ಭೂಪಾಲ್: ರಾಮನವಮಿ (Rama Navami) ಆಚರಣೆ ವೇಳೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ (Khargone Clashes) ನಡೆದ ಕೋಮು ಸಂಘರ್ಷದಲ್ಲಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ (Murder) ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಏಪ್ರಿಲ್ 10ರ ರಾತ್ರಿ ಆನಂದ್ ನಗರ-ಕಪಾಸ್ ಮಂಡಿ ಪ್ರದೇಶದಲ್ಲಿ ಇಬ್ರಿಸ್ ಖಾನ್ ಮೇಲೆ ಈ ವ್ಯಕ್ತಿಗಳು ದಾಳಿ ಮಾಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹತ್ಯೆ ಪ್ರಕರಣದಲ್ಲಿ ಬಂಧಿತರಾದವರು ಆನಂದ್ ನಗರ- ರಹೀಂಪುರ ಪ್ರದೇಶದವರು ಎನ್ನಲಾಗಿದೆ. 30 ವರ್ಷದ ಇಬ್ರಿಸ್ ಖಾನ್ ಮುನ್ಸಿಪಲ್ ಉದ್ಯೋಗಿಯಾಗಿದ್ದು, ಏಪ್ರಿಲ್ 10ರಂದು ನಡೆದ ಹಿಂಸಾಚಾರದ ಬಳಿಕ ನಾಪತ್ತೆಯಾಗಿದ್ದರು. ಅದಾದ 8 ದಿನಗಳ ನಂತರ ಖಾರ್ಗೋನ್‌ನಿಂದ 120 ಕಿಮೀ ದೂರದಲ್ಲಿರುವ ಇಂದೋರ್‌ನಲ್ಲಿರುವ ಶವಾಗಾರದಲ್ಲಿ ಅವರ ದೇಹವು ಪತ್ತೆಯಾಗಿತ್ತು.
ಸ್ಥಳೀಯ ಪೊಲೀಸರ ಪ್ರಕಾರ, ಕೋಮು ಸಂಘರ್ಷ ನಡೆದ ರಾತ್ರಿ ಇಬ್ರಿಸ್ ಖಾನ್ ಅವರನ್ನು 7-8 ಜನರು ಕೊಲೆ ಮಾಡಿದ್ದರು. ಮರುದಿನ ಪತ್ತೆಯಾದ ಶವವನ್ನು ಯಾರೂ ಗುರುತಿಸಿರಲಿಲ್ಲ. ಖಾರ್ಗೋನ್‌ನಲ್ಲಿ ಫ್ರೀಜರ್ ಸೌಲಭ್ಯಗಳಿಲ್ಲದ ಕಾರಣ ಇಂದೋರ್ ಶವಾಗಾರಕ್ಕೆ ಕಳುಹಿಸಲಾಗಿತ್ತು.
ಆದರೆ, ಪೊಲೀಸರು ಸಾವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಆತನ ಕುಟುಂಬದವರು ಆರೋಪಿಸಿದ್ದಾರೆ. ಇಬ್ರಿಸ್ ಖಾನ್ ಅವರ ಸಹೋದರ ಇಖ್ಲಾಕ್ ಖಾನ್ ಪೊಲೀಸರು ಇದಕ್ಕೆ ಸಹಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ”ಆನಂದನಗರದ ಜನರು ನನ್ನ ಸಹೋದರನ ಮೇಲೆ ಆಯುಧಗಳಿಂದ ಹಲ್ಲೆ ನಡೆಸಿ ತಲೆಯನ್ನು ಕಲ್ಲಿನಿಂದ ಪುಡಿ ಮಾಡಿದ್ದಾರೆ. ಇದರ ವಿರುದ್ಧ ಮಾಧ್ಯಮದ ಮುಂದೆ ಹೋಗುವುದಾಗಿ ಬೆದರಿಕೆ ಹಾಕಿದ ನಂತರವೇ ಪೊಲೀಸರು ಆತನ ಶವದ ಬಗ್ಗೆ ನಮ್ಮ ಮನೆಯವರಿಗೆ ಮಾಹಿತಿ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ
ಏಪ್ರಿಲ್ 10ರಂದು ರಾಮನವಮಿ ಮೆರವಣಿಗೆಯಲ್ಲಿ ಎರಡು ಗುಂಪುಗಳು ಘರ್ಷಣೆಗೊಂಡಾಗ ಖಾರ್ಗೋನ್‌ನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದರು. ಎರಡೂ ಕಡೆಯಿಂದ ಕಲ್ಲುಗಳನ್ನು ಎಸೆಯಲಾಗಿತ್ತು. ಈ ಘಟನೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ 4 ಜನರು ಗಾಯಗೊಂಡಿದ್ದರು. ಈ ಸಂಘರ್ಷದಲ್ಲಿ ಭಾಗಿಯಾಗಿರುವವರ ಬಗ್ಗೆ ಮಾಹಿತಿ ನೀಡಿದವರಿಗೆ 10,000 ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕೋಮುಗಲಭೆ ಪ್ರಕರಣ; ಗಲಭೆಯ ಮಾಸ್ಟರ್‌ಮೈಂಡ್ ಮೌಲ್ವಿ ವಸೀಂ ಪಠಾಣ್ ಪೊಲೀಸರ ವಶಕ್ಕೆ
ರಾಮನವಮಿ-ಹನುಮಜಯಂತಿ ವೇಳೆ ಕೋಮು ಸಂಘರ್ಷ; ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವಕೀಲ