AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಯಾಣದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್​; ಹೆದ್ದಾರಿಗಳೆಲ್ಲ ಬಂದ್​

ರೈತರ ಮೇಲೆ ನಡೆಸಿದ ಲಾಠಿ ಚಾರ್ಜ್​ನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡು, ರಕ್ತಸಿಕ್ತ ಆಗಿರುವ ರೈತರೊಬ್ಬರ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಹರ್ಯಾಣದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್​; ಹೆದ್ದಾರಿಗಳೆಲ್ಲ ಬಂದ್​
ಹರ್ಯಾಣದ ಕರ್ನಾಲ್​ನಲ್ಲಿ ರೈತರ ಮೇಲೆ ಲಾಠಿ ಚಾರ್ಜ್​
TV9 Web
| Edited By: |

Updated on:Aug 28, 2021 | 6:23 PM

Share

ಇಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್​ ಖಟ್ಟರ್ (Haryana Chief Minister Manohar Lal Khattar), ಬಿಜೆಪಿ ಕಾರ್ಯಕಾರಿಣಿ ಸಭೆ ಸಲುವಾಗಿ ಕರ್ನಾಲ್​​ (Karnal)ದ ಘರೌಂಡಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ, ಅವರ ಆಗಮನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ. ಈ ಲಾಠಿ ಚಾರ್ಜ್​ ವೇಳೆ ಕೆಲವರಿಗೆ ತೀವ್ರ ಗಾಯವಾಗಿ, ರಕ್ತ ಸುರಿಯುತ್ತಿದ್ದು, ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ (Rahul Gandhi) ಫೋಟೋ ಶೇರ್ ಮಾಡಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾಠಿ ಚಾರ್ಜ್​​ನಿಂದ ಕೋಪಗೊಂಡ ಸಂಯುಕ್ತ ಕಿಸಾನ್​ ಮೋರ್ಚಾ ರೈತ ಸಂಘಟನೆ (SKM), ಹರ್ಯಾಣ (Haryana)ದ ಎಲ್ಲ ಹೆದ್ದಾರಿ ಮತ್ತು ಟೋಲ್​ ಪ್ಲಾಜಾಗಳನ್ನು ಬಂದ್​ ಮಾಡುವಂತೆ ರೈತರಿಗೆ ಕರೆ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್​ಕೆಎಂನ ದರ್ಶನ್​ ಪಾಲ್​, ರೈತರು ಕರ್ನಾಲ್​ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ, ಅವರ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. 100ಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನೆಲ್ಲ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.  ಹಾಗೇ, ಬಂಧನಕ್ಕೆ ಒಳಗಾದವರೆಲ್ಲ ಬಿಡುಗಡೆಯಾಗುವವರೆಗೂ ಹರ್ಯಾಣದ ಎಲ್ಲ ಹೆದ್ದಾರಿ, ಟೋಲ್​ ಪ್ಲಾಜಾಗಳನ್ನು ಬಂದ್​ ಮಾಡಿ ಎಂದು ಭಾರತೀಯ ಕಿಸಾನ್​ ಯೂನಿಯನ್​​ನ ಹರ್ಯಾಣ ಮುಖ್ಯಸ್ಥ ಗುರ್ನಾಮ್​ ಸಿಂಗ್​ ಚದುನಿ ರೈತರಿಗೆ ಕರೆ ನೀಡಿದ್ದಾರೆ.   ಇದೀಗ ಕಲ್ಕಾ-ಝಿರಾಕ್​ಪುರ ಹೆದ್ದಾರಿಯ ಸರ್ಜಾಪುರ ಟೋಲ್​ ಪ್ಲಾಜಾ ರೈತರಿಂದ ಬಂದ್​  ಆಗಿದ್ದು, ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಟ್ರಾಫಿಕ್​ ಪೊಲೀಸ್​ ಸೂಚನೆ ನೀಡಿದ್ದಾರೆ.

ಲಾಠಿ ಚಾರ್ಜ್ ಖಂಡಿಸಿದ ರಾಹುಲ್​ ಗಾಂಧಿ ರೈತರ ಮೇಲೆ ನಡೆಸಿದ ಲಾಠಿ ಚಾರ್ಜ್​ನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡು, ರಕ್ತಸಿಕ್ತ ಆಗಿರುವ ರೈತರೊಬ್ಬರ ಫೋಟೋ ಶೇರ್ ಮಾಡಿಕೊಂಡಿರುವ ರಾಹುಲ್​ ಗಾಂಧಿ, ರೈತ ರಕ್ತ ಸುರಿಸುವಂತೆ ಮತ್ತೊಮ್ಮೆ ಮಾಡಿದ್ದಾರೆ..ಭಾರತದ ತಲೆ ನಾಚಿಕೆಯಿಂದ ಬಾಗುತ್ತಿದೆ ಎಂದು ಹೇಳಿದ್ದಾರೆ.  ಕೇಂದ್ರ ಸರ್ಕಾರ ಕಳೆದ ವರ್ಷ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದಾಗಿನಿಂದಲೂ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ಕಾಯ್ದೆಗಳನ್ನು ಕೇಂದ್ರ ವಾಪಸ್ ಪಡೆದ ವಿನಃ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: Afghanistan: ತಾಲಿಬಾನ್ ವಶದಲ್ಲಿದೆ ಆಧುನಿಕ ಶಸ್ತ್ರಾಸ್ತ್ರಗಳು; ಅವುಗಳು ಯಾವುವು? ಬಳಕೆ ಹೇಗೆ? ಭಾರತಕ್ಕೆ ಏನು ಹಾನಿ?

ಪತಿ ಡೇನಿಯಲ್​ ಜತೆ ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಡಲಿದ್ದಾರೆ ಸನ್ನಿ ಲಿಯೋನ್​?

Published On - 6:14 pm, Sat, 28 August 21