Kannada News National Kisan Mahapanchayat Haryana Farmers Protest March towards Haryana Mini Secretariat
Haryana: ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ; ಪಾದಯಾತ್ರೆ ಹೊರಟ ರೈತ ಪ್ರತಿಭಟನಾಕಾರರು- ಮುಖ್ಯಾಂಶಗಳು ಇಲ್ಲಿದೆ
Farmers Protest: ಆಗಸ್ಟ್ 28 ರಂದು ನಡೆದ ಲಾಠಿ ಚಾರ್ಜ್ಗೆ ವಿರೋಧ ವ್ಯಕ್ತಪಡಿಸಿ ಈ ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆ ನಿಯಂತ್ರಿಸಲು, ಪ್ರತಿಭಟನಾ ನಿರತ ರೈತರನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ.
ರೈತರ ಸಭೆಯಲ್ಲಿ ಭಾಗವಹಿಸಿದ ರೈತರು
Follow us on
ದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಧರಣಿ ಮುಂದುವರಿಸಿದ್ದಾರೆ. ರೈತರು ಹರ್ಯಾಣದ ಕರ್ನಾಲ್ ಜಿಲ್ಲೆಯ ಗ್ರೈನ್ ಮಾರುಕಟ್ಟೆಯಿಂದ ಜಿಲ್ಲಾ ಅಧಿಕಾರಿಗಳ ಕಡೆಗೆ ಪಾದಯಾತ್ರೆ ಆರಂಭಿಸಿದ್ದಾರೆ. ಆಗಸ್ಟ್ 28 ರಂದು ನಡೆದ ಲಾಠಿ ಚಾರ್ಜ್ಗೆ ವಿರೋಧ ವ್ಯಕ್ತಪಡಿಸಿ ಈ ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆ ನಿಯಂತ್ರಿಸಲು, ಪ್ರತಿಭಟನಾ ನಿರತ ರೈತರನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ. ಈ ಘಟನೆಯ ಬಗೆಗಿನ ಮುಖ್ಯಾಂಶಗಳನ್ನು ಇಲ್ಲಿ ನೀಡಲಾಗಿದೆ.
ಇಂದು 11 ರೈತ ಮುಖಂಡರು ಹಾಗೂ ಜಿಲ್ಲಾ ಅಧಿಕಾರಿಗಳ ನಡುವೆ, ಪಾದಯಾತ್ರೆ ನಡೆಸುವ ಕುರಿತು ನಡೆಸಿದ ಮಾತುಕತೆ ಸಫಲವಾಗಿಲ್ಲ. ರಾಕೇಶ್ ಟಿಕಾಯತ್ ಹಾಗೂ ಯೋಗೇಂದ್ರ ಯಾದವ್ ಕೂಡ ಮಾತುಕತೆಯಲ್ಲಿ ಭಾಗವಹಿಸಿದ್ದರು.
ಈ ಬಗ್ಗೆ ರಾಕೇಶ್ ಟಿಕಾಯತ್ ಇಂದು ಟ್ವೀಟ್ ಮಾಡಿದ್ದರು. ಲಾಠಿ ಚಾರ್ಜ್ನಲ್ಲಿ ಗಾಯಗೊಂಡು ಮೃತಪಟ್ಟಿದ್ದ ಸುಶಿಲ್ ಕಾಜಿಲ ಅವರಿಗೆ ನ್ಯಾಯ ಒದಗಿಸುವ ಸಲುವಾಗಿ ಈ ಮಹಾಪಂಚಾಯತ್ ಹಾಗೂ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದರು. ಆದರೆ, ಪೊಲೀಸರು ಈ ವಾದವನ್ನು ತಿರಸ್ಕರಿಸಿದ್ದಾರೆ. ಬದಲಾಗಿ, ಕಾಜಿಲ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ರೈತರಿಗೆ ಪಾದಯಾತ್ರೆ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾಡಳಿತದವರು ಹೇಳಿಕೆ ನೀಡಿದ್ದಾರೆ. ಹಾಗೂ ಪ್ರತಿಭಟನೆ ತಡೆಯಲು ರಕ್ಷಣಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಹತ್ತಿರದ ಜಿಲ್ಲೆಗಳಿಂದ ಪ್ರಯಾಣ ಬೆಳೆಸುತ್ತಿರುವ ರೈತರನ್ನು ಕೂಡ ತಡೆಯಲಾಗುತ್ತಿದೆ.
ಐದು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಹಾಗೂ ಎಸ್ಎಂಎಸ್ ಸೇವೆಗಳನ್ನು ಅಮಾನತು ಮಾಡಲಾಗಿದೆ. ತುಂಬಾ ಮಂದಿ ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ರಕ್ಷಣಾ ಕಾರ್ಯದ ಉದ್ದೇಶದಿಂದ ಕ್ಯಾಮರಾ ಅಳವಡಿಸಿರುವ ಡ್ರೋನ್ ಹಾರಾಟ ನಡೆಸಲಾಗುವುದು ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ನಿನ್ನೆ ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ರೈತ ಮುಖಂಡರನ್ನು ಕರೆದಿದ್ದರು. ಹಾಗೂ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಸೂಚನೆ ಕೊಟ್ಟಿದ್ದರು. ಅದರಂತೆ ರೈತ ನಾಯಕ ಗುರ್ನಮ್ ಸಿಂಗ್ ಚಡುಣಿ ರೈತರಿಗೆ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಕೇಳಿಕೊಂಡಿದ್ದಾರೆ.
ಸುಮಾರು 40 ರೈತ ಸಂಘಟನೆಗಳ ಒಕ್ಕೂಟ ಆಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಲಾಠಿ ಚಾರ್ಜ್ ಮಾಡಲು ಹೇಳಿರುವ ಅಧಿಕಾರಿಗಳ ವಿರುದ್ಧ ಎಫ್ಐಆರ್ ಮಾಡುವಂತೆ ಆಗ್ರಹಿಸಿದೆ.
ಸಂಯುಕ್ತ ಕಿಸಾನ್ ಮೋರ್ಚಾ, ಪೊಲೀಸರ ನಡೆಯನ್ನು ಖಂಡಿಸಿದೆ. ರೈತರ ತಲೆ ಒಡೆಯಿರಿ ಎಂದು ಹೇಳಿಕೆ ನೀಡಿರುವ ಆರೋಪ ಹೊಂದಿರುವ ಆಯುಶ್ ಸಿನ್ಹಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.
ಅಧಿಕಾರಿಗಳ ಪದಬಳಕೆ ಸರಿ ಇರಲಿಲ್ಲ. ಆದರೆ, ಕಾನೂನು ಪಾಲಿಸಲು ಕಠಿಣ ಕ್ರಮ ಕೈಗೊಳ್ಳುವುದು ಬೇಕಿತ್ತು ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯೋಗೇಂದ್ರ ಯಾದವ್, ಯಾವ ಕಾನೂನು ಮತ್ತೊಬ್ಬರ ತಲೆ ಒಡೆಯುವುದನ್ನು ಹೇಳುತ್ತದೆ ಎಂದು ಪ್ರಶ್ನಿಸಿದ್ದರು.
ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದ ಮೀಟಿಂಗ್ಗೆ ಸುಮಾರು 15 ರಾಜ್ಯಗಳಿಂದ ರೈತ ಹೋರಾಟಗಾರರು ಆಗಮಿಸಿದ್ದಾರೆ. ಹಾಗೂ ಅದು ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ರೈತರ ಶಕ್ತಿ ತಿಳಿಯುವಂತೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.