Krishna Janmashtami 2021: ಈ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ದಿನಾಂಕ ಮತ್ತು ಶುಭ ಮುಹೂರ್ತ

Krishna Janmashtami 2021 Date: ಹಿಂದೂ ಪುರಾಣಗಳ ಪ್ರಕಾರ ಈ ದಿನ ಮಹತ್ವದ ದಿನವಾಗಿದೆ. ಶ್ರೀ ಕೃಷ್ಣನ ಭಕ್ತರು ಈ ದಿನದ ವಿಶೇಷವಾಗಿ ಕೃಷ್ಣನ ದೇಗುಲಗಳಿಗೆ ಭೇಟಿ ನೀಡುತ್ತಾರೆ. ವಿಶೇಷ ಪೂಜೆ ಕೈಗೊಳ್ಳುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ.

Krishna Janmashtami 2021: ಈ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ದಿನಾಂಕ ಮತ್ತು ಶುಭ ಮುಹೂರ್ತ
ಶ್ರೀಕೃಷ್ಣ ಜನ್ಮಾಷ್ಟಮಿ 2021
Follow us
TV9 Web
| Updated By: shruti hegde

Updated on: Aug 24, 2021 | 10:27 AM

ಕೃಷ್ಣ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎಂದೂ ಕರೆಯಲಾಗುತ್ತದೆ. ಇದು ಹಿಂದೂಗಳ ಅತ್ಯಂತ ಪ್ರಸಿದ್ದ ಹಬ್ಬಗಳಲ್ಲಿ ಒಂದು. ಹಿಂದೂ ಪುರಾಣಗಳ ಪ್ರಕಾರ ಭಗವಾನ್ ವಿಷ್ಣುವಿನ ಒಂಭತ್ತನೇ ಅವತಾರವಾದ ಶ್ರೀಕೃಷ್ಣನು ಈ ದಿನ ಜನಿಸಿದನು. ಆದ್ದರಿಂದ ಈ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ.

ಕೃಷ್ಣ ಜನ್ಮಾಷ್ಟಮಿ 2021: ದಿನಾಂಕ ಹಿಂದೂ ಕ್ಯಾಲೆಂಡರ್ ಪ್ರಕಾರ ಜನ್ಮಾಷ್ಟಮಿಯನ್ನು ಭಾದ್ರಪದ ಮಾಸ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್​ನ ಆಗಸ್ಟ್ ಅಥವಾ ಸಪ್ಟೆಂಬರ್ ತಿಂಗಳಿನಲ್ಲಿ ಬರುತ್ತದೆ. ಈ ವರ್ಷದ ಕೃಷ್ಣ ಜನ್ಮಾಷ್ಟಮಿಯನ್ನು 2021 ಆಗಸ್ಟ್ 30, ಸೋಮವಾರದಂದು ಆಚರಿಸಲಾಗುತ್ತಿದೆ.

ಈ ವರ್ಷದ ಕೃಷ್ಣ ಜನ್ಮಾಷ್ಟಮಿಯಂದು ಆಗಸ್ಟ್ 29ರ ರಾತ್ರಿ 11.25ರಿಂದ ಆಗಸ್ಟ್ 30ರ ರಾತ್ರಿ 1.59ರವರೆಗೆ ಅಷ್ಟಮಿ ತಿಥಿ ಇರಲಿದೆ. ಆಗಸ್ಟ್ 30ರ ರಾತ್ರಿ 12.44 ರಿಂದ ಶುಭ ಮುಹೂರ್ತ ಪ್ರಾರಂಭಗೊಳ್ಳುತ್ತದೆ. 45 ನಿಮಿಷಗಳ ಕಾಲ ಶುಭ ಮುಹೂರ್ತ ಇರಲಿದೆ.

ಕೃಷ್ಣ ಜನ್ಮಾಷ್ಟಮಿ: ಇತಿಹಾಸ ಶ್ರೀಕೃಷ್ಣನು ಈ ದಿನ ಮಥುರಾ ನಗರದಲ್ಲಿ ಜನಿಸಿದನು. ಕೃಷ್ಣ ಹುಟ್ಟಿದ ಘಳಿಗೆಯಿಂದ ಅವನ ಚಿಕ್ಕಪ್ಪ ಕಂಸನಿಂದ ಜೀವಕ್ಕೇ ಅಪಾಯವಿತ್ತು. ಕೃಷ್ಣನನ್ನು ರಕ್ಷಿಸುವ ಸಲುವಾಗಿ ಅವನ ತಂದೆ ವಾಸುದೇವ ಅವನನ್ನು ಸಣ್ಣ ಬುಟ್ಟಿಯಲ್ಲಿ ಮಲಗಿಸಿ ಯಮುನಾ ನದಿಯ ಮೂಲಕ ಬೃಂದಾವನಕ್ಕೆ ಕರೆದೊಯ್ದನು. ಕೃಷ್ಣನ್ನು ಯಶೋಧ ಮತ್ತು ನಂದಾ ಪುತ್ರನಾಗಿ ದತ್ತು ಪಡೆದರು.

ಹಿಂದೂ ಪುರಾಣಗಳ ಪ್ರಕಾರ ಈ ದಿನ ಮಹತ್ವದ ದಿನವಾಗಿದೆ. ಶ್ರೀ ಕೃಷ್ಣನ ಭಕ್ತರು ಈ ದಿನದ ವಿಶೇಷವಾಗಿ ಕೃಷ್ಣನ ದೇಗುಲಗಳಿಗೆ ಭೇಟಿ ನೀಡುತ್ತಾರೆ. ವಿಶೇಷ ಪೂಜೆ ಕೈಗೊಳ್ಳುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ. ಇನ್ನು ಕೆಲವರು ಉಪವಾಸ ಕೈಗೊಳ್ಳುವ ಮೂಲಕ ಶ್ರೀಕೃಷ್ಣನ ಮೊರೆ ಹೋಗುತ್ತಾರೆ.

ಆಚರಿಸುವ ವಿಧಾನ ದೇವರ ಮನೆಯಲ್ಲಿ ಶ್ರೀ ಕೃಷ್ಣನ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತದೆ. ದೇವರ ಮುಂದೆ ದೀಪ ಬೆಳಗಿ ಪ್ರಾರ್ಥಿಸಲಾಗುತ್ತದೆ. ವಿಶೇಷವಾಗಿ ದೇವರಿಗೆ ಬೆಣ್ಣೆ, ಕಲ್ಲು ಸಕ್ಕರೆ ಜತೆಗೆ ತಯಾರಿಸಿದ ಇನ್ನಿತರ ಖಾದ್ಯಗಳನ್ನು ನೈವೇದ್ಯಕ್ಕೆ ನೀಡಲಾಗುತ್ತದೆ. ಶ್ರೀ ಕೃಷ್ಣನಿಗೆ ತುಳಸಿ ಮತ್ತು ಗಂಗಾಜಲ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಶ್ರೀಕೃಷ್ಣನ ಪ್ರಾರ್ಥನೆ ಕೈಗೊಳ್ಳುವ ಮೂಲಕ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಇದನ್ನೂ ಓದಿ:

ಬಳ್ಳಾರಿಯಲ್ಲಿ ತಲೆ ಎತ್ತಲಿದೆ ಮೈನಿಂಗ್ ಕಾಲೇಜು; ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಕಲ ಸಿದ್ಧತೆ

ದ್ವಾಪರಯುಗದ ಶ್ರೀಕೃಷ್ಣ ಕೊಳಲ ಊದುತಾ ಗೋವುಗಳ ಕಾಯುತ್ತಿದ್ದ.. ಅದೇ ರೀತಿ ಇಲ್ಲೊಬ್ಬ ಕಲಿಯುಗದ ಕೃಷ್ಣನ ನಾದ ಸ್ವರ ಕೇಳಿ!

(Know about krishna janmashtami 2021 date significance and importance)