ಆರ್‌ಜೆಡಿ ಸಭೆಯಿಂದ ಹೊರ ನಡೆದ ಲಾಲು ಪುತ್ರ ತೇಜ್ ಪ್ರತಾಪ್ ಯಾದವ್, ಪಕ್ಷದ ಕಾರ್ಯದರ್ಶಿ ವಿರುದ್ಧ ವಾಗ್ದಾಳಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 09, 2022 | 8:03 PM

ಸಭೆಯ ನಿಗದಿತ ಸಮಯ ಬಗ್ಗೆ ಕೇಳಿದಾಗ ಶ್ಯಾಮ್ ರಜಾಕ್ ನನ್ನನ್ನು, ನನ್ನ ಆಪ್ತ ಸಹಾಯಕ ಮತ್ತು ನನ್ನ ಸಹೋದರಿಯನ್ನು ನಿಂದಿಸಿದ್ದಾರೆ. ನನ್ನ ಬಳಿ ಆಡಿಯೋ ರೆಕಾರ್ಡಿಂಗ್ ಇದೆ. ಅದನ್ನು ನನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇನೆ ಎಂದ ತೇಜ್ ಪ್ರತಾಪ್ ಯಾದವ್

ಆರ್‌ಜೆಡಿ ಸಭೆಯಿಂದ ಹೊರ ನಡೆದ ಲಾಲು ಪುತ್ರ ತೇಜ್ ಪ್ರತಾಪ್ ಯಾದವ್, ಪಕ್ಷದ ಕಾರ್ಯದರ್ಶಿ ವಿರುದ್ಧ ವಾಗ್ದಾಳಿ
ತೇಜ್ ಪ್ರತಾಪ್
Follow us on

ದೆಹಲಿ: ಲಾಲು ಯಾದವ್ (Lalu Yadav) ಅವರ ಪುತ್ರ ತೇಜ್ ಪ್ರತಾಪ್ ಯಾದವ್ (Tej Pratap Yadav) ಅವರು ಭಾನುವಾರ ದಿಲ್ಲಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಸಹೋದ್ಯೋಗಿಯೊಬ್ಬರು ತಮ್ಮನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ ಜನತಾ ದಳ (RJD) ಸಭೆಯನ್ನು ಮಧ್ಯದಲ್ಲಿಯೇ ಬಿಟ್ಟು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಾಕ್ ವಿರುದ್ಧ ತೇಜ್ ಪ್ರತಾಪ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಸಭೆಯ ನಿಗದಿತ ಸಮಯ ಬಗ್ಗೆ ಕೇಳಿದಾಗ ಶ್ಯಾಮ್ ರಜಾಕ್ ನನ್ನನ್ನು, ನನ್ನ ಆಪ್ತ ಸಹಾಯಕ ಮತ್ತು ನನ್ನ ಸಹೋದರಿಯನ್ನು ನಿಂದಿಸಿದ್ದಾರೆ. ನನ್ನ ಬಳಿ ಆಡಿಯೋ ರೆಕಾರ್ಡಿಂಗ್ ಇದೆ. ಅದನ್ನು ನನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇನೆ. ಅಂತಹ ಬಿಜೆಪಿ-ಆರ್‌ಎಸ್‌ಎಸ್ ಜನರನ್ನು ಸಂಘಟನೆಯಿಂದ ಹೊರಹಾಕಬೇಕು ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ಶ್ಯಾಮ್ ರಜಾಕ್ ಅವರನ್ನು ಆರ್​​ಎಸ್​ಎಸ್ ಏಜೆಂಟ್ ಎಂದು ಕರೆದಿದ್ದಾರೆ ತೇಜ್ ಪ್ರತಾಪ್. ಆರ್‌ಜೆಡಿಯ 2 ದಿನಗಳ ರಾಷ್ಟ್ರೀಯ ಸಮಾವೇಶ ಇಂದು ನವದೆಹಲಿಯಲ್ಲಿ ಆರಂಭವಾಗಿದೆ. ಏತನ್ಮಧ್ಯೆ, ಭಾನುವಾರ ದೆಹಲಿಯಲ್ಲಿ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ಸಮಾವೇಶಕ್ಕೆ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಗೈರುಹಾಜರಾದ ಕಾರಣ ಆರ್‌ಜೆಡಿಯಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ.

ಅಕ್ಟೋಬರ್ 10 ರಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಮ್ಮ ಮೂತ್ರಪಿಂಡ ಕಸಿಗಾಗಿ ಸಿಂಗಾಪುರಕ್ಕೆ ತೆರಳುವ ಮುನ್ನ ಸಭೆ ನಡೆಯುತ್ತಿದೆ.

ತಮ್ಮ ಪುತ್ರ ಸುಧಾಕರ್ ಸಿಂಗ್ ಅವರು ನಿತೀಶ್ ಕುಮಾರ್ ಸರ್ಕಾರದಿಂದ ಕೃಷಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದಾಗಿನಿಂದ ಜಗದಾನಂದ್ ಸಿಂಗ್ ಅವರು ಪಕ್ಷದ ಉನ್ನತ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಆರೋಪಗಳ ಬಗ್ಗೆ ಕೇಳಿದಾಗ, ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಾನು ದುರ್ಬಲ ವ್ಯಕ್ತಿ ಮತ್ತು ಒತ್ತಡದಲ್ಲಿದ್ದೇನೆ. ನಾನು ತೊಂದರೆಯಲ್ಲಿದ್ದೇನೆ ಎಂದು ರಜಾಕ್ ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.
‘ಎರಡು ದಿನಗಳ ಹಿಂದೆಯೇ ನನ್ನ ಸೋದರಳಿಯ ಮೃತಪಟ್ಟಿದ್ದರೂ ಪಕ್ಷದ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಇಂದು ನಡೆದ ಘಟನೆಯಿಂದ ನನಗೆ ತುಂಬಾ ಬೇಸರವಾಗಿದೆ’ ಎಂದು ಸಭೆಯಲ್ಲಿ ನಡೆದ ಘಟನೆಯನ್ನು ವಿವರಿಸಲು ಅವರು ನಿರಾಕರಿಸಿದ್ದಾರೆ.

Published On - 7:39 pm, Sun, 9 October 22