Kiren Rijiju: ಅಂತಾರಾಷ್ಟ್ರೀಯ ಪರ್ವತ ದಿನದ ಪ್ರಯುಕ್ತ ಹಿಮದಲ್ಲಿ ಕುದುರೆ ಸವಾರಿ ಮಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು
International Mountain Day: ಅಂತಾರಾಷ್ಟ್ರೀಯ ಪರ್ವತ ದಿನಾಚರಣೆ ಪ್ರಯುಕ್ತ ಲಡಾಖ್ನಲ್ಲಿ ಹಿಮದಲ್ಲಿ ಕುದುರೆ ಸವಾರಿ ಹಾಗೂ ಯಾಕ್ ಮೃಗದ ಸವಾರಿ ಮಾಡಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ವಿಡಿಯೋಗಳು ವೈರಲ್ ಆಗಿವೆ.
ನವದೆಹಲಿ: ಅಂತಾರಾಷ್ಟ್ರೀಯ ಪರ್ವತ ದಿನದಂದು ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ಭಾರತದ ಸುಂದರ ಮತ್ತು ಭವ್ಯವಾದ ಪರ್ವತಗಳನ್ನು ಉಳಿಸಲು ಪ್ರತಿಯೊಬ್ಬರನ್ನು ಒತ್ತಾಯಿಸಿದ್ದಾರೆ. ಬಿಳಿ ಹಿಮದಿಂದ ಆವೃತವಾದ ಪರ್ವತಗಳ ಹಿನ್ನೆಲೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಾವು ಕುದುರೆ ಸವಾರಿ (Horse Riding) ಮಾಡುತ್ತಿರುವ ವೀಡಿಯೊವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಪರ್ವತ ದಿನದ (International Mountain Day) ಅತ್ಯಂತ ವಿಶೇಷ ಸಂದರ್ಭದಲ್ಲಿ, ಸುಂದರವಾದ ಪ್ರಕೃತಿ ಮತ್ತು ಭವ್ಯವಾದ ಪರ್ವತಗಳನ್ನು ಉಳಿಸಲು ಪ್ರತಿಜ್ಞೆ ಮಾಡೋಣ. ಈ ವರ್ಷದ ಥೀಮ್ “ಸಸ್ಟೈನಬಲ್ ಮೌಂಟೇನ್ ಟೂರಿಸಂ” (ಸುಸ್ಥಿರ ಪರ್ವತ ಪ್ರವಾಸೋದ್ಯಮ) ಎಂದು ಸಚಿವ ರಿಜಿಜು ಹೇಳಿದ್ದಾರೆ.
ಕೇಂದ್ರ ಸಚಿವ ಕಿರಣ್ ರಿಜಿಜು ಶೇರ್ ಮಾಡಿರುವ ವಿಡಿಯೋಗೆ ಲಿಂಕ್ ಮಾಡಲಾದ ಮತ್ತೊಂದು ಪೋಸ್ಟ್ನಲ್ಲಿ ಲಡಾಖ್ ಭೇಟಿಯ ಫೋಟೋಗಳನ್ನು ಲಗತ್ತಿಸಲಾಗಿದೆ. ಈ ಫೋಟೋಗಳಲ್ಲಿ ಕಿರಣ್ ರಿಜಿಜು ಯಾಕ್ ಸವಾರಿ ಮಾಡುವುದನ್ನು ಮತ್ತು ಬಿಲ್ಲುಗಾರಿಕೆ ಮಾಡುವುದನ್ನು ತಮ್ಮ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
On the extremely special occasion of #INTERNATIONALMOUNTAINDAY, let’s pledge to save beautiful nature and majestic mountains. This year’s theme is ‘Sustainable Mountain Tourism’.#DekhoApnaDesh #IncredibleIndia #MountainDay #MountainsMatter pic.twitter.com/qBYjS9Duah
— Kiren Rijiju (@KirenRijiju) December 11, 2021
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕಿರಣ್ ರಿಜಿಜು ಈ ಹಿಂದೆ ಕೂಡ ಈ ರೀತಿಯ ಸ್ಫೂರ್ತಿದಾಯಕ ವಿಡಿಯೋಗಳನ್ನು ಪೋಸ್ಟ್ ಮಾಡಿ ಜನರನ್ನು ಪ್ರೇರೇಪಿಸುತ್ತಿದ್ದರು.
Snow Yak riding and horse riding are parts of the Khelo India Winter Sports Festival at Zanskar. Visitors can stay at homestay and local lodge and experience the beauty of Zanskar. The Ladakhi people are full of enthusiasm and welcoming. https://t.co/rTNqONZJrT pic.twitter.com/qywB9m0BNn
— Kiren Rijiju (@KirenRijiju) January 22, 2021
ಕೆಲವು ದಿನಗಳ ಹಿಂದೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅರುಣಾಚಲ ಪ್ರದೇಶಕ್ಕೆ ತೆರಳಿದ್ದರು. ಹಳ್ಳಿಯ ನಿವಾಸಿಗಳು ನೃತ್ಯ ಮಾಡುತ್ತಾ ಅವರನ್ನು ಬರಮಾಡಿಕೊಂಡಿದ್ದರು. ಆ ವೇಳೆ ಹಳ್ಳಿ ಜನರೊಂದಿಗೆ ಕಿರಣ್ ರಿಜಿಜು ಅವರು ಸಹ ನೃತ್ಯ ಮಾಡಿದ್ದರು. ಈ ವಿಡಿಯೋವನ್ನು ಅವರು ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರಧಾನಿ ಮೋದಿ ‘ಒಳ್ಳೆಯ ನೃತ್ಯಗಾರ’ ಎಂದು ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದರು.
During my visit to beautiful Kazalang village to monitor the Vivekananda Kendra Vidyalaya Projects. This is traditional merrymaking of Sajolang people whenever guests visit their village. The original folk songs and dances are the ESSENCE of every community in Arunachal Pradesh. pic.twitter.com/TTxor4nQJF
— Kiren Rijiju (@KirenRijiju) September 29, 2021
ಸಚಿವ ಕಿರಣ್ ರಿಜಿಜು ಅವರು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಆಗಾಗ ಆರೋಗ್ಯ ಸಂಬಂಧಿತ ಹಾಗೂ ಫಿಟ್ನೆಸ್ ಕುರಿತಾದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜತೆಗೆ ಹಾಡುವ ಕೌಶಲ್ಯವನ್ನೂ ಸಹ ಈ ಹಿಂದೆ ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಹಾಗೇ, ಅರುಣಾಚಲ ಪ್ರದೇಶದ ಮೇಲಿನ ಸುಬನ್ಸಿರಿ ಜಿಲ್ಲೆಗೆ ಪ್ರವಾಸ ಮಾಡುವಾಗ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸುಬನ್ಸಿರಿ ನದಿಯ ದಂಡೆಯ ಮಾರದಲ್ಲಿ ಬಿಲ್ಲುಗಾರಿಕೆ ಮತ್ತು ಬೀಚ್ ವಾಲಿಬಾಲ್ ಆಡಿದ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಭರ್ಜರಿ ಡಾನ್ಸ್; ಅದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ ಏನು?
Viral Photo: ಅರುಣಾಚಲ ಪ್ರದೇಶದ ಸಿಎಂ ಜೊತೆ ವಾಲಿಬಾಲ್ ಆಡಿದ ಕೇಂದ್ರ ಸಚಿವ ಕಿರೆಣ್ ರಿಜಿಜು