AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಿಯಾಣ-ದೆಹಲಿ ಗಡಿಯಲ್ಲಿ ಕೈ ಕಡಿದು ವ್ಯಕ್ತಿ ಹತ್ಯೆ, ಸಾರ್ವಜನಿಕ ಪ್ರದರ್ಶನ: ಅಂತರ ಕಾಯ್ದುಕೊಂಡ ಕಿಸಾನ್ ಮೋರ್ಚಾ

ಸಿಖ್ಖರ ಪವಿತ್ರ ಗ್ರಂಥ ‘ಗ್ರಂಥ ಸಾಹಿಬ್​’ಗೆ ಅವಮಾನ ಮಾಡಿದ್ದ ವ್ಯಕ್ತಿಯನ್ನು ಕೊಲ್ಲಲಾಗಿದೆ ಎಂದು ಹೇಳಿಕೊಳ್ಳುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ

ಹರಿಯಾಣ-ದೆಹಲಿ ಗಡಿಯಲ್ಲಿ ಕೈ ಕಡಿದು ವ್ಯಕ್ತಿ ಹತ್ಯೆ, ಸಾರ್ವಜನಿಕ ಪ್ರದರ್ಶನ: ಅಂತರ ಕಾಯ್ದುಕೊಂಡ ಕಿಸಾನ್ ಮೋರ್ಚಾ
ನಿಹಾಂಗ್ ಪಂಥದ ಸಿಖ್ ಮತ್ತು ಮೃತ ವ್ಯಕ್ತಿ
TV9 Web
| Edited By: |

Updated on: Oct 15, 2021 | 3:40 PM

Share

ದೆಹಲಿ: ಹರಿಯಾಣ-ದೆಹಲಿ ಗಡಿಯ ಕುಂಡಲಿ ಎಂಬಲ್ಲಿ ವ್ಯಕ್ತಿಯೊಬ್ಬನ ಕೈ ಕಡಿದು, ನೇಣು ಬಿಗಿದು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಗೆ ಸ್ಪಷ್ಟ ಕಾರಣವನ್ನು ಪೊಲೀಸರು ಈವರೆಗೆ ದೃಢಪಡಿಸಿಲ್ಲ, ಆದರೆ ಸಿಖ್ ಪಂಥ ನಿಹಾಂಗ್​ಗೆ ಸೇರಿದವರು ಈ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸಿಖ್ಖರ ಪವಿತ್ರ ಗ್ರಂಥ ‘ಗ್ರಂಥ ಸಾಹಿಬ್​’ಗೆ ಅವಮಾನ ಮಾಡಿದ್ದ ವ್ಯಕ್ತಿಯನ್ನು ಕೊಲ್ಲಲಾಗಿದೆ ಎಂದು ಹೇಳಿಕೊಳ್ಳುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೊಲೆಯಾದ ವ್ಯಕ್ತಿಯ ಶವವನ್ನು ಹಗ್ಗ ಕಟ್ಟಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ.

ಮೃತನನ್ನು ಚೀಮಾ ಖುರ್ದ್​ ಗ್ರಾಮದ ಲಖಬೀರ್ ಸಿಂಗ್ (36) ಎಂದು ಗುರುತಿಸಲಾಗಿದೆ. ಈತ ಪಂಜಾಬ್​ನ ತರಣ್ ತರಣ್​ ಜಿಲ್ಲೆಯ ಚೀಮಾಖುರ್ದ್​ ಗ್ರಾಮದ ದಲಿತರ ವ್ಯಕ್ತಿ ಹರಿಯಾಣದ​ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಮೃತನ ದೇಹವನ್ನು ಶುಕ್ರವಾರ ಮುಂಜಾನೆ 5 ಗಂಟೆಗೆ ವಶಕ್ಕೆ ತೆಗೆದುಕೊಳ್ಳಲಾಯಿತು. ರೈತ ಚಳವಳಿ ನಡೆಯುತ್ತಿರುವ ಸ್ಥಳದ ಹತ್ತಿರವೇ ಈ ಹತ್ಯೆ ನಡೆದಿದೆ. ತನಿಖೆ ಪ್ರಗತಿಯಲ್ಲಿದ್ದು, ಶಂಕಿತರ ವಿರುದ್ಧ ಕೊಲೆ ಪ್ರಕರಣದ ದಾಖಲಿಸಲಾಗಿದೆ. ವಿಚಾರಣೆಯನ್ನೂ ಆರಂಭಿಸಲಾಗಿದೆ ಎಂದು ರೊಹ್​ತಕ್ ವಲಯದ ಐಜಿಪಿ ಸಂದೀಪ್ ಖಿರ್​ವರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.

ಮೃತ ಲಖ್​ಬಿರ್ ಸಿಂಗ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸೋದರಿ, ಹೆಂಡತಿ ಮತ್ತು ಮೂರು ಹೆಣ್ಣುಮಕ್ಕಳಿದ್ದಾರೆ. ದೊಡ್ಡ ಮಗಳಿಗೆ ಈಗ 12 ವರ್ಷ. ಈ ಭೀಕರ ಹತ್ಯೆಗೆ ಸಿಖ್ಖರಲ್ಲಿ ಯೋಧ ಪಂಥ ಎಂದು ಕರೆಸಿಕೊಳ್ಳುವ ನಿಹಾಂಗ್​ ಪಂಥ ಕಾರಣ ಎಂದು ದೂರಲಾಗಿದೆ. ಕೊಲೆಯ ವಿವರ ತಿಳಿಸುವ ಮೂರು ವಿಡಿಯೊಗಳು ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿವೆ. ಲಖ್​ಬಿರ್ ಸಿಂಗ್​ನ ಮುಂಗೈ ಕಡಿದ ಮೇಲೆ ಆತ ರಕ್ತಸ್ರಾವದಿಂದ ಸುಸ್ತಾಗಿ ಕೆಳಗೆ ಬಿದ್ದ. ನೋವು ಮತ್ತು ಆಘಾತದಿಂದ ಅವನ ಕಣ್ಣುಗುಡ್ಡೆಗಳು ಹೊರಚಾಚಿದ್ದವು. ಆದರೂ ಈಟಿ ಹಿಡಿದ ನಿಹಾಂಗ್​ ಪಂಥೀಯರು ಈತನಿಗೆ ಹೆಸರು ಹೇಳುವಂತೆ ಒತ್ತಾಯಿಸುತ್ತಿದ್ದರು. ಲಖ್​ಬಿರ್ ಸಿಂಗ್​ನನ್ನು ಹಿಂಸಿಸುವ, ಅವನ ಸಾವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿರುವ ದೃಶ್ಯಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ.

ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಈ ಹತ್ಯೆಯನ್ನು ಖಂಡಿಸಿದ್ದು, ಘಟನೆಯಿಂದ ಅಂತರ ಕಾಪಾಡಿಕೊಂಡಿದೆ. ಕಿಸಾನ್ ಮೋರ್ಚಾ ಜೊತೆಗೆ ಮೃತ ವ್ಯಕ್ತಿ ಹಾಗೂ ನಿಹಾಂಗ್ ಗುಂಪು ಯಾವುದೇ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ನಿಹಾಂಗ್ ಗುಂಪು ಹೀಗೆ ಹಿಂಸಾತ್ಮಕವಾಗಿ ವರ್ತಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಪಾಟಿಯಾಲದಲ್ಲಿ ಕೊವಿಡ್ ಲಾಕ್​ಡೌನ್ ವೇಳೆ ಸಂಚರಿಸುತ್ತಿದ್ದವರನ್ನು ತಡೆದು ಪ್ರಶ್ನಿಸಿದ್ದಕ್ಕೆ ನಿಹಾಂಗ್ ಪಂಗಡಕ್ಕೆ ಸೇರಿದ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಯೊಬ್ಬರ ಮುಂಬೈ ಕೊಚ್ಚಿ ಹಾಕಿದ್ದ. ಇದೇ ರೀತಿ ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಈ ಸಮುದಾಯಕ್ಕೆ ಸೇರಿದವರು ಹಿಂಸಾತ್ಮಕವಾಗಿ ವರ್ತಿಸಿದ್ದರು.

ಇದನ್ನೂ ಓದಿ: Lakhimpur Kheri ಲಖಿಂಪುರ್ ಖೇರಿ ರೈತರ ಹತ್ಯೆ: ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಸಚಿವರ ಮಗನನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸ್

ಇದನ್ನೂ ಓದಿ: ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ; ಅದೇ ನನ್ನ ಕೊನೆಯ ಹೋರಾಟ: ಹೆಚ್​ಡಿ ಕುಮಾರಸ್ವಾಮಿ

ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು