AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dehradun: ಕಾರಿನೊಳಗೆ ಟ್ಯಾಕ್ಸಿ ಚಾಲಕ ಹಾಗೂ ಮಹಿಳೆಯ ಶವ ಪತ್ತೆ

ಕಾರಿನೊಳಗೆ ಮಹಿಳೆ ಹಾಗೂ ಪುರುಷ ಸಾವನ್ನಪ್ಪಿರುವ ಘಟನೆ ಡೆಹ್ರಾಡೂನ್​ನಲ್ಲಿ ನಡೆದಿದೆ. ಡೆಹ್ರಾಡೂನ್‌ನ ರಾಜ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಹಸ್ತ್ರಧಾರಾ ಹೆಲಿಪ್ಯಾಡ್ ಹಿಂಭಾಗದ ನಾಗಲ್ ವಾಲಿ ರಸ್ತೆಯಲ್ಲಿ ಕಾರೊಂದು ನಿಲುಗಡೆಯಾಗಿರುವ ಬಗ್ಗೆ ನಿಯಂತ್ರಣ ಕೊಠಡಿಯಿಂದ ಪೊಲೀಸರಿಗೆ ಮಾಹಿತಿ ಲಭಿಸಿತ್ತು.

Dehradun: ಕಾರಿನೊಳಗೆ ಟ್ಯಾಕ್ಸಿ ಚಾಲಕ ಹಾಗೂ ಮಹಿಳೆಯ ಶವ ಪತ್ತೆ
ಕಾರುImage Credit source: Thelallanntop.com
ನಯನಾ ರಾಜೀವ್
|

Updated on: Aug 27, 2024 | 12:20 PM

Share

ಕಾರಿನೊಳಗೆ ಟ್ಯಾಕ್ಸಿ ಚಾಲಕ ಹಾಗೂ ಮಹಿಳೆ ಶವವಾಗಿ ಪತ್ತೆಯಾಗಿರುವ ಘಟನೆ ಡೆಹ್ರಾಡೂನ್​ನಲ್ಲಿ ನಡೆದಿದೆ. ಕಾರಿನೊಳಗಿದ್ದ ಗ್ಯಾಸ್ ಹಾಗೂ ಎಸಿಯ ಟೆಂಪರೇಚರ್ ನಿಂದ ಇಬ್ಬರೂ ಸಾವನ್ನಪ್ಪಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡೆಹ್ರಾಡೂನ್‌ನ ರಾಜ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಹಸ್ತ್ರಧಾರಾ ಹೆಲಿಪ್ಯಾಡ್ ಹಿಂಭಾಗದ ನಾಗಲ್ ವಾಲಿ ರಸ್ತೆಯಲ್ಲಿ ಕಾರೊಂದು ನಿಂತಿರುವ ಬಗ್ಗೆ ನಿಯಂತ್ರಣ ಕೊಠಡಿಯಿಂದ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮತ್ತು ಅದರೊಳಗೆ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಇಬ್ಬರೂ ಅಲ್ಲಿ ಮದ್ಯ ಸೇವಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಎರಡೂ ಶವಗಳನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳವನ್ನು ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸಿದೆ ಎಂದು ರಾಜಪುರ ಪೊಲೀಸ್ ಠಾಣೆ ಪ್ರಭಾರಿ ಪಿಡಿ ಭಟ್ ತಿಳಿಸಿದ್ದಾರೆ.

ತಂಡಕ್ಕೆ ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ಪುರಾವೆಗಳು ಕಂಡುಬಂದಿಲ್ಲ. ಪೊಲೀಸರು ಹತ್ತಿರದ ಜನರಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮೃತ ವ್ಯಕ್ತಿಯನ್ನು 50 ವರ್ಷದ ರಾಜೇಶ್ ಸಾಹು ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಹೆಸರು ಮಹೇಶ್ವರಿ ಎಂದು ಹೇಳಲಾಗಿದ್ದು, ಆಕೆಯ ವಯಸ್ಸು 45 ವರ್ಷ.

ಮತ್ತಷ್ಟು ಓದಿ: ತನ್ನ ಮೇಲೆ ಅತ್ಯಾಚಾರ ನಡೆಯುವ 2 ದಿನದ ಮೊದಲು ಅತ್ಯಾಚಾರವೆಂದರೇನು ಎಂದು ಮನೆಯಲ್ಲಿ ಕೇಳಿದ್ದ ಬಾಲಕಿ

ಕಾರು ರಾಜೇಶ್ ಸಾಹು ಎಂಬುವವರಿಗೆ ಸೇರಿದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಕಾಂತ್ ಬಾಂಗ್ಲಾ ಪೊಲೀಸ್ ಠಾಣೆಯ ರಾಜಪುರ ಪ್ರದೇಶದ ನಿವಾಸಿಗಳಾಗಿದ್ದರು. ರಾಜೇಶ್ ಸಾಹು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ಮೃತರ ಸಂಬಂಧಿಕರು ಈ ವಿಷಯದಲ್ಲಿ ಇನ್ನೂ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ