AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳಸಿದ ಬಿರಿಯಾನಿ ಕೊಟ್ಟಿದ್ದಕ್ಕೆ ಮಾರಾಮಾರಿ; ಸಾವಿನಲ್ಲಿ ಅಂತ್ಯವಾದ ಜಗಳ!

ಫಾಲ್ಗುಣಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಆಕೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಹಳಸಿದ ಬಿರಿಯಾನಿ ಕೊಟ್ಟಿದ್ದಕ್ಕೆ ಮಾರಾಮಾರಿ; ಸಾವಿನಲ್ಲಿ ಅಂತ್ಯವಾದ ಜಗಳ!
Follow us
shruti hegde
| Updated By: ಆಯೇಷಾ ಬಾನು

Updated on:Dec 02, 2020 | 3:07 PM

ಕೋಲ್ಕತ್ತಾ: ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಆರಂಭವಾಗುವ ಜಗಳಗಳು ಹೊಡೆದಾಟಕ್ಕೆ ತಿರುಗಿ ಬಿಡುತ್ತವೆ. ಕೋಲ್ಕತ್ತಾದಲ್ಲೂ ಇದೇ ರೀತಿ ಆಗಿದೆ. ಹಳಸಿದ ಬಿರಿಯಾನಿ ಕೊಟ್ಟ ವಿಚಾರಕ್ಕೆ ಆರಂಭವಾದ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ.

ಫಲ್ಗುಣಿ ಬಸು ಎಂಬ ಮಹಿಳೆಯ ಮನೆಗೆ ಆಕೆಯ ಅತ್ತಿಗೆ ಬಂದಿದ್ದಳು. ಈ ವೇಳೆ ಫಲ್ಗುಣಿ ಬಿರಿಯಾನಿ ಮಾಡಿ ಬಡಿಸಿದ್ದಳು. ಇದನ್ನು ತಿಂದ ನಂತರದ ಫಲ್ಗುಣಿ ಅತ್ತಿಗೆಯ ಮಗ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದ. ಇದರಿಂದ ಸಿಟ್ಟಾದ ಮಹಿಳೆ ಫಲ್ಗುಣಿ ಮೇಲೆ ಕಿಡಿಕಾರಿದಳು.

ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅತ್ತಿಗೆಯು ಫಲ್ಗುಣಿ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಇಬ್ಬರ ನಡುವೆ ಭಾರೀ ಹೊಡೆದಾಟ ಏರ್ಪಟ್ಟಿದೆ. ಅತ್ತಿಗೆ ಹೊಡೆದ ಏಟಿಗೆ ಫಲ್ಗುಣಿಗೆ ಹೃದಯಾಘಾತವಾಗಿದೆ. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ.

ಫಲ್ಗುಣಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಆಕೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು,  ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಓದಿ: ನೀವು RCBಗೆ ಸಪೋರ್ಟ್ ಮಾಡೋಹಾಗಿದ್ರೆ.. ಅರ್ಧ ರೇಟ್​ಗೆ ಹೊಟ್ಟೆ ತುಂಬಾ ಬಿರಿಯಾನಿ ತಿನ್ನಿ!

ಬೌ ಬೌ ಬಿರಿಯಾನಿಗಾಗಿ ನಾಯಿ ಬೇಟೆಗೆ ಇಳಿದ ಸರ್ವಾಧಿಕಾರಿ ಕಿಮ್​: ಉ.ಕೊರಿಯಾ ಗಢಗಢ!

Published On - 3:04 pm, Wed, 2 December 20