Viral News: ಗುದದ್ವಾರದಲ್ಲಿ ಮೊಬೈಲ್​ ಅಡಗಿಸಿಟ್ಟು ಪೇಚಾಟಕ್ಕೆ ಸಿಲುಕಿದ ಖೈದಿ

ಖೈದಿಯೊಬ್ಬ ಯಾರಿಗೂ ತಿಳಿಯದಂತೆ ಜೈಲಿಗೆ ಮೊಬೈಲ್​​​ ಕೊಂಡೊಯ್ಯಲು ಸಖತ್​​ ಆಗಿ ಪ್ಲಾನ್​ ಮಾಡಿದ್ದಾನೆ. ಆದರೆ ಜೈಲಿನ ಗೇಟ್‌ ಬಳಿ ಭದ್ರತಾ ಸಿಬ್ಬಂದಿಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾನೆ. ಹೀಗಾಗಿ ಸಿಕ್ಕಿಬೀಳುವ ಭಯದಿಂದ ಗುದದ್ವಾರದೊಳಗೆ ಮೊಬೈಲ್ ಬಚ್ಚಿಟ್ಟಿದ್ದಾನೆ.

Viral News: ಗುದದ್ವಾರದಲ್ಲಿ ಮೊಬೈಲ್​ ಅಡಗಿಸಿಟ್ಟು ಪೇಚಾಟಕ್ಕೆ ಸಿಲುಕಿದ ಖೈದಿ
ಸಾಂದರ್ಭಿಕ ಚಿತ್ರImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on:Feb 05, 2024 | 5:13 PM

ಕೋಲ್ಕತ್ತಾ: ಜೈಲಿನಲ್ಲಿ ಖೈದಿಗಳಿಗೆ ಮೊಬೈಲ್ ಫೋನ್ ಬಳಕೆ ನಿಷೇಧಿಸಿದ್ದರೂ ಕೂಡ ಖೈದಿಯೊಬ್ಬ ಯಾರಿಗೂ ತಿಳಿಯದಂತೆ ಮೊಬೈಲ್​​​ ಕೊಂಡೊಯ್ಯಲು ಸಖತ್​​ ಆಗಿ ಪ್ಲಾನ್​ ಮಾಡಿದ್ದಾನೆ. ಜೈಲು ಪ್ರವೇಶಿಸುವ ಮೊದಲು,ಭದ್ರತಾ ಸಿಬ್ಬಂದಿಗಳ ಕೈಗೆ ಸಿಕ್ಕಿಬೀಳುವ ಭಯದಿಂದ ಗುದದ್ವಾರದೊಳಗೆ ಮೊಬೈಲ್ ಬಚ್ಚಿಟ್ಟಿದ್ದಾನೆ. ಗುದದ್ವಾರದಲ್ಲಿ ಮೊಬೈಲ್​ ಅಡಗಿಸಿಟ್ಟು ಪೇಚಾಟಕ್ಕೆ ಸಿಲುಕಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಇದೀಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಬರುಯಿಪುರ ಕೇಂದ್ರ ಸುಧಾರಣಾ ಕೇಂದ್ರದಲ್ಲಿ ನಡೆದಿದೆ.

ಖೈದಿ ಅಸ್ಲಾಂ ಶೇಖ್(30) ಭಾನುವಾರ ಮಧ್ಯಾಹ್ನ ಬರುಯಿಪುರ ನ್ಯಾಯಾಲಯದಿಂದ ಬರುಯಿಪುರ ಸುಧಾರಣಾ ಸೌಲಭ್ಯಕ್ಕೆ ತೆರಳಿದ್ದರು. ಜೈಲಿಗೆ ಬರುವ ಮುನ್ನ ತನ್ನ ಬಳಿ ಮೊಬೈಲ್ ಇಟ್ಟುಕೊಂಡಿದ್ದ ಅಸ್ಲಾಂ. ಆದರೆ ಜೈಲಿನ ಗೇಟ್‌ ಬಳಿ ಭದ್ರತಾ ತಪಾಸಣೆ ಕಂಡು ಅಸ್ಲಾಂ ಬೆಚ್ಚಿಬಿದ್ದಿದ್ದರು. ಹೀಗಾಗಿ ಸಿಕ್ಕಿಬೀಳುವ ಭಯದಿಂದ ಗುದದ್ವಾರದೊಳಗೆ ಮೊಬೈಲ್ ಬಚ್ಚಿಟ್ಟಿದ್ದಾನೆ. ಆದರೆ ಈತನ ಮಾಸ್ಟರ್​​ ಪ್ಲಾನ್​​ನಿಂದ​​​ ಪಚೀತಿಗೆ ಸಿಲುಕಿಕೊಂಡಿದ್ದಾನೆ.

ಇದನ್ನೂ ಓದಿ: ಗೂಢಚಾರಿಕೆ ಆರೋಪದಡಿ ಪೊಲೀಸ್​​ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ

ಹೇಗಾದರೂ ಮಾಡಿ ಅಸ್ಲಾಂ ಗುದದ್ವಾರದಿಂದ ಮೊಬೈಲ್ ತೆಗೆಯಲು ಯತ್ನಿಸಿದ್ದಾನೆ. ಆದರೆ ಹಲವಾರು ಪ್ರಯತ್ನಗಳ ಹೊರತಾಗಿಯೂ (ಹಲವಾರು ಬಾಳೆಹಣ್ಣುಗಳನ್ನು ತಿನ್ನುವ ಮೂಲಕ ಅದನ್ನು ಹೊರಹಾಕಲು ಪ್ರಯತ್ನಿಸಿದರು) ಅಸ್ಲಾಮ್ನ ಗುದದ್ವಾರದಿಂದ ಮೊಬೈಲ್ ಫೋನ್ ಅನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ಆತನ ಪೇಚಾಟ ಕಂಡು ಪೊಲೀಸರಿಗೆ ಮಾಹಿತಿ ತಿಳಿದಿದೆ. ನಂತರ ಆತನನ್ನು ಬರುಯಿಪುರ ರಾಜ್ಯ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ವೈದ್ಯರು ಪ್ರಯತ್ನಿಸಿದರೂ ಮೊಬೈಲ್ ಅನ್ನು ಹೊರತರಲು ಸಾಧ್ಯವಾಗಲಿಲ್ಲ. ಇದರ ನಂತರ, ಅಸ್ಲಾಮ್ ಅವರನ್ನು ಬರುಯಿಪುರ ಆಸ್ಪತ್ರೆಯಿಂದ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:11 pm, Mon, 5 February 24

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್