Video: ಉತ್ತರಾಖಂಡ್​ನಲ್ಲಿ ಮತ್ತೊಮ್ಮೆ ಗುಡ್ಡಕುಸಿತ; ಕಲ್ಲು-ಮಣ್ಣು ರಸ್ತೆಗೆ ಬೀಳುವ ವೇಗನೋಡಿ ಬೆಚ್ಚಿಬಿದ್ದ ಜನರು

ರಸ್ತೆಯಲ್ಲಿ ಭಾರಿ ಪ್ರಮಾಣದ ಮಣ್ಣು ಕುಸಿದುಬಿದ್ದಿದ್ದು, ಎಲ್ಲವನ್ನೂ ಸರಿಯಾಗಿ ಸ್ವಚ್ಛಗೊಳಿಸಲು ಕನಿಷ್ಠ ಎರಡು ದಿನಗಳಾದರೂ ಬೇಕು. ಅಲ್ಲಿಯವರೆಗೂ ಜನರು ಪರ್ಯಾಯ ಮಾರ್ಗ ಹುಡುಕುವುದು ಅನಿವಾರ್ಯ ಎಂದು ಎಂದು ಜಿಲ್ಲಾಧಿಕಾರಿ

Video: ಉತ್ತರಾಖಂಡ್​ನಲ್ಲಿ ಮತ್ತೊಮ್ಮೆ ಗುಡ್ಡಕುಸಿತ; ಕಲ್ಲು-ಮಣ್ಣು ರಸ್ತೆಗೆ ಬೀಳುವ ವೇಗನೋಡಿ ಬೆಚ್ಚಿಬಿದ್ದ ಜನರು
ಉತ್ತರಾಖಂಡ್​ನಲ್ಲಿ ಗುಡ್ಡ ಕುಸಿತ
Follow us
TV9 Web
| Updated By: Lakshmi Hegde

Updated on:Aug 24, 2021 | 10:52 AM

ಉತ್ತರಾಖಂಡ್​​ನಲ್ಲಿ ಒಂದೇ ಸಮನೆ ಭೂಕುಸಿತ, ಗುಡ್ಡಕುಸಿತ (Landslide) ಉಂಟಾಗುತ್ತಿದೆ. ಇದೀಗ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 9ರ ತನಕಪುರ-ಚಂಪಾವತ್ ಮಾರ್ಗದಲ್ಲಿರುವ ಗುಡ್ಡದ ಬಹುದೊಡ್ಡ ಭಾಗ ಕುಸಿದು ರಸ್ತೆಗೆ ಬಿದ್ದ ವಿಡಿಯೋ ವೈರಲ್​ ಆಗಿದೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿರುವ ವಾಹನಗಳು ಅಲ್ಲೇ ನಿಂತಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಗುಡ್ಡ ಕುಸಿತದ ದೃಶ್ಯ ಅದೆಷ್ಟು ಭೀಕರವಾಗಿದೆಯೆಂದರೆ, ಮಣ್ಣು, ಕಲ್ಲು..ಬುಡಸಮೇತ ಕಿತ್ತುಬಿದ್ದ ಮರಗಳೆಲ್ಲ ಜಲಪಾತದಷ್ಟೇ ವೇಗವಾಗಿ ರಸ್ತೆಗೆ ಬೀಳುತ್ತಿವೆ. ರಸ್ತೆಗೆ ಬಿದ್ದ ಮಣ್ಣು-ಕಲ್ಲುಗಳಿಂದಾಗಿ ಅಲ್ಲಿ ಸಂಚಾರಕ್ಕೆ ತಡೆಯಾಗಿದೆ.

ಗುಡ್ಡ ಕುಸಿತ ಉಂಟಾಗುವ ಹೊತ್ತಲ್ಲಿ ಕೆಲವು ವಾಹನಗಳು ಅದೇ ಮಾರ್ಗದಲ್ಲಿ ಹೊರಟಿದ್ದವು. ಅವೆಲ್ಲವೂ ರಸ್ತೆಯಲ್ಲಿ ಹಿಂದೆ ಬಂದು ನಿಂತಿವೆ. ಹಾಗೇ, ಕೆಲವು ಕಾರುಗಳ ಚಾಲಕರು, ಯೂ ಟರ್ನ್​ ತೆಗೆದುಕೊಂಡು ಅಲ್ಲಿಂದ ಹೊರಟುಹೋಗಿದ್ದಾರೆ.  ಇದು ತುಂಬ ಅಪಾಯಕಾರಿಯಾದ ಭೂಕುಸಿತ ಎಂದು ಅಲ್ಲಿದ್ದವರೊಬ್ಬರು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ಸದ್ಯ ರಸ್ತೆಗೆ ಬಿದ್ದಿರುವ ಮಣ್ಣು, ಕಲ್ಲುಗಳ ಅವಶೇಷಗಳನ್ನ ತೆಗೆಯುವವರೆಗೂ ಈ ರಸ್ತೆ ಬಂದ್​ ಇರುತ್ತದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ವಾಹನಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕು ಎಂದು ಸೂಚನೆ ನೀಡಿದೆ.

ರಸ್ತೆಯಲ್ಲಿ ಭಾರಿ ಪ್ರಮಾಣದ ಮಣ್ಣು ಕುಸಿದುಬಿದ್ದಿದ್ದು, ಎಲ್ಲವನ್ನೂ ಸರಿಯಾಗಿ ಸ್ವಚ್ಛಗೊಳಿಸಲು ಕನಿಷ್ಠ ಎರಡು ದಿನಗಳಾದರೂ ಬೇಕು. ಅಲ್ಲಿಯವರೆಗೂ ಜನರು ಪರ್ಯಾಯ ಮಾರ್ಗ ಹುಡುಕುವುದು ಅನಿವಾರ್ಯ ಎಂದು ಎಂದು ಜಿಲ್ಲಾಧಿಕಾರಿ ವಿನೀತ್ ತೋಮಾರ್​ ಹೇಳಿದ್ದಾರೆ. ಉತ್ತಾರಖಂಡ್​ನಲ್ಲಿ ಇತ್ತೀಚೆಗೆ ಪದೇಪದೆ ಭೂಕುಸಿತ ಉಂಟಾಗುತ್ತಿದೆ. ಮೊನ್ನೆ ನೈನಿತಾಲ್​​ನಲ್ಲಿ 14ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್​​ವೊಂದು ಸೆಕೆಂಡ್​ಗಳ ಅಂತರದಲ್ಲಿ ಅಪಾಯದಿಂದ ಪಾರಾಗಿತ್ತು. ನೋಡನೋಡುತ್ತಿದ್ದಂತೆ ಚಲಿಸುತ್ತಿದ್ದ ಬಸ್​​ನ ಮುಂದೆಯೇ ಗುಡ್ಡ ಕುಸಿದುಬಿದ್ದಿತ್ತು. ಚಾಲಕ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ದರೂ ಆ 14 ಜನರ ಪ್ರಾಣ ಹೋಗುತ್ತಿತ್ತು.

ಇದನ್ನೂ ಓದಿ: Krishna Janmashtami 2021: ಈ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ದಿನಾಂಕ ಮತ್ತು ಶುಭ ಮುಹೂರ್ತ

ಅಂದ್ರಾಬ್​​​ನಲ್ಲಿ ತಾಲಿಬಾನ್​​ ಜಿಲ್ಲಾ ಮುಖ್ಯಸ್ಥ ಸೇರಿ 50 ಉಗ್ರರನ್ನು ಕೊಂದ ಸ್ಥಳೀಯ ಹೋರಾಟಗಾರರು

Published On - 10:50 am, Tue, 24 August 21