ಸೀಮಾ ಈಗ ಮುಸ್ಲಿಂ ಅಲ್ಲ ಹಿಂದೂ, ಪಾಕಿಸ್ತಾನಕ್ಕೆ ಮತ್ತೆ ಹೋಗಲ್ಲ: ವಕೀಲ ಎಪಿ ಸಿಂಗ್

ಸೀಮಾ ಹೈದರ್ ಈಗ ಮುಸ್ಲಿಂ ಅಲ್ಲ ಹಿಂದೂ, ಯಾವುದೇ ಕಾರಣಕ್ಕೂ ಭಾರತ ಬಿಟ್ಟು ಹೋಗುವುದಿಲ್ಲ ಎಂದು ಆಕೆಯ ಪರ ವಕೀಲ ಎಪಿ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ ದಾಳಿ ಬಳಿಕ ಭಾರತವು ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ಹಾಗೂ ಈ ಹಿಂದೆ ವೀಸಾ ಪಡೆದು ಭಾರತಕ್ಕೆ ಬಂದಿರುವವರೆಲ್ಲರೂ ದೇಶವನ್ನು ತೊರೆಯಬೇಕು ಎಂದು ಆದೇಶ ಹೊರಡಿಸಿತ್ತು.

ಸೀಮಾ ಈಗ ಮುಸ್ಲಿಂ ಅಲ್ಲ ಹಿಂದೂ, ಪಾಕಿಸ್ತಾನಕ್ಕೆ ಮತ್ತೆ ಹೋಗಲ್ಲ: ವಕೀಲ ಎಪಿ ಸಿಂಗ್
ಸೀಮಾ ಹೈದರ್

Updated on: May 01, 2025 | 7:51 AM

ಉತ್ತರ ಪ್ರದೇಶ, ಮೇ 1: ಪ್ರೇಮಿಗಾಗಿ ಪಾಕಿಸ್ತಾನ ತೊರೆದು ಅಕ್ರಮವಾಗಿ ಮೂವರು ಮಕ್ಕಳೊಂದಿಗೆ ಭಾರತ ಪ್ರವೇಶಿಸಿದ್ದ ಸೀಮಾ ಹೈದರ್(Seema Haider) ಮತ್ತೆ ಪಾಕಿಸ್ತಾನಕ್ಕೆ ಹೋಗುತ್ತಾರಾ ಎನ್ನುವ ಪ್ರಶ್ನೆಗಳು ಎದ್ದಿದ್ದವು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ ದಾಳಿ ಬಳಿಕ ಭಾರತವು ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ಹಾಗೂ ಈ ಹಿಂದೆ ವೀಸಾ ಪಡೆದು ಭಾರತಕ್ಕೆ ಬಂದಿರುವವರೆಲ್ಲರೂ ದೇಶವನ್ನು ತೊರೆಯಬೇಕು ಎಂದು ಆದೇಶ ಹೊರಡಿಸಿತ್ತು.

ಇದಾದ ಬಳಿಕ ಸೀಮಾ ಹೈದರ್ ಪಾಕಿಸ್ತಾನಕ್ಕೆ ಹೋಗುತ್ತಾರಾ ಎನ್ನುವ ಪ್ರಶ್ನೆಯನ್ನು ಕೆಲವರು ಕೇಳಿದ್ದರು. ಆದರೆ ಸೀಮಾ ಪರ ವಕೀಲ ಎಪಿ ಸಿಂಗ್ ಮಾತನಾಡಿದ್ದು, ಸೀಮಾ ಸನಾತನ ಧರ್ಮವನ್ನು ಅನುಸರಿಸುತ್ತಿದ್ದಾರೆ, ಆಕೆ ಈಗ ಮುಸ್ಲಿಂ ಅಲ್ಲ ಹಿಂದೂವಾಗಿ ಮತಾಂತರಗೊಂಡಿದ್ದಾರೆ. ಆಕೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಸೀಮಾ ಹೈದರ್ ಎಂಬಾಕೆ ಆನ್​ಲೈನ್​ ಗೇಮಿಂಗ್​ನಲ್ಲಿ ಪರಿಚಯವಾದ ಸಚಿನ್ ಮೀನಾ ಎಂಬುವವರನ್ನು ಪ್ರೀತಿಸಲು ಆರಂಭಿಸಿದ್ದರು. ಆತನಿಗಾಗಿ ಮೂವರು ಮಕ್ಕಳನ್ನು ಕರೆದುಕೊಂಡು, ಗಂಡನನ್ನು ತೊರೆದು ನೇಪಾಳ ಮೂಲಕ ಭಾರತ ಪ್ರವೇಶಿಸಿದ್ದರು. ಅವರನ್ನು ಜೈಲಿಗೆ ಕೂಡ ಕಳುಹಿಸಲಾಗಿತ್ತು. ಬಳಿಕ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ
ಅಕ್ರಮವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್​ಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸೋ ಚಾನ್ಸ್​
ಸೀಮಾ ಹೈದರ್ ಹಿಂತಿರುಗದಿದ್ದರೆ ಭಾರತದ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಕರೆ; ಸುದ್ದಿಯಲ್ಲಿರುವ ಈ ಮಹಿಳೆ ಯಾರು?
ಸೀಮಾ ಹೈದರ್ ಮರಳಿ ಬರದಿದ್ದರೆ ’26/11 ರೀತಿಯಲ್ಲೇ ಉಗ್ರ ದಾಳಿ’; ಮುಂಬೈ ಪೊಲೀಸರಿಗೆ ಬೆದರಿಕೆ ಕರೆ
ಪಬ್​​ಜಿ ಮೂಲಕ ನೋಯ್ಡಾ ವ್ಯಕ್ತಿ ಜತೆ ಸ್ನೇಹ; ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಬಂದು ಸಿಕ್ಕಿಬಿದ್ದ ಪಾಕಿಸ್ತಾನದ ಮಹಿಳೆ

ಮತ್ತಷ್ಟು ಓದಿ: ಪ್ರೇಮಿಗಾಗಿ ವೀಸಾ ಇಲ್ಲದೆ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ 48 ಗಂಟೆಗಳಲ್ಲಿ ಪಾಕ್​ಗೆ ಹಿಂದಿರುಗುತ್ತಾರಾ?

ಆಕೆ ಸಚಿನ್ ಮೀನಾರನ್ನು ಹಿಂದೂ ವಿಧಿ ವಿಧಾನಗಳ ಪ್ರಕಾರ ಮದುವೆಯಾಗಿದ್ದಾರೆ, ಅವರಿಬ್ಬರಿಗೆ ಒಂದು ಮಗು ಕೂಡ ಇದೆ. ಆಕೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬುದರ ಕುರಿತು ಆಕೆಯ ಪರ ವಕೀಲ ಎಪಿ ಸಿಂಗ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಆಕೆ ಮಾರ್ಚ್​ 18ರಂದು ಮಗುವಿಗೆ ಜನ್ಮ ನೀಡಿದ್ದಾಳೆ. ಉತ್ತರ ಪ್ರದೇಶದ ನ್ಯಾಯಾಲಯದಿಂದ ಜಾಮೀನು ಪಡೆದ ನಂತರ, ಅವರು ಎಲ್ಲಾ ಷರತ್ತುಗಳನ್ನು ಪಾಲಿಸುತ್ತಾ ರಬುಪುರದಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ.ಗಡಿ ಸಮಸ್ಯೆ ಸಂಪೂರ್ಣವಾಗಿ ಪ್ರತ್ಯೇಕವಾಗಿದೆ ಮತ್ತು ಅದನ್ನು ಬೇರೆ ಯಾವುದೇ ವಿವಾದಕ್ಕೆ ಜೋಡಿಸಬಾರದು. ಸೀಮಾ ಪ್ರಸ್ತುತ ತನ್ನ ಅನಾರೋಗ್ಯ ಪೀಡಿತ ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಸೀಮಾ ಹೈದರ್ ಪ್ರಕರಣವನ್ನು ಉತ್ತರ ಪ್ರದೇಶ ಎಟಿಎಸ್, ಪೊಲೀಸರು ಮತ್ತು ಇತರ ಸಂಸ್ಥೆಗಳು ಕೂಲಂಕಷವಾಗಿ ತನಿಖೆ ನಡೆಸುತ್ತಿವೆ ಎಂದು ಎಪಿ ಸಿಂಗ್ ಮಾಹಿತಿ ನೀಡಿದರು. ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಡಬೇಕು ಮತ್ತು ಯಾವುದೇ ರೀತಿಯ ವದಂತಿಗಳಿಗೆ ಗಮನ ಕೊಡಬಾರದು ಎಂದು ಅವರು ಜನರಿಗೆ ಮನವಿ ಮಾಡಿದರು.

ಜುಲೈ 21 ರಂದು ಸೀಮಾ ಭಾರತೀಯ ಪೌರತ್ವಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದರು . ಜುಲೈ 30 ರಂದು ಸೀಮಾ ಒಂದು ವಿಡಿಯೋ ಕೂಡ ಬಿಡುಗಡೆ ಮಾಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:50 am, Thu, 1 May 25