ನ್ಯಾಯಾಲಯದ ಅಂಗಳದಲ್ಲಿ ನ್ಯಾಯಾಧೀಶರ ಭದ್ರತಾ ಅಧಿಕಾರಿಯ ರಕ್ತಸಿಕ್ತ ಶವ ಪತ್ತೆ

ಕೋಲ್ಕತ್ತಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರ ಭದ್ರತಾ ಅಧಿಕಾರಿಯ ಶವ ಪತ್ತೆಯಾಗಿದೆ. ಗುಂಡುಗಳು ಭದ್ರತಾ ಅಧಿಕಾರಿ ದೇಹದಲ್ಲಿ ಪತ್ತೆಯಾಗಿದ್ದು, ದೇಹ ಛಿದ್ರಗೊಂಡಿದೆ. ಮೃತರನ್ನು ಗೋಪಾಲ್​ನಾಥ್ ಎಂದು ಗುರುತಿಸಲಾಗಿದೆ. ಗೋಪಾಲ್​ನಾಥ್ ಕೋಲ್ಕತ್ತಾ ಸಶಸ್ತ್ರಪಡೆಯ ಭಾಗವಾಗಿದ್ದರು. ಅದೇ ನ್ಯಾಯಾಲಯದ 8ನೇ ಪೀಠದ ನ್ಯಾಯಾಧೀಶರಿಗೆ ಭದ್ರತಾ ಅಧಿಕಾರಿಯಾಗಿ ನೇಮಕಗೊಂಡಿದ್ದರು.

ನ್ಯಾಯಾಲಯದ ಅಂಗಳದಲ್ಲಿ ನ್ಯಾಯಾಧೀಶರ ಭದ್ರತಾ ಅಧಿಕಾರಿಯ ರಕ್ತಸಿಕ್ತ ಶವ ಪತ್ತೆ
ಗೋಪಾಲ್​ನಾಥ್ Image Credit source: India Today
Follow us
ನಯನಾ ರಾಜೀವ್
|

Updated on: Feb 05, 2025 | 2:45 PM

ಕೋಲ್ಕತ್ತಾದ ಸೆಷನ್ಸ್​ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರ ಭದ್ರತಾ ಅಧಿಕಾರಿಯ ರಕ್ತಸಿಕ್ತ ಶವ ಪತ್ತೆಯಾಗಿದೆ. ಗುಂಡುಗಳು ಭದ್ರತಾ ಅಧಿಕಾರಿ ದೇಹದಲ್ಲಿ ಪತ್ತೆಯಾಗಿದ್ದು, ದೇಹ ಛಿದ್ರಗೊಂಡಿದೆ. ಮೃತರನ್ನು ಗೋಪಾಲ್​ನಾಥ್ ಎಂದು ಗುರುತಿಸಲಾಗಿದೆ. ಗೋಪಾಲ್​ನಾಥ್ ಕೋಲ್ಕತ್ತಾ ಸಶಸ್ತ್ರಪಡೆಯ ಭಾಗವಾಗಿದ್ದರು. ಅದೇ ನ್ಯಾಯಾಲಯದ 8ನೇ ಪೀಠದ ನ್ಯಾಯಾಧೀಶರಿಗೆ ಭದ್ರತಾ ಅಧಿಕಾರಿಯಾಗಿ ನೇಮಕಗೊಂಡಿದ್ದರು.

ಬುಧವಾರ ಬೆಳಗ್ಗೆ ಸೆಷನ್ಸ್​ ನ್ಯಾಯಾಲಯದ ಆವರಣದಿಂದ ಕೋಲ್ಕತ್ತಾ ನ್ಯಾಯಾಧೀಶರ ಭದ್ರತಾ ಅಧಿಕಾರಿಯ ದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಬೆಳಗ್ಗೆ 7 ಗಂಟೆ ಸುಮಾರಿಗೆ ಕೋರ್ಟ್​ ಗೇಟ್ ತೆರೆದಾಗ ನೌಕರರಿಗೆ ಶವ ಕಾಣಿಸಿದೆ. ಹಣೆಯ ಮೇಲೆ ಗುಂಡೇಟಿನ ಗಾಯವಿತ್ತು, ಕುರ್ಚಿಯ ಮೇಲೆ ಕುಳಿತಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.

ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿಗೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದಾರೆ. ಹರೇ ಸ್ಟ್ರೀಟ್ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಕೋಲ್ಕತ್ತಾ ಪೊಲೀಸ್ ಪತ್ತೆದಾರಿ ವಿಭಾಗ, ವೈಜ್ಞಾನಿಕ ವಿಭಾಗ ಸಹಾಯ ಮಾಡುತ್ತಿದ್ದಾರೆ.

ಮತ್ತಷ್ಟು ಓದಿ: ಕೇರಳದಲ್ಲಿ ಹುಲಿಯ ಶವ ಪತ್ತೆ, ಹೊಟ್ಟೆಯೊಳಗಿತ್ತು ಮಹಿಳೆಯ ಕಿವಿಯೋಲೆ, ಕೂದಲು, ಬಟ್ಟೆ

ದೇಹದ ಬಳಿ 9 ಎಂಎಂ ಸರ್ವೀಸ್ ಪಿಸ್ತೂಲ್ ಪತ್ತೆಯಾಗಿದೆ, ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸರ್ವೀಸ್ ಗನ್​ನಿಂದ ಫಿಂಗರ್​ಪ್ರಿಂಟ್ ತಜ್ಞರು ಮಾದರಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿ ನಾಥ್ ಅವರ ಫಿಂಗರ್​ಪ್ರಿಂಟ್ ಮಾತ್ರ ಇವೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಬೇರೆ ಯಾವುದೇ ಫಿಂಗರ್​ಪ್ರಿಂಟ್​ಗಳು ತನಿಖೆಯ ದಿಕ್ಕನ್ನು ಬದಲಾಯಿಸಬಹುದು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ