Coronavirus cases in India: ದೇಶದಲ್ಲಿ 25,467 ಹೊಸ ಕೊವಿಡ್ ಪ್ರಕರಣ ಪತ್ತೆ, 354 ಸಾವು
Covid 19: ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳ ಶೇಕಡಾ 1 ಕ್ಕಿಂತ ಕಡಿಮೆ ಮತ್ತು ಪ್ರಸ್ತುತ 3.19 ಲಕ್ಷದಷ್ಟಿದೆ, ಇದು 156 ದಿನಗಳಲ್ಲಿ ಕಡಿಮೆ. ಚೇತರಿಕೆಯ ಪ್ರಮಾಣವು ಶೇಕಡಾ 97.68 ಕ್ಕೆ ಏರಿಕೆಯಾಗಿದೆ.
ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 25,467 ಹೊಸ ಕೊವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು 354 ಸಾವು ಪ್ರಕರಣ ದಾಖಲಾಗಿವೆ. ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳ ಶೇಕಡಾ 1 ಕ್ಕಿಂತ ಕಡಿಮೆ ಮತ್ತು ಪ್ರಸ್ತುತ 3.19 ಲಕ್ಷದಷ್ಟಿದೆ, ಇದು 156 ದಿನಗಳಲ್ಲಿ ಕಡಿಮೆ. ಚೇತರಿಕೆಯ ಪ್ರಮಾಣವು ಶೇಕಡಾ 97.68 ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ 13,383 ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 3,643 ಪ್ರಕರಣ ವರದಿ ಆಗಿದೆ. ಮೂರನೇ ಕೊವಿಡ್ -19 ಅಲೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ಭಾರತವನ್ನು ಯಾವಾಗ ಬೇಕಾದರೂ ಅಪ್ಪಳಿಸಬಹುದು ಎಂದು ಗೃಹ ಸಚಿವಾಲಯ (ಎಂಎಚ್‌ಎ) ರಚಿಸಿದ ತಜ್ಞರ ಸಮಿತಿಯು ಭವಿಷ್ಯ ನುಡಿದಿದೆ. ಮತ್ತು ಪ್ರಸ್ತುತ ವ್ಯಾಕ್ಸಿನೇಷನ್ ದರದಲ್ಲಿ -ಜನಸಂಖ್ಯೆಯ ಸುಮಾರು 7.6 ಪ್ರತಿಶತದಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ. ಮುಂಬರುವ ಅಲೆಯಲ್ಲಿ ದೇಶವು ದಿನಕ್ಕೆ 6 ಲಕ್ಷ ಪ್ರಕರಣಗಳಿಗೆ ಸಾಕ್ಷಿಯಾಗಬಹುದು.
India reports 25,467 new #COVID19 cases, 39,486 recoveries and 354 deaths in the last 24 hrs, as per Health Ministry.
Total cases: 3,24,74,773 Total recoveries: 3,17,20,112 Active cases: 3,19,551 Death toll: 4,35,110
Total vaccinated: 58,89,97,805 (63,85,298 in last 24 hrs) pic.twitter.com/Z0xo6jqVJ6
— ANI (@ANI) August 24, 2021
ಕೇರಳದ ಸಕಾರಾತ್ಮಕತೆಯ ದರ ಏರಿಕೆಯಾಗುತ್ತಿರುವುದರಿಂದ, ಮುಂದಿನ 4 ವಾರಗಳು ಅತ್ಯಂತ ನಿರ್ಣಾಯಕವಾಗಿದ್ದು, ಜನರು ಹೆಚ್ಚಿನ ಜಾಗರೂಕರಾಗಿರಬೇಕು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಸಂಭವನೀಯ ಮೂರನೇ ಕೊವಿಡ್ -19 ಅಲೆಯ ಬೆದರಿಕೆ, ಸ್ಥಳಗಳನ್ನು ಮತ್ತೆ ತೆರೆಯುವುದು ಮತ್ತು ಓಣಂ ಆಚರಣೆಗಳು ರಾಜ್ಯದಲ್ಲಿ ಭಯವನ್ನು ಹೆಚ್ಚಿಸಿವೆ. ಇಂದು ಬೆಳಿಗ್ಗೆ ನಡೆಯುತ್ತಿರುವ ಪರಿಸ್ಥಿತಿಯನ್ನು ಅವಲೋಕಿಸಲು ಆರೋಗ್ಯ ಇಲಾಖೆಯ ತುರ್ತು ಪರಿಶೀಲನಾ ಸಭೆ ನಡೆಯಲಿದೆ.
ಮೊದಲನೆಯದಾಗಿ ಫೈಜರ್-ಬಯೋಎನ್‌ಟೆಕ್‌ನ ಕೊವಿಡ್ -19 ಲಸಿಕೆಗೆ ಅಮೆರಿಕ ಸಂಪೂರ್ಣ ಅನುಮೋದನೆ ನೀಡಿತು. ಇದು ಸಾರ್ವಜನಿಕ ಆರೋಗ್ಯ ಮತ್ತು ವಿಶ್ವದಾದ್ಯಂತ ಲಸಿಕೆ ಸಂದೇಹವನ್ನು ನಿರ್ಮೂಲನೆ ಮಾಡುವ ಪ್ರಮುಖ ಮೈಲಿಗಲ್ಲು. ಎಲ್ಲಾ ಇತರ ಕೊವಿಡ್ -19 ಲಸಿಕೆಗಳು ತುರ್ತು ಬಳಕೆಯ ಅಧಿಕಾರವನ್ನು ಹೊಂದಿವೆ, ಇದನ್ನು ಸಾಂಕ್ರಾಮಿಕದಂತಹ ತುರ್ತು ಸಂದರ್ಭಗಳಲ್ಲಿ ನೀಡಲಾಗುತ್ತದೆ.
58.89 ಕೋಟಿ ಲಸಿಕೆ ಡೋಸ್ ವಿತರಣೆ ಮಂಗಳವಾರ ಬೆಳಿಗ್ಗೆ ತನಕ 58.89 ಕೋಟಿ ಕೊವಿಡ್ -19 ಲಸಿಕೆ ಪ್ರಮಾಣವನ್ನು ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ನೀಡಲಾಯಿತು. ಅಲ್ಲದೆ, ಸೋಮವಾರ 16,47,526 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ ಕೊವಿಡ್ -19 ಪತ್ತೆಗಾಗಿ ನಡೆಸಿದ ಒಟ್ಟು 50,93,91,792 ಪರೀಕ್ಷೆಗಳನ್ನು ಮಾಡಲಾಗಿದೆ.
ಕೊವಿಡ್ -19: ಭಾರತದ ಧನಾತ್ಮಕ ದರ 1.94% ಮಂಗಳವಾರ ಭಾರತದ ದೈನಂದಿನ ಕೋವಿಡ್ -19 ಧನಾತ್ಮಕ ದರವು 1.94 ಶೇಕಡಾ ದಾಖಲಾಗಿದೆ. ಕಳೆದ 28 ದಿನಗಳಿಂದ ಇದು ಶೇಕಡಾ ಮೂರಕ್ಕಿಂತ ಕಡಿಮೆ ಇದೆ. ಸಾಪ್ತಾಹಿಕ ಧನಾತ್ಮಕ ದರವು 1.90 ಶೇಕಡಾ ದಾಖಲಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 60 ದಿನಗಳಿಂದ ಇದು ಶೇಕಡಾ ಮೂರು ಕ್ಕಿಂತ ಕಡಿಮೆ ಇದೆ. ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 3,17,20,112 ಕ್ಕೆ ಏರಿದೆ, ಪ್ರಕರಣದ ಸಾವಿನ ಪ್ರಮಾಣವು 1.34 ಶೇಕಡಾ ಎಂದು ಅಂಕಿ ಅಂಶಗಳು ತಿಳಿಸಿದೆ.
ಆಗಸ್ಟ್‌ನಲ್ಲಿ ಎಂಟನೇ ಬಾರಿಗೆ ಧಾರಾವಿಯಲ್ಲಿ ಯಾವುದೇ ಹೊಸ ಕೊವಿಡ್ ಪ್ರಕರಣ ಕಂಡುಬಂದಿಲ್ಲ ಈ ತಿಂಗಳಲ್ಲಿ ಎಂಟನೇ ಬಾರಿಗೆ, ಮುಂಬೈನ ಧಾರಾವಿ ಕೊಳೆಗೇರಿ ಕಾಲೋನಿ ಸೋಮವಾರ ಯಾವುದೇ ಹೊಸ ಕೊವಿಡ್ ಪ್ರಕರಣವನ್ನು ವರದಿ ಮಾಡಿಲ್ಲ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಧಾರಾವಿಯಲ್ಲಿ ಕೇವಲ 11 ಸಕ್ರಿಯ ಪ್ರಕರಣಗಳಿವೆ. ದಾಖಲಾದ 7,005 ಸೋಂಕುಗಳಲ್ಲಿ, 6,596 ರೋಗಿಗಳು ಈಗಾಗಲೇ ಚೇತರಿಸಿಕೊಂಡಿದ್ದಾರೆ ಮತ್ತು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ವೇರಿಯಂಟ್‌ನ 27 ಪ್ರಕರಣಗಳು ಪತ್ತೆ ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಡೆಲ್ಟಾ ರೂಪಾಂತರಿಯ 27 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣ 103 ಕ್ಕೆ ಏರಿದೆ. ಡೆಲ್ಟಾ ರೂಪಾಂತರವು ಮುಂಬೈನಲ್ಲಿ 128 ಸ್ವ್ಯಾಬ್ ಮಾದರಿಗಳಲ್ಲಿ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮತ್ತು ಬಿಎಂಸಿ ಸೋಮವಾರ ತಿಳಿಸಿದೆ .
ಇದನ್ನೂ ಓದಿ: ಡಿಸೆಂಬರ್ 2022ರವರೆಗೆ ಮಾಸ್ಕ್ ಬಳಸಬೇಕಾಗಿ ಬರಬಹುದು: ಮಹಾರಾಷ್ಟ್ರ ಕೊವಿಡ್ ಕಾರ್ಯಪಡೆ
ಇದನ್ನೂ ಓದಿ: 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧಾರ; ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಚಿಂತನೆ
(India records 25,467 new Covid-19 cases and 354 deaths in the 24 hours as per health ministry)
Published On - 10:35 am, Tue, 24 August 21