Faizan Ahmed: ಖರಗ್‌ಪುರದ ಐಐಟಿ ವಿದ್ಯಾರ್ಥಿ ಸಾವು ಪ್ರಕರಣ: ಶಂಕಿತರ ಮೇಲೆ ನಾರ್ಕೋ ಪರೀಕ್ಷೆಗೆ ಕಲ್ಕತ್ತಾ ಹೈಕೋರ್ಟ್ ಅನುಮತಿ
ಖರಗ್‌ಪುರದ ಐಐಟಿ ವಿದ್ಯಾರ್ಥಿ ಫೈಜಾನ್ ಅಹ್ಮದ್ ಸಾವಿನ ತನಿಖೆಗೆ ಕಲ್ಕತ್ತಾ ಹೈಕೋರ್ಟ್ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಈ ಪ್ರಕರಣದಲ್ಲಿ ತನಿಖಾ ತಂಡವು ಶಂಕಿತ ವ್ಯಕ್ತಿಗಳನ್ನು ನಾರ್ಕೋ ಪರೀಕ್ಷೆ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.
ಕೋಲ್ಕತ್ತಾ: ಖರಗ್‌ಪುರದ ಐಐಟಿ ವಿದ್ಯಾರ್ಥಿ ಫೈಜಾನ್ ಅಹ್ಮದ್ ಸಾವಿನ ತನಿಖೆಗೆ ಕಲ್ಕತ್ತಾ ಹೈಕೋರ್ಟ್ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಈ ಪ್ರಕರಣದಲ್ಲಿ ತನಿಖಾ ತಂಡವು ಶಂಕಿತ ವ್ಯಕ್ತಿಗಳನ್ನು ನಾರ್ಕೋ ಪರೀಕ್ಷೆ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ. ಫೈಜಾನ್ ಅಹ್ಮದ್ ಅವರ ದೇಹವನ್ನು ಎರಡನೇ ಬಾರಿಗೆ ಶವಪರೀಕ್ಷೆ ಮಾಡಲಾಗಿದ್ದು, ಸಾವಿಗೂ ಮೊದಲು ಉಂಟಾದ ಗಾಯಗಳನ್ನು ತನಿಖೆ ವರದಿಯಲ್ಲಿ ತಿಳಿಸಲಾಗಿದ್ದು, ಇದಕ್ಕೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ನಾರ್ಕೋ ಪರೀಕ್ಷೆ ಒಳಪಡಿಸುವಂತೆ ಕೋರ್ಟ್ ಹೇಳಿದೆ. ಇದು ನರಹತ್ಯೆಯ ಸ್ವರೂಪವಾಗಿದೆ ಎಂದು ಹೇಳಿದೆ.
ಫೈಜಾನ್ ಅವರ ದೇಹವನ್ನು ಸುಮಾರು ಮೂರು ವಾರಗಳ ಹಿಂದೆ ಕಲ್ಕತ್ತಾ ಹೈಕೋರ್ಟ್‌ನ ಆದೇಶದ ಮೇರೆಗೆ ಅಸ್ಸಾಂನಲ್ಲಿ ಎರಡನೇ ಬಾರಿಗೆ ಶವಪರೀಕ್ಷೆಗಾಗಿ ದೇಹ ಹೊರತೆಗೆಯಲಾಯಿತು, ಈ ಬಗ್ಗೆ ನ್ಯಾಯಾಲಯವು ನೇಮಿಸಿದ ತಜ್ಞರ ಪ್ರಕಾರ ತನಿಖೆಯ ಹಲವಾರು ಲೋಪದೋಷಗಳನ್ನು ಎತ್ತಿ ತೋರಿಸಿದ್ದಾರೆ.
ಇದನ್ನೂ ಓದಿ: ಐಐಟಿ ವಿದ್ಯಾರ್ಥಿ ಸಾವು ಪ್ರಕರಣ: ಸಮಾಧಿಯಿಂದ ದೇಹವನ್ನು ಹೊರತೆಗೆದು ಮತ್ತೆ ಮರಣೋತ್ತರ ಪರೀಕ್ಷೆ ನಡೆಸಿ: ಕೋರ್ಟ್
ಮೃತದೇಹವನ್ನು ಪಶ್ಚಿಮ ಬಂಗಾಳ ಪೊಲೀಸರ ತಂಡ ಕೋಲ್ಕತ್ತಾಗೆ ಕೊಂಡೊಯ್ದಿದ್ದು, ನ್ಯಾಯಾಲಯ ನೇಮಿಸಿದ ತಜ್ಞರಿಂದ ಎರಡನೇ ಶವಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ 23 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಾಲೇಜು ಹೇಳಿಕೊಂಡಿತ್ತು. ಆದರೆ ಆತನ ಪೋಷಕರು ಆತನನ್ನು ಕೊಲೆ ಮಾಡಲಾಗಿದೆ ಎಂದು ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಂತರ ಹೈಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿ, ಒಂದು ಸಮಿತಿಯನ್ನು ರಚನೆ ಮಾಡಿ, ಆ ಮೂಲಕ ತನಿಖೆ ನಡೆಸಲು ಆದೇಶವನ್ನು ನೀಡಿತ್ತು. ತನಿಖಾ ತಂಡವು ಕೂಡ ಇದಕ್ಕೆ ಒಪ್ಪಿಗೆ ನೀಡಿತ್ತು, ಮತ್ತೊಮ್ಮೆ ಪ್ರಾಥಮಿಕ ತನಿಖಾ ನಡೆಸಬೇಕು, ಅದಕ್ಕೆ ಮತ್ತೆ ಶವಪರೀಕ್ಷೆ ಮಾಡಬೇಕಿದೆ ಎಂದು ಹೇಳಿತ್ತು. ಇದಕ್ಕೆ ಒಪ್ಪಿದ ಹೈಕೋರ್ಟ್ ಶವವನ್ನು ಸಮಾಧಿಯಿಂದ ಹೊರತೆಗೆಯುವಂತೆ ಆದೇಶವನ್ನು ನೀಡಿತ್ತು.
ಈಗಾಗಲೇ ಅಸ್ಸಾಂನಲ್ಲಿ ಫೈಜಾನ್ ಅಹ್ಮದ್ ಅವರ ದೇಹವನ್ನು ಮುಸ್ಲಿಂ ವಿಧಿವಿಧಾನಗಳ ಪ್ರಕಾರ ಸಮಾಧಿ ಮಾಡಲಾಗಿದೆ. ಫೈಜಾನ್ ಅಹ್ಮದ್ ಅವರ ದೇಹವನ್ನು ಹೊರತೆಗೆಯಲು ಆದೇಶಿಸಿದ ನಂತರ ದೇಹವನ್ನು ಹೊರತೆಗೆಯಲಾಗಿತ್ತು. ಪ್ರಾಥಮಿಕ ತನಿಖೆಯನ್ನು ನಡೆಸಿದ್ದು, ವರದಿಯನ್ನು ಹೈಕೋರ್ಟ್‌ಗೆ ತನಿಖಾ ತಂಡ ಸಲ್ಲಿಸಿದೆ, ಈ ವರದಿ ಆಧಾರದ ಮೇಲೆ ಹೈಕೋರ್ಟ್ ಶಂಕಿತರ ಮೇಲೆ ನಾರ್ಕೋ ಪರೀಕ್ಷೆ ನಡೆಸುವಂತೆ ಅನುಮತಿ ನೀಡಿದೆ. ಇದರ ಜತೆಗೆ ತನಿಖಾಧಿಕಾರಿಗಳು ಅಸ್ಸಾಂ ಪೊಲೀಸರೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Wed, 14 June 23