ಬರುಯಿಪುರ್: ಗುದದ್ವಾರದ ಮೂಲಕ 6 ಇಂಚಿನ ಮೊಬೈಲ್ ಹಾಕಿದ್ದು ಹೇಗೆ? ಕೈದಿಯ ಉತ್ತರ ಕೇಳಿ ಬೆಚ್ಚಿ ಬಿದ್ದ ಅಧಿಕಾರಿಗಳು
ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ಕೈದಿಯೊಬ್ಬ ಪೊಲೀಸ್ ತಪಾಸಣೆ ವೇಳೆ ಮೊಬೈಲ್ ಫೋನ್ ನ್ನು ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ಪೇಚಿಗೆ ಸಿಲುಕಿದ್ದ. ಹೊಟ್ಟೆನೋವು ಎಂದು ಒದ್ದಾಡಿದ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಶಸ್ತ್ರಚಿಕಿತ್ಸೆ ಮೂಲಕ ಫೋನ್ ಹೊರತೆಗೆಯಲಾಗಿದೆ. ಅದೇನೂ ಸಾದಾ ಫೋನ್ ಅಲ್ಲ. ಆರು ಇಂಜಿನ ಆಂಡ್ರಾಯ್ಡ್ ಫೋನ್!
ಕೋಲ್ಕತ್ತಾ ಫೆಬ್ರುವರಿ 07: ಪಶ್ಚಿಮ ಬಂಗಾಳದಲ್ಲಿ (West bengal) ವೈದ್ಯರು ವ್ಯಕ್ತಿಯೊಬ್ಬನ ಗುದದ್ವಾರದಿಂದ ಫೋನ್ (Mobile) ಹೊರತೆಗೆದಾಗ ಅಚ್ಚರಿ. ಅದು ಸಾದಾ ಫೋನ್ ಅಲ್ಲ, ಅದು 6 ಇಂಚಿನ ಆಂಡ್ರಾಯ್ಡ್ ಮೊಬೈಲ್. ಅದನ್ನು ಗುದದ್ವಾರದ ಮೂಲಕ ದೇಹದೊಳಗೆ ಹಾಕಿದ್ದು ಹೇಗೆ? ಮೂವತ್ತು ವರ್ಷದ ಅಸ್ಲಾಮ್ ಶೇಖ್ ಎಂಬ ಕೈದಿ ಮೊಬೈಲ್ ಫೋನ್‌ನ್ನು ಗುದದ್ವಾರದೊಳಗೆ ಹಾಕಿದ್ದ. ಸ್ವಲ್ಪ ಹೊತ್ತಾದ ಮೇಲೆ ನೋವಿನಿಂದ ಒದ್ದಾಡತೊಡಗಿದ. ಪೊಲೀಸರು (Police) ಆತನನ್ನು ಆಸ್ಪತ್ರೆಗೆ ಸೇರಿಸಿದ್ದು, ಶಸ್ತ್ರ ಚಿಕಿತ್ಸೆ ಮೂಲಕ ಫೋನ್ ಹೊರತೆಗೆಯಲಾಗಿದೆ. ಅಂದಹಾಗೆ ಕೈದಿ ಅಸ್ಲಾಂ ಶೇಖ್(30) ಅನ್ನು ಭಾನುವಾರ ಮಧ್ಯಾಹ್ನ ಬರುಯಿಪುರ ನ್ಯಾಯಾಲಯದಿಂದ ಬರುಯಿಪುರ ಸುಧಾರಣಾ ಸೌಲಭ್ಯಕ್ಕೆ ಕರೆ ತರಲಾಗಿತ್ತು. ಜೈಲಿಗೆ ಬರುವ ಮುನ್ನ ತನ್ನ ಬಳಿ ಮೊಬೈಲ್ ಇಟ್ಟುಕೊಂಡಿದ್ದ ಅಸ್ಲಾಂ. ಆದರೆ ಜೈಲಿನ ಗೇಟ್ ಬಳಿ ಭದ್ರತಾ ತಪಾಸಣೆ ಕಂಡು ಭಯಭೀತನಾದ ಆತ ಗುದದ್ವಾರದೊಳಗೆ ಮೊಬೈಲ್ ಬಚ್ಚಿಟ್ಟಿದ್ದಾನೆ.
ನೋವಿನಿಂದ ಒದ್ದಾಡುತ್ತಿದ್ದ ಆತನನ್ನು ಜೈಲು ಅಧಿಕಾರಿಗಳು ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರ ಚಿಕಿತ್ಸೆ ಮೂಲಕ ಮೊಬೈಲ್ ಫೋನ್ ಹೊರತೆಗೆಯಲಾಗಿದೆ. ವೈದ್ಯರ ಪ್ರಕಾರ, ಈ ಮೊಬೈಲ್ ಫೋನ್ ಸೊಂಟದ ಬಳಿ ಎರಡು ದೊಡ್ಡ ಮೂಳೆಗಳಿಗೆ ಅಂಟಿಕೊಂಡಿತ್ತು.ಇದು ದೊಡ್ಡ ಸ್ಮಾರ್ಟ್ ಆಂಡ್ರಾಯ್ಡ್ ಫೋನ್. ಶಸ್ತ್ರಚಿಕಿತ್ಸೆ ನಂತರ ಅಸ್ಲಾಂ ಮಂಗಳವಾರ ಸುಧಾರಣಾ ಕೇಂದ್ರಕ್ಕೆ ಮರಳಿದ್ದಾನೆ.ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಅಸ್ಲಂ ಶೇಖ್ ವಿರುದ್ಧ ದೂರು ದಾಖಲಾಗಿದ್ದು , ಫೋನ್ ಪೊಲೀಸರ ವಶದಲ್ಲಿದೆ.
ಮೊಬೈಲ್ ಫೋನ್ ಹೊರತೆಗೆಯುವ ಪ್ರಯತ್ನದಲ್ಲಿ ಅಸ್ಲಾಂಗೆ ಸುಮಾರು ಬಾಳೆಹಣ್ಣುಗಳನ್ನು ತಿನ್ನಿಸಲಾಯಿತು. ಆದರೆ ಆ ಪ್ರಯತ್ನ ವಿಫಲವಾಯಿತು. ಆ ನಂತರ ಅಸ್ಲಾಂನ್ನು ಬರುಯಿಪುರ ರಾಜ್ಯ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಯೂ ವೈದ್ಯರು ಪ್ರಯತ್ನಿಸಿದರೂ ಮೊಬೈಲ್ ತೆಗೆಯಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Viral News: ಗುದದ್ವಾರದಲ್ಲಿ ಮೊಬೈಲ್ ಅಡಗಿಸಿಟ್ಟು ಪೇಚಾಟಕ್ಕೆ ಸಿಲುಕಿದ ಖೈದಿ
ನಂತರ ಆತನನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಸೊಂಟದ ಎರಡು ದೊಡ್ಡ ಮೂಳೆಗಳ ನಡುವೆ ಮೊಬೈಲ್ ಸಿಕ್ಕಿಹಾಕಿಕೊಂಡಿತ್ತು. ಈತ ಗುದದ್ವಾರದಲ್ಲಿ ಇಷ್ಟು ದೊಡ್ಡ ಮೊಬೈಲ್ ಫೋನ್ ನ್ನು ಹೇಗೆ ಹಾಕಿದ ಎಂದು ವೈದ್ಯರಿಗೂ ಅಚ್ಚರಿ. ಇದಕ್ಕೆ ಅಸ್ಲಾಂ ಉತ್ತರಿಸಿದ್ದಾನೆ. ಟಾಯ್ಲೆಟ್ ಸೀಟ್ ಮೇಲೆ ಕುಳಿತವರಂತೆ ಕುಳಿತ ಅಸ್ಲಾಂ ಹಿಂದಿನಿಂದ ಬಲವಾಗಿ ಒತ್ತಿ ಮೊಬೈಲ್ ನ್ನು ದೇಹದೊಳಗೆ ತುರುಕಿಸಿದ್ದ. ತಕ್ಷಣ ನೋವಾಯಿತು, ಆದರೆ ಮರುದಿನ ಟಾಯ್ಲೆಟ್ನೊಂದಿಗೆ ಮೊಬೈಲ್ ಹೊರಹೋಗುತ್ತದೆ ಎಂದು ಆತ ಭಾವಿಸಿದ್ದ.ಆದರೆ ಹಾಗಾಗಲಿಲ್ಲ.. ಸದ್ಯ ಅಸ್ಲಾಂ ಅವರ ದೈಹಿಕ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ