರು ನೀಡಿಲ್ಲ? ಎಂದು ಜೋಸೆಫೈನ್ ಆಕೆಯಲ್ಲಿ ಕೇಳಿದಾಗ, ಅವರು ಯಾರಿಗೂ ಹೇಳಲಿಲ್ಲ ಎಂದು ಆ ಮಹಿಳೆ ಉತ್ತರಿಸಿದ್ದಾರೆ. ಮಹಿಳೆಯ ಈ ಮಾತನ್ನು ಕೇಳಿದ ಜೋಸೆಫೀನ್ “ಎನ್ನಾ ಪಿನ್ನೆ ಅನುಭವಿಚ್ಚೋ ! (ಓಹ್,ಹಾಗಾದ್ರೆ ಸಹಿಸಿಕೊಂಡಿರು ) ಎಂದಿದ್ದಾರೆ.

ಫೋನ್ ಇನ್ ಕಾರ್ಯಕ್ರಮದುದ್ದಕ್ಕೂ ಮಹಿಳಾ ಆಯೋಗದ ಮುಖ್ಯಸ್ಥರು ಕರೆ ಮಾಡುತ್ತಿರುವ ಮಹಿಳೆಯರಿಗೆ ಒರಟಾಗಿ,ಮನಸ್ಸಿಲ್ಲದ ಮನಸ್ಸಲ್ಲಿ ಉತ್ತರಿಸುತ್ತಿದ್ದರು. ಸರಿಯಾಗಿ ಆಲಿಸುವ ಮನಸ್ಥಿತಿಯೂ ಅವರಿಗಿರಲಿಲ್ಲ ಎಂಬಂತಿತ್ತು ಅವರ ಹಾವಭಾವ. ಕೌಟುಂಬಿಕ ಹಿಂಸೆ ಬಗ್ಗೆ ಕುಟುಂಬದ ನ್ಯಾಯಾಲಯಕ್ಕೆ ಸಮೀಪಿಸುವಂತೆ ದೂರುದಾರರಿಗೆ ಸಲಹೆ ನೀಡಿದ ಜೋಸೆಫೈನ್ ಇದರಿಂದಾಗಿ ತನ್ನ ಕುಟುಂಬವನ್ನು ಸರಿದೂಗಿಸಬಹುದು ಎಂದಿದ್ದಾರೆ. “ನಾನು ಹೇಳಿದ್ದನ್ನು ನೀವು ಅರ್ಥಮಾಡಿಕೊಂಡಿದ್ದೀರಾ? ನಿಮ್ಮ ಪತಿಯೊಂದಿಗೆ ನೀವು ವಾಸಿಸಲು ಬಯಸದಿದ್ದರೆ, ನೀವು ಉತ್ತಮ ವಕೀಲರನ್ನು ಸಂಪರ್ಕಿಸಿ ವರದಕ್ಷಿಣೆ ಹಿಂಪಡೆಯಬೇಕು ಪರಿಹಾರವನ್ನು ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿ ಎಂದು ಹೇಳಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಮತ್ತೊಂದು ಕರೆ ಸ್ವೀಕರಿಸಿ ಮಾತನಾಡಿದ ಜೋಸೆಫೈನ್, “ನೀವು ಮಾಡಿದ್ದು ಮೂರ್ಖತನ. ನೀವು ಬೇರೆ ಬೇರೆ ಆದ ನಂತರ ನಂತರ, ನೀವು ಯಾಕೆ ರಾಜಿಯಾಲು ಹೋಗಿದ್ದು? ನಿಮಗೊಂದ ಮಗು ಇದೆ. ನನಗೆ ಮಾತನಾಡಲು ಬಿಡಿ. ನೀವು ಮಾತನಾಡುತ್ತಾ ಹೋಗ್ತೀರಿ. ಎಲ್ಲ ತಪ್ಪುಗಳನ್ನು ಮಾಡುತ್ತಿರುವವರು ಮಹಿಳೆಯರೇ ಎಂದು ಗೊಣಗಿದ್ದಾರೆ.

ಈ ರೀತಿ ಪ್ರತಿಕ್ರಿಯಿಸಿದ ಬಗ್ಗೆ ವಾಹಿನಿಯ ಪತ್ರಕರ್ತೆ ಜೋಸೆಫೈನ್ ಅವರಲ್ಲಿ ಕೇಳಿದಾಗ ಮೊದಲು ಪ್ರತಿಕ್ರಿಯಿಸಲು ನಿರಾಕರಿಸಿದರು. ಆಮೇಲೆ ನಾನು ಯಾವ ಕೆಟ್ಟ ಪದಗಳಿಂದ ಬೈದಿಲ್ಲ. ಪೊಲೀಸರಿಗೆ ದೂರು ನೀಡಬೇಕಿತ್ತು ಎಂದಷ್ಟೇ ನಾನು ಹೇಳಿದೆ ಎಂದಿದ್ದಾರೆ.

ಜೋಸೆಫೈನ್ ಅವರ ಪ್ರತಿಕ್ರಿಯೆಗಳನ್ನು ಖಂಡಿಸಿ ತನ್ನ ಹಲವಾರು ರಾಜಕೀಯ ಮುಖಂಡರು ಜೋಸೆಫೈನ್ ಅವರನ್ನು ಆ ಹುದ್ದೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು. ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಶಾಫಿ ಪರಂಬಿಲ್ ಜೋಸೆಫೈನ್ ಅವರನ್ನು ಮಹಿಳಾ ವಿರೋಧಿ ಆಯೋಗದ ಮುಖ್ಯಸ್ಥರಾಗಿ ನೇಮಕ ಮಾಡಬೇಕು” ಎಂದಿದ್ದಾರೆ.


ವಡಕರ ಶಾಸಕಿ ಮತ್ತು ಆರ್ ಎಂಪಿ ನಾಯಕಿ ಕೆ.ಕೆ. ರೆಮಾ “ಅವರು ಸೊಕ್ಕಿನ ಮತ್ತು ಅಸಂವೇದನೆಯಿಂದ ಸ್ಮ್ಯಾಕ್ ಮಾಡುವ ಧ್ವನಿಯಲ್ಲಿಯೇ ಮಾತನಾಡಿದರು. ಇದರಿಂದ ಸಂತ್ರಸ್ತರಿಗೆ ಯಾವುದೇ ಪರಿಹಾರ ಅಥವಾ ಬೆಂಬಲ ಸಿಗಲಾರದು. ಆಕೆ ವಹಿಸಿರುವ ಹುದ್ದೆಯ ಪಾವಿತ್ರ್ಯತೆಗೆ ಇದು ಚ್ಯುತಿಯುಂಟು ಮಾಡುತ್ತದೆ ಎಂದಿದ್ದಾರೆ.
ಸಿಪಿಎಂ ಸೆಂಟ್ರಲ್ ಕಮಿಟಿ ಸದಸ್ಯ ಪಿಕೆ ಶ್ರೀಮತಿ ಅವರು ಜೋಸೆಫೈನ್ ಖಂಡಿತವಾಗಿ ಸ್ಪಷ್ಟೀಕರಣ ಮತ್ತು ವಿವರಣೆ ನೀಡಬೇಕು ಎಂದು ಹೇಳಿದರು.

“ಕೇರಳದ ಮಹಿಳೆಯರು ತನ್ನ ಸವಲತ್ತುಗಳ ಅಹಂಕಾರದಿಂದ ಅಸಹಾಯಕ ಯುವತಿಯರಿಗೆ ಪ್ರತಿಕ್ರಿಯಿಸುವ ವ್ಯಕ್ತಿಯನ್ನು ಏಕೆ ಸಹಿಸಬೇಕು ಎಂದು ಕವಿ ದೀಪಾ ನಿಶಾಂತ್ ಫೇಸ್ಬುಕ್ ನಲ್ಲಿ ಬರೆದಿದ್ದಾರೆ .
ಸಿಪಿಎಂನ ಕೇಂದ್ರ ಸಮಿತಿಯ ಸದಸ್ಯರಾಗಿದ್ದ ಜೋಸೆಫೈನ್ ಅವರು ಈ ರೀತಿ ವಿವಾದಕ್ಕೀಡಾಗಿರುವುದು ಇದೇ ಮೊದಲ ಬಾರಿ ಅಲ್ಲ. ಕಳೆದ ವರ್ಷ, ಸಿಪಿಎಂ ನಾಯಕರ ವಿರುದ್ಧ ಪ್ರಕರಣಗಳ ಮೇಲೆ ಕಮಿಷನ್ ನಿಲುವು ಕುರಿತು ವರದಿಗಾರರಿಂದ ಪ್ರಶ್ನಿಸಿದಾಗ, ಜೋಸೆಫೀನ್ ತನ್ನ ಪಕ್ಷವು ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಈ ಹೇಳಿಕೆಯನ್ನು ಕಾಂಗ್ರೆಸ್ ಮತ್ತು ಇತರ ಪಕ್ಷಗಳು ವ್ಯಾಪಕವಾಗಿ ಖಂಡಿಸಿದ್ದವು.

ಇದನ್ನೂ ಓದಿ:  ಸೈಕಲ್​ ಹತ್ತಿ ಬ್ರೆಡ್​-ಮೊಟ್ಟೆ​ಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ ಸೋನು ಸೂದ್​! ವಿಡಿಯೋ ನೋಡಿ

Published On - 7:11 pm, Thu, 24 June 21