ಹಾವಿಗಿಂತ ಹೆಚ್ಚು ಮನುಷ್ಯನೇ ವಿಷಕಾರಿಯೇ?, ವ್ಯಕ್ತಿಯನ್ನು ಕಚ್ಚಿದ ಮರುಕ್ಷಣವೇ ಕಾಳಿಂಗಸರ್ಪ ಸಾವು

ವ್ಯಕ್ತಿಯನ್ನು ಕಚ್ಚಿದ ಮರು ಕ್ಷಣವೇ ಹಾವೊಂದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕಾಳಿಂಗಸರ್ಪ ಕಾಣಿಸಿಕೊಂಡಾದ ಉರಗತಜ್ಞರನ್ನು ಕರೆಸಲಾಗಿತ್ತು. ಇನ್ನೇನು ಅದನ್ನು ಚೀಲಕ್ಕೆ ತುಂಬಬೇಕು ಅನ್ನುವಷ್ಟರಲ್ಲಿ ಹಾವು ಕಚ್ಚಿತ್ತು.

ಹಾವಿಗಿಂತ ಹೆಚ್ಚು ಮನುಷ್ಯನೇ ವಿಷಕಾರಿಯೇ?, ವ್ಯಕ್ತಿಯನ್ನು ಕಚ್ಚಿದ ಮರುಕ್ಷಣವೇ ಕಾಳಿಂಗಸರ್ಪ ಸಾವು
ಕಾಳಿಂಗ ಸರ್ಪ
Image Credit source: Roundglass sustain

Updated on: Aug 04, 2024 | 11:21 AM

ಭಾರತದ ಅತ್ಯಂತ ಅಪಾಯಕಾರಿ ಹಾವೆಂದರೆ ಅದು ಕಾಳಿಂಗಸರ್ಪ ಆದರೆ ಈ ಹಾವಿಗಿಂತ ಮನುಷ್ಯನೇ ಹೆಚ್ಚು ವಿಷಯಕಾರಿಯೇ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಮಧ್ಯಪ್ರದೇಶದಲ್ಲಿ ವ್ಯಕ್ತಿಯನ್ನು ಕಚ್ಚಿದ ಮರುಕ್ಷಣವೇ ಕಾಳಿಂಗಸರ್ಪ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು, ಹಾವು ಕಚ್ಚಿದ ಬಳಿಕ ಆ ವ್ಯಕ್ತಿ ಆರೋಗ್ಯವಾಗಿಯೇ ಇದ್ದಾರೆ ಆದರೆ ಹಾವು ಮೃತಪಟ್ಟಿದೆ. ಈ ವಿಚಿತ್ರ ಪ್ರಕರಣವು ಸಾಗರದ ನಾರಾಯಾವಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ.ಕಾಳಿಂಗಸರ್ಪ  ಕಚ್ಚಿದರೆ ವ್ಯಕ್ತಿ ನೀರು ಕೇಳುವಷ್ಟರೊಳಗೆ ವಿಷವು ದೇಹದೊಳಗೆ ಏರುತ್ತದೆ. ಆದರೆ ಈಗ ಹಾವೇ ಸತ್ತಿರುವುದು ಆಚ್ಚರಿಯನ್ನುಂಟು ಮಾಡಿದೆ.

ಸಾಗರ-ಖುರೈ ರಸ್ತೆಯ ನಾರಾಯಣಾವಳಿಯ ಮುಖ್ಯ ರಸ್ತೆಯ ತಡೆಗೋಡೆಯ ಬಳಿ ಕಾಳಿಂಗಸರ್ಪ  ಕಾಣಿಸಿಕೊಂಡಾಗ, ಜನರು ಹಾವು ಹಿಡಿಯುವವ ಚಂದ್ರಕುಮಾರ್ ಅಹಿರ್ವಾರ್ಗೆ ಕರೆ ಮಾಡಿದರು.

ಮತ್ತಷ್ಟು ಓದಿ: ಹಾವು ಕಡಿತ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಸಾಕಾಗುವಷ್ಟು ಔಷಧಿ: ಸಾವನ್ನಪ್ಪುವವರ ಸಂಖ್ಯೆ ಏರಿಕೆ

ಚಂದ್ರಕುಮಾರ್ ಅವರು ಸ್ಥಳಕ್ಕಾಗಮಿಸಿ ಹಾವನ್ನು ಹಿಡಿದರು, ಆದರೆ ರಕ್ಷಣೆಯ ಸಂದರ್ಭದಲ್ಲಿ ಕಾಳಿಂಗಸರ್ಪ ಅವರ ಮೇಲೆ ದಾಳಿ ಮಾಡಿತು ಮತ್ತು ಅವರ ಎರಡು ಕೈಗಳ ಹೆಬ್ಬರನ್ನು ಕಚ್ಚಿದೆ.

ಹಾವು ಕಚ್ಚಿದ ನಂತರ ಮನೆಯವರು ಚಂದ್ರಕುಮಾರ್ ಅವರನ್ನು ಚಿಕಿತ್ಸೆಗಾಗಿ ಭಾಗ್ಯೋದಯ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡ ನಂತರ ಚಂದ್ರಕುಮಾರ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ ಹಾವು ಸತ್ತಿರುವುದು ಕಂಡುಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 11:21 am, Sun, 4 August 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us