ಪ್ರಿಯಕರನೊಂದಿಗೆ ಓಡಿ ಹೋಗಲು 3 ವರ್ಷದ ಮುದ್ದು ಮಗುವನ್ನು ಕೊಂದ ತಾಯಿ
ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗುವನ್ನು ಕೊಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮಹಿಳೆ ಟಿವಿ ಶೋವೊಂದನ್ನು ನೋಡಿ ಮಗುವಿನ ಹತ್ಯೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾಳೆ. ಆಕೆ ಪ್ರಿಯಕರನೊಂದಿಗೆ ಓಡಿ ಹೋಗಲು ಬಯಸಿದ್ದಳು, ಮಗುವಿದ್ದರೆ ತೊಂದರೆಯಾಗುತ್ತದೆ ಎಂದು ಕೊಲೆ ಮಾಡಿದ್ದಾಳೆ.
ಪ್ರಿಯಕರನೊಂದಿಗೆ ಓಡಿ ಹೋಗಲು ಮಹಿಳೆಯೊಬ್ಬಳು ತನ್ನ 3 ವರ್ಷದ ಮುದ್ದು ಮಗುವನ್ನು ಹತ್ಯೆ ಮಾಡಿರುವ ಘಟನೆ ಬಿಹಾರದ ಮುಜಾಫರ್ಪುರದಲ್ಲಿ ನಡೆದಿದೆ. ಆರೋಪಿ ಕಾಜಲ್ ಳನ್ನು ಬಂಧಿಸಲಾಗಿದ್ದು, ತಾನು ವಿವಾಹೇತರ ಸಂಬಂಧ ಹೊಂದಿದ್ದು, ಪತಿಯನ್ನು ಬಿಡಲು ಬಯಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ, ಆದರೆ ಆಕೆಯ ಪ್ರಿಯಕರನಿಗೆ ತನ್ನ ಮಗಳು ನನ್ನ ಬರಲು ಇಷ್ಟವಿರಲಿಲ್ಲ. ಹೀಗಾಗಿ ಮಗುವಿನ ಕತ್ತು ಸೀಳಿ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪೊದೆಯೊಳಗೆ ಎಸೆದಿದ್ದಳು.
ಜನಪ್ರಿಯ ಟಿವಿ ಶೋ ನೋಡಿದ ನಂತರ ತನ್ನ ಮಗಳ ಕೊಲೆಗೆ ಯೋಜನೆ ರೂಪಿಸಿದ್ದಳು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಶನಿವಾರ ಮುಜಾಫರ್‌ಪುರದ ಮಿನಾಪುರದ ವಸತಿ ನೆರೆಹೊರೆಯಲ್ಲಿ ಮೂರು ವರ್ಷದ ಮಗುವಿನ ದೇಹ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು.
ಮಗುವಿನ ಮೃತದೇಹ ಪತ್ತೆಯಾಗಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿತ್ತು ಮತ್ತು ಹತ್ಯೆಯ ತನಿಖೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಫೊರೆನ್ಸಿಕ್ ತಂಡವು ಇಡೀ ಮನೆಯನ್ನು ಹುಡುಕಾಡಿದಾಗ ನೆಲ ಹಾಗೂ ಸಿಂಕ್ , ತಾರಸಿ ಬಳಿ ರಕ್ತದ ಕಲೆಗಳನ್ನು ಪತ್ತೆ ಮಾಡಿದ್ದಾರೆ.
ಮತ್ತಷ್ಟು ಓದಿ:ಬೆಂಗಳೂರು: ಇಬ್ಬರು ಹೆಣ್ಣುಮಕ್ಕಳನ್ನು ಕತ್ತು ಸೀಳಿ ಕೊಲೆ ಮಾಡಿದ ಮಲತಂದೆ ಅರೆಸ್ಟ್
ಘಟನೆ ದಿನ ಕಾಜಲ್ ಪತಿ ಮನೋಜ್ಗೆ ಕರೆ ಮಾಡಿ ತನ್ನ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ತಿಳಿಸಿದ್ದಳು. ಮನೋಜ್ ಪತ್ನಿ ಕಾಜಲ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಕಾಜಲ್ ಫೋನ್ ಲೊಕೇಶನ್ ಟ್ರ್ಯಾಕ್ ಮಾಡಿ ದಾಳಿ ನಡೆಸಿದ್ದಾರೆ. ಕೊನೆಗೆ ಆಕೆ ತನ್ನ ಗೆಳೆಯನ ಮನೆಯಲ್ಲಿ ಪತ್ತೆಯಾಗಿದ್ದಳು.
ವಿಚಾರಣೆ ವೇಳೆ ಕಾಜಲ್ ಕಳೆದ ಎರಡು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದು, ತನ್ನ ಬಾಯ್ ಫ್ರೆಂಡ್ ಜೊತೆ ತೆರಳಲು ಬಯಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಅವಳು ತನ್ನ ಮಗಳನ್ನು ಕರೆದುಕೊಂಡು ಹೋಗಬೇಕೆಂದು ಬಯಸಿದ್ದಳು. ಆದರೆ ಗೆಳೆಯನಿಗೆ ಇಷ್ಟವಿಲ್ಲದ ಕಾರಣ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿ ಬಳಿಕ ಸೂಟ್ಕೇಸ್ಗೆ ತುಂಬಿ ಪೊದೆ ಮಧ್ಯೆ ಎಸೆದಿದ್ದಳು.
ಮಹಿಳೆ ಕೊಠಡಿ ಮತ್ತು ಟೆರೇಸ್‌ನಲ್ಲಿನ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿದಳು, ಆದರೆ ವಿಧಿವಿಜ್ಞಾನ ತಂಡವು ರಕ್ತದ ಕುರುಹುಗಳನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ