ಕೋಲ್ಕತ್ತಾ: ಅತ್ಯಾಚಾರ ಆರೋಪಿ ಅಂದು ರಾತ್ರಿ ಬಳಸಿದ್ದ ಬೈಕ್​ ಉನ್ನತ ಪೊಲೀಸ್​ ಅಧಿಕಾರಿಯದ್ದು

|

Updated on: Aug 27, 2024 | 2:07 PM

ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ಆರೋಪಿ ಸಂಜಯ್ ರಾಯ್​ ಅಂದು ಬಳಸಿದ್ದ ಬೈಕ್ ಹಿರಿಯ ಪೊಲೀಸ್​ ಅಧಿಕಾರಿಯದ್ದು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಆತ ಕುಡಿದ ಅಮಲಿನಲ್ಲಿ 15 ಕಿ.ಮೀ ದೂರದವರೆಗೆ ಬೈಕ್ ಚಲಾಯಿಸಿದ್ದ, ಇಂಡಿಯಾ ಟುಡೇ ವರದಿ ಪ್ರಕಾರ, ಈ ಬೈಕ್ 2014 ರಲ್ಲಿ ನೋಂದಾಯಿಸಲ್ಪಟ್ಟಿದೆ.

ಕೋಲ್ಕತ್ತಾ: ಅತ್ಯಾಚಾರ ಆರೋಪಿ ಅಂದು ರಾತ್ರಿ ಬಳಸಿದ್ದ ಬೈಕ್​ ಉನ್ನತ ಪೊಲೀಸ್​ ಅಧಿಕಾರಿಯದ್ದು
ಸಂಜಯ್
Follow us on

ಕೋಲ್ಕತ್ತಾದ ಆರ್​ಜಿ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಸಂಜಯ್​ ಅಂದು ಬಳಸಿದ್ದ ಬೈಕ್ ಉನ್ನತ ಪೊಲೀಸ್ ಅಧಿಕಾರಿಯದ್ದು ಎನ್ನುವ ಮಾಹಿತಿ ಲಭ್ಯವಾಗಿದೆ.

ಕೋಲ್ಕತ್ತಾ ಪೊಲೀಸ್​ ಇಲಾಖೆಯಲ್ಲಿ ಸ್ವಯಂಸೇವಕನಾಗಿದ್ದ ಸಂಜಯ್ ಅಂದು ರೆಡ್​ ಲೈಟ್ ಏರಿಯಾಗೆ ಹೋಗುವಾಗ ಬಳಸಿದ್ದು ಇದೇ ಬೈಕ್ ಆಗಿತ್ತು. ಆತ ಕುಡಿದ ಅಮಲಿನಲ್ಲಿ 15 ಕಿ.ಮೀ ದೂರದವರೆಗೆ ಬೈಕ್ ಚಲಾಯಿಸಿದ್ದ, ಇಂಡಿಯಾ ಟುಡೇ ವರದಿ ಪ್ರಕಾರ, ಈ ಬೈಕ್ 2014 ರಲ್ಲಿ ನೋಂದಾಯಿಸಲ್ಪಟ್ಟಿದೆ.
ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ವಾಹನವನ್ನು ವಶಪಡಿಸಿಕೊಂಡಿದೆ. ಬೈಕ್​ನಲ್ಲಿ ಕೆಪಿ ಅಂದರೆ ಕೋಲ್ಕತ್ತಾ ಪೊಲೀಸ್​ ಎಂದು ಬರೆಯಲಾಗಿದೆ.

ಸಂಜಯ್ ತನ್ನನ್ನು ಪೊಲೀಸ್ ಎಂದು ಹೇಳಿಕೊಂಡು ಎಲ್ಲರನ್ನೂ ಬೆದರಿಸುತ್ತಿದ್ದ, ಈ ಬೈಕ್ ಹಿರಿಯ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ನೋಂದಣಿಯಾಗಿದೆ. ಆಗಸ್ಟ್ 9 ರ ಘಟನೆಯ ನಂತರ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕೋಲ್ಕತ್ತಾ ಪೊಲೀಸರು ಸಂಜಯ್ ರಾಯ್ ಅವರನ್ನು ಬಂಧಿಸಿದ್ದರು.

ಮತ್ತಷ್ಟು ಓದಿ: Kolkata Murder Case: ಕತ್ತಿನಲ್ಲಿ ಬ್ಲೂಟೂತ್​, ಕೈಯಲ್ಲಿ ಹೆಲ್ಮೆಟ್​ ಸೆಮಿನಾರ್​ ರೂಂಗೆ ಹೋಗುತ್ತಿರುವ ಆರೋಪಿ ದೃಶ್ಯ ಸೆರೆ

ಪಾಲಿಗ್ರಾಫ್ ಪರೀಕ್ಷೆ

ಆರ್‌ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ಗೆ ಬಂದಾಗ ಮಹಿಳಾ ವೈದ್ಯೆ ಆಗಲೇ ಮೃತಪಟ್ಟಿದ್ದಳು ಎಂದು ಆರೋಪಿ ಸಂಜಯ್ ರಾಯ್​ ಪಾಲಿಗ್ರಾಫ್​ ಪರೀಕ್ಷೆ ವೇಳೆ ಹೇಳಿಕೆ ನೀಡಿದ್ದಾರೆ. ಅತ್ಯಾಚಾರ, ಕೊಲೆ ಮಾಡಿದ್ದು ನಾನೇ ಎಂದು ಈಗಾಗಲೇ ಒಪ್ಪಿಕೊಂಡಿರುವ ಸಂಜಯ್ ರಾಯ್ ಇದೀಗ ಯೂಟರ್ನ್​ ಹೊಡೆದಿದ್ದು, ಆತನ ಮಾನಸಿಕ ಸ್ಥಿತಿ ಬಗ್ಗೆ ಅನುಮಾನ ಹುಟ್ಟಿದೆ. ಅಂದು ನಾನು ಸೆಮಿನಾರ್​ ಹಾಲ್​ಗೆ ಹೋಗುವ ಮೊದಲು ಆಕೆ ಸಾವನ್ನಪ್ಪಿದ್ದಳು, ನಾನು ನಿರಪರಾಧಿ ಎಂದು ಆತ ಹೇಳಿದ್ದಾನೆ.

ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿನಲ್ಲಿ ಸಿಬಿಐ ಅಧಿಕಾರಿಗಳು ಆರೋಪಿ ಸಂಜಯ್ ರಾಯ್ ಅವರ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಿದ್ದರು. ಟೈಮ್ಸ್​ ಆಫ್ ಇಂಡಿಯಾ ನೀಡಿರುವ ವರದಿ ಪ್ರಕಾರ, ಸುಳ್ಳು ಪತ್ತೆ ಪರೀಕ್ಷೆ ವೇಳೆ ಸುಳ್ಳು ಹಾಗೂ ಅನುಮಾನಾಸ್ಪದ ಉತ್ತರಗಳನ್ನು ಗುರುತಿಸಲಾಗಿದೆ. ಸಂಜಯ್ ರಾಯ್ ಆ ವೇಳೆ ಆತಂಕಗೊಂಡಿದ್ದ, ಸಿಬಿಐ ಹಲವು ಸಾಕ್ಷ್ಯಗಳನ್ನು ಮುಂದಿಟ್ಟರೂ ಆತ ಸಮರ್ಥನೆ ನೀಡುತ್ತಲೇ ಇದ್ದ ಎಂಬುದು ತಿಳಿದುಬಂದಿದೆ.

ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ವೈದ್ಯರನ್ನು ನೋಡಿದಾಗ ಆಕೆ ಆಗಲೇ ಮೃತಪಟ್ಟಿದ್ದಾಳೆ ಎಂದು ಆರೋಪಿ ಸಂಜಯ್ ರಾಯ್ ಹೇಳಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.ಕೋಲ್ಕತ್ತಾ ಪೊಲೀಸರ ಪ್ರಕಾರ, ಘಟನೆಯ ನಂತರ, ಸಂಜಯ್ ರಾಯ್ ಅತ್ಯಾಚಾರ ಮತ್ತು ಕೊಲೆಯ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆದರೆ, ನಂತರ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ತಾವು ನಿರಪರಾಧಿ ಎಂದು ಹೇಳಿದ್ದಾನೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ