ಆಸ್ತಿ ವಿವಾದಕ್ಕೆ ಅಂತ್ಯ ಇಲ್ಲ; ಅಂತ್ಯಕ್ರಿಯೆಯೂ ಸ್ಥಗಿತ, ನಾಲ್ಕು ದಿನದಿಂದ ಆಸ್ಪತ್ರೆಯಲ್ಲಿಯೇ ಇರುವ ಪಾರ್ಥಿವ ಶರೀರ

Land Dispute: ವಿವಾದಕ್ಕೆ ಸಂಬಂಧಿಸಿ ಇಬ್ಬರು ಸಹೋದರರು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಾಲ್ಕು ದಿನಗಳ ಹಿಂದೆ ಈ ಜಮೀನು ವಿವಾದದಲ್ಲಿ ಎರಡು ಕುಟುಂಬಗಳ ಸಹೋದರರು ಜಗಳವಾಡಿದ್ದರು.

ಆಸ್ತಿ ವಿವಾದಕ್ಕೆ ಅಂತ್ಯ ಇಲ್ಲ; ಅಂತ್ಯಕ್ರಿಯೆಯೂ ಸ್ಥಗಿತ, ನಾಲ್ಕು ದಿನದಿಂದ ಆಸ್ಪತ್ರೆಯಲ್ಲಿಯೇ ಇರುವ ಪಾರ್ಥಿವ ಶರೀರ
ಆಸ್ತಿ ವಿವಾದಕ್ಕೆ ಅಂತ್ಯ ಇಲ್ಲ
Follow us
ಸಾಧು ಶ್ರೀನಾಥ್​
|

Updated on: Jul 11, 2023 | 1:11 PM

ಬಹುತೇಕ ಎಲ್ಲ ಮಾನವ ಸಂಬಂಧಗಳು ಆರ್ಥಿಕ ಸ್ಥಿತಿಗತಿಗಳಿಗೆ ಸಂಬಂಧ ಹೊಂದಿವೆ. ಈ ಆರ್ಥಿಕ ಸಂಬಂಧಗಳೇ ಮನುಷ್ಯನ ಅಂತಿಮ ಸಂಸ್ಕಾರಕ್ಕೂ (Last Rites) ಅಡ್ಡಗೋಡೆಯಾಗಿ ನಿಂತುಬಿಟ್ಟಿವೆ. ಜಮೀನು ವಿವಾದದಿಂದ (Land Dispute) ಸಾವನ್ನಪ್ಪಿದ ಚಿಕ್ಕ ಸಹೋದರನ ಅಂತ್ಯಕ್ರಿಯೆ ನಿಲ್ಲಿಸಲಾಗಿದೆ. ಜಮೀನು ಸಿಗುವವರೆಗೂ ಶವಸಂಸ್ಕಾರ ಮಾಡೋಲ್ಲ ಅನ್ನುತ್ತಿದ್ದಾರೆ ಕುಟುಂಬಸ್ಥರು (Family Dispute). ನಾಲ್ಕು ದಿನಗಳಿಂದ ಮೃತ ದೇಹವು ಆಸ್ಪತ್ರೆಯ ಶವಾಗಾರದಲ್ಲಿಯೇ ಇದೆ. ಇನ್ನು ವಿವರಗಳಿಗೆ ಹೋದರೆ..

ನಲ್ಗೊಂಡ ಜಿಲ್ಲೆಯ ಪೊಲಿಯಾ ಮಂಡಲದ ಯಾಚಾರದಲ್ಲಿ ಬೈರು ಚೆನ್ನಯ್ಯ ಮತ್ತು ಬೈರು ಸೈದುಲು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಹೋದರರಾದ ಇವರಿಬ್ಬರಿಗೂ ಪಿತ್ರಾರ್ಜಿತವಾಗಿ ಬಂದ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ತಂದೆಯ ಮರಣದ ನಂತರ ಪಿತ್ರಾರ್ಜಿತವಾಗಿ ಬಂದ ನಾಲ್ಕು ಎಕರೆ ಭೂಮಿಯನ್ನು ಹಿರಿಯ ಮಗ ಬೈರು ಚೆನ್ನಯ್ಯನ ಹೆಸರಿಗೆ ವರ್ಗಾಯಿಸಲಾಯಿತು. ಅದಾದ ನಂತರ ಈ ನಾಲ್ಕು ಎಕರೆ ಜಮೀನಿಗೆ ಸಂಬಂಧಿಸಿದಂತೆ ಕೆಲ ದಿನಗಳಿಂದ ಸಹೋದರರ ನಡುವೆ ಜಗಳ ನಡೆಯುತ್ತಿತ್ತು.

ಈ ವಿವಾದಕ್ಕೆ ಸಂಬಂಧಿಸಿ ಇಬ್ಬರು ಸಹೋದರರು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಾಲ್ಕು ದಿನಗಳ ಹಿಂದೆ ಈ ಜಮೀನು ವಿವಾದದಲ್ಲಿ ಎರಡು ಕುಟುಂಬಗಳ ಸಹೋದರರು ಜಗಳವಾಡಿದ್ದರು. ದೊಡ್ಡಣ್ಣ ಬೈರು ಚೆನ್ನಯ್ಯ ಅವರ ಕುಟುಂಬ ಸದಸ್ಯರ ದಾಳಿಯಲ್ಲಿ ಚಿಕ್ಕವನಾದ ಸೈದುಲು ಪ್ರಜ್ಞಾಹೀನರಾಗಿಬಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸೈದುಲು ಮೃತಪಟ್ಟಿದ್ದಾರೆ. ಆಸ್ತಿ ಹಕ್ಕು ಪ್ರಕರಣದಲ್ಲಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಸೈದರು ಮೃತದೇಹದೊಂದಿಗೆ ಚೆನ್ನಯ್ಯನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

Also Read:   ಬಸ್ ಕಾಲುವೆಗೆ ಉರುಳಿ 7 ಮಂದಿ ಸಾವು, 15 ಜನರಿಗೆ ಗಾಯ

ಸೈದು ಅವರ ಪುತ್ರಿ ಪೂಜಿತಾ ದೂರಿನ ಮೇರೆಗೆ ಪೊಲಿಯಾ ಪೊಲೀಸರು ಚೆನ್ನಯ್ಯ ಅವರ ಕುಟುಂಬದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಗಾರ್ಜುನ ಸಾಗರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆದರೆ ಮೃತದೇಹ ತೆಗೆದುಕೊಳ್ಳಲು ಸೈದು ಕುಟುಂಬಸ್ಥರು ನಾವು ಸಿದ್ಧವಿಲ್ಲಆನ್ನುತ್ತಿದ್ದಾರೆ. ತಮ್ಮ ಪಾಲಿನ ಜಮೀನು ಕೊಡುವವರೆಗೂ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ನಡೆಸುವುದಿಲ್ಲ ಎಂದು ಸೈದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

ಇದರಿಂದ ನಾಲ್ಕು ದಿನಗಳಿಂದ ನಾಗಾರ್ಜುನ ಸಾಗರ ಆಸ್ಪತ್ರೆಯಲ್ಲಿ ಸೈದುಲು ಮೃತದೇಹ ಇದೆ. ಈ ವಿಚಾರದಲ್ಲಿ ಏನು ಮಾಡಬೇಕೆಂದು ತೋಚದೆ ಪೊಲೀಸರು ತಲೆ ಬಿಸಿ ಮಾಡಿಕೊಂಡಿದ್ದಾರೆ. ಸೈದು ಅವರ ಮೃತದೇಹದ ಅಂತ್ಯಸಂಸ್ಕಾರದ ವಿಧಿವಿಧಾನಕ್ಕೆ ಗ್ರಾಮದ ಹಿರಿಯರು ಸೈದುವರ ಕುಟುಂಬಸ್ಥರಿಗೆ ತಿಳಿಯ ಹೇಳುತ್ತಿದ್ದಾರೆ. ಈ ಜಮೀನು ವಿವಾದ ಬಗೆಹರಿಸಲು ಗ್ರಾಮದ ಹಿರಿಯರು ತಮ್ಮ ಕೈಲಾದ ಮಟ್ಟಿಗೆ ಪ್ರಯತ್ನಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?