Lakhimpur Kheri ಲಖಿಂಪುರ್ ಖೇರಿ ಪ್ರಕರಣ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಮುಖ್ಯಸ್ಥರಿಗೆ ಹೊಸ ಹುದ್ದೆ

SIT head Upendra Kumar ಎಸ್ಐಟಿ ನೇತೃತ್ವ ವಹಿಸಿರುವ ಉಪ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಉಪೇಂದ್ರ ಕುಮಾರ್ ಅಗರ್ವಾಲ್ ಅವರಿಗೆ ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಗೊಂಡ ವಲಯದ ಡಿಐಜಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಿದೆ

Lakhimpur Kheri ಲಖಿಂಪುರ್ ಖೇರಿ ಪ್ರಕರಣ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಮುಖ್ಯಸ್ಥರಿಗೆ ಹೊಸ ಹುದ್ದೆ
ಲಖಿಂಪುರ್ ಖೇರಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 22, 2021 | 5:41 PM

ಲಖನೌ: ಲಖಿಂಪುರ್ ಖೇರಿ ಘಟನೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ನೇತೃತ್ವ ವಹಿಸಿರುವ ಉಪ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಉಪೇಂದ್ರ ಕುಮಾರ್ ಅಗರ್ವಾಲ್ ಅವರಿಗೆ ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಗೊಂಡ ವಲಯದ ಡಿಐಜಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಿದೆ. 2005 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಗರ್‌ವಾಲ್ ಲಕ್ನೋದಲ್ಲಿರುವ ಯುಪಿ ಡೈರೆಕ್ಟರ್ ಜನರಲ್ ಆಫ್ ಪೋಲಿಸ್ ಪ್ರಧಾನ ಕಚೇರಿಗೆ ಸೇರಿದವರಾಗಿದ್ದಾರೆ. ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಅಗರ್ವಾಲ್ ಅವರ ಹೊಸ ಹುದ್ದೆ ಹೊರತಾಗಿಯೂ ಎಸ್ಐಟಿಯ ಮುಖ್ಯಸ್ಥರಾಗಿ ಮುಂದುವರಿಯುತ್ತಾರೆ.

ಲಖಿಂಪುರ್ ಖೇರಿ ಜಿಲ್ಲೆಯು ಗೊಂಡ ವ್ಯಾಪ್ತಿಗೆ ಬರುವುದಿಲ್ಲ, ಅದು ಲಖನೌ ವ್ಯಾಪ್ತಿಯಲ್ಲಿದೆ ಹಾಗಾಗಿ ಹೊಸ ನೇಮಕಾತಿ ಎಲ್ಲರನ್ನು ಅಚ್ಚರಿಗೊಳಿಸಿದೆ.

ಲಖಿಂಪುರ್ ಖೇರಿ ಪ್ರಕರಣದಲ್ಲಿ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 10 ಮಂದಿಯನ್ನು ಎಸ್‌ಐಟಿ ಬಂಧಿಸಿದೆ. ಅಜಯ್ ಮಿಶ್ರಾ ಒಡೆತನದ ಮಹೀಂದ್ರ ಥಾರ್ ಪ್ರತಿಭಟನಾಕಾರರ ಮೇಲೆ ಹರಿದಿತ್ತು. ಅಕ್ಟೋಬರ್ 3 ರಂದು ಲಖಿಂಪುರ್ ಖೇರಿಯಲ್ಲಿ ನಡೆದ ಈ ಘಟನೆಯಲ್ಲಿ ನಾಲ್ವರು ರೈತರು ಸಾವನ್ನಪ್ಪಿದ್ದರೆ, ನಂತರ ನಡೆದ ಘರ್ಷಣೆಯಲ್ಲಿ ಒಬ್ಬ ಪತ್ರಕರ್ತ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಅಗರ್ವಾಲ್ ನೇತೃತ್ವದಲ್ಲಿ ಒಂಬತ್ತು ಸದಸ್ಯರ ಎಸ್ಐಟಿಯನ್ನು ರಚಿಸಿತ್ತು. ಆಶಿಶ್ ಮಿಶ್ರಾ, ಅಂಕಿತ್ ದಾಸ್, ಅವರ ಚಾಲಕ ಶೇಖರ್ ಭಾರತಿ ಮತ್ತು ಅವರ ಖಾಸಗಿ ಗನ್ನರ್ ಲತೀಫ್ ಸೇರಿದಂತೆ ಮೂವರನ್ನು ಪೊಲೀಸ್ ಕಸ್ಟಡಿಗೆ ಕೋರಿ ಎಸ್ಐಟಿ ಸಲ್ಲಿಸಿರುವ ಅರ್ಜಿಯನ್ನು ಲಖಿಂಪುರ್ ಖೇರಿ ನ್ಯಾಯಾಲಯ ಶುಕ್ರವಾರ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: Lakhimpur Kheri Violence ಲಖೀಂಪುರ್ ಖೇರಿ ಪ್ರಕರಣ: ಸುಪ್ರೀಂಕೋರ್ಟ್ ಮುಂದಿನ ವಿಚಾರಣೆ ಅಕ್ಟೋಬರ್ 26ಕ್ಕೆ