ಸಿಡಿದೆದ್ದ ರಾಜಕೀಯ ಪಕ್ಷಗಳಿಗೆ ಕೊರೊನಾ 3ನೇ ಅಲೆ ನೆನಪಿಸಿದ ಅರವಿಂದ್ ಕೇಜ್ರಿವಾಲ್​; ದೆಹಲಿ ಜನರ ಜೀವರಕ್ಷಣೆಗಾಗಿ ಅಪರಾಧ ಮಾಡಿದೆ ಎಂದ ಸಿಎಂ

ನಾನು ಈ ಅಪರಾಧ ಮಾಡಿದ್ದು 2 ಕೋಟಿ ಜನರ ಜೀವ ರಕ್ಷಣೆಗಾಗಿ. ನೀವೆಲ್ಲ ಚುನಾವಣಾ ಪ್ರಚಾರದಲ್ಲಿ ಮೈಮರೆತಿದ್ದ ಸಂದರ್ಭದಲ್ಲಿ ನಾನು ಆಕ್ಸಿಜನ್​​ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಇದಕ್ಕಾಗಿ ಹಲವು ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದೇನೆ ಎಂದು ಅರವಿಂದ್ ಕೇಜ್ರಿವಾಲ್​ ತಿಳಿಸಿದ್ದಾರೆ.

ಸಿಡಿದೆದ್ದ ರಾಜಕೀಯ ಪಕ್ಷಗಳಿಗೆ ಕೊರೊನಾ 3ನೇ ಅಲೆ ನೆನಪಿಸಿದ ಅರವಿಂದ್ ಕೇಜ್ರಿವಾಲ್​; ದೆಹಲಿ ಜನರ ಜೀವರಕ್ಷಣೆಗಾಗಿ ಅಪರಾಧ ಮಾಡಿದೆ ಎಂದ ಸಿಎಂ
ಅರವಿಂದ್​ ಕೇಜ್ರಿವಾಲ್​
Follow us
TV9 Web
| Updated By: Lakshmi Hegde

Updated on: Jun 26, 2021 | 3:30 PM

ದೆಹಲಿ: ಕೊವಿಡ್​ 19 ಎರಡನೇ ಅಲೆ ಉಲ್ಬಣಗೊಂಡಿದ್ದ ಹೊತ್ತಲ್ಲಿ ದೆಹಲಿ ಸರ್ಕಾರ ತಮ್ಮಲ್ಲಿ ಅಗತ್ಯ ಇರುವುದಕ್ಕಿಂತ ನಾಲ್ಕು ಪಟ್ಟು ಜಾಸ್ತಿ ಆಮ್ಲಜನಕ್ಕೆ ಬೇಡಿಕೆ ಇಟ್ಟಿತ್ತು ಎಂದು ಸುಪ್ರೀಂಕೋರ್ಟ್ ರಚಿತ ಸಮಿತಿ ವರದಿ ನೀಡಿದ ಬೆನ್ನಲ್ಲೇ ಬಿಜೆಪಿ-ಕಾಂಗ್ರೆಸ್​ ಪಕ್ಷಗಳು ಅರವಿಂದ್​ ಕೇಜ್ರಿವಾಲ್​ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಸಿಎಂ ಅರವಿಂದ್​ ಕೇಜ್ರಿವಾಲ್​ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿವೆ. ಹೀಗಿರುವಾಗ ಟ್ವೀಟ್ ಮಾಡಿರುವ ಅರವಿಂದ್​ ಕೇಜ್ರಿವಾಲ್​, ನಾವು ನಮ್ಮೊಳಗೆ ಹೀಗೇ ಹೊಡೆದಾಡುತ್ತಿದ್ದರೆ ಕೊರೊನಾ ವೈರಾಣು ಗೆಲ್ಲುತ್ತದೆ. ನಾವೆಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡಿದರೆ ದೇಶ ಗೆಲ್ಲುತ್ತದೆ ಎಂದು ಹೇಳಿದ್ದಾರೆ.

ಏಪ್ರಿಲ್​ 25ರಿಂದ ಮೇ 10ರವರೆಗೆ ಕೊವಿಡ್​ 19 ಸಾಂಕ್ರಾಮಿಕದ ಎರಡನೇ ಅಲೆ ತೀವ್ರ ಉತ್ತುಂಗದಲ್ಲಿ ಇತ್ತು. ಈ ಹೊತ್ತಲ್ಲಿ ದೆಹಲಿಯಲ್ಲಿ ತೀವ್ರವಾದ ಆಮ್ಲಜನಕ ಕೊರತೆಯಿದೆ ಎಂದು ಸರ್ಕಾರ ಹೇಳಿತ್ತು. ಆದರೆ ದೆಹಲಿ ಸರ್ಕಾರ ಇಲ್ಲಿನ ಅಗತ್ಯಕ್ಕಿಂತ 4 ಪಟ್ಟು ಜಾಸ್ತಿ ಆಮ್ಲಜನಕ್ಕೆ ಬೇಡಿಕೆಯಿಟ್ಟಿತ್ತು ಎಂದು ಸುಪ್ರೀಂಕೋರ್ಟ್​ ರಚಿತ, ಏಮ್ಸ್ ನಿರ್ದೇಶಕ ರಣ್​ದೀಪ್ ಗುಲೇರಿಯಾ ನೇತೃತ್ವದ, ದೆಹಲಿ ಸರ್ಕಾರದ ಪ್ರಧಾನ ಗೃಹ ಕಾರ್ಯದರ್ಶಿ ಭೂಪಿಂದರ್ ಭಲ್ಲಾ, ಮ್ಯಾಕ್ಸ್ ಹೆಲ್ತ್‌ಕೇರ್ ನಿರ್ದೇಶಕ ಸಂದೀಪ್ ಬುದ್ಧಿರಾಜ ಮತ್ತು ಕೇಂದ್ರ ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಬೋಧ್ ಯಾದವ್​ರನ್ನೊಳಗೊಂಡ ಸಮಿತಿ ವರದಿ ನೀಡಿದೆ. ಅಷ್ಟೇ ಅಲ್ಲ, ದೆಹಲಿಗೆ ಅಗತ್ಯಕ್ಕಿಂತಲೂ ಜಾಸ್ತಿ ಆಕ್ಸಿಜನ್​ ಪೂರೈಕೆ ಮಾಡಿರುವ ಕಾರಣಕ್ಕೆ ಉಳಿದ ಸುಮಾರು 12 ರಾಜ್ಯಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ನೀಡಲು ತೀರ ಕಷ್ಟಪಡುವಂತಾಯ್ತು ಎಂದೂ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಸದ್ಯ ಬಿಜೆಪಿ, ಕಾಂಗ್ರೆಸ್​ ಎರಡೂ ಪಕ್ಷಗಳು ದೆಹಲಿ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತಿವೆ. ಆದರೆ ಅದ್ಯಾವುದಕ್ಕೂ ತಲೆ ಕೆಡಸಿಕೊಳ್ಳದ ಅರವಿಂದ್​ ಕೇಜ್ರಿವಾಲ್​ ಇಂದು ಟ್ವೀಟ್ ಮಾಡಿ, ನಿಮ್ಮ ಆಕ್ಸಿಜನ್​ ಹೋರಾಟಗಳು ಮುಗಿದಿದ್ದರೆ ನಾವೆಲ್ಲ ಸೇರಿ ಮಾಡುವ ಕೆಲಸ ಬೇರೆ ಇದೆ..ಕೊವಿಡ್​ 19 ಎರಡನೇ ಅಲೆಯಲ್ಲಿ ಅದೆಷ್ಟರ ಮಟ್ಟಿಗೆ ಆಕ್ಸಿಜನ್ ಕೊರತೆ ಎದುರಾಯಿತೆಂದು ಎಲ್ಲರಿಗೂ ಗೊತ್ತಿದೆ. ಆಮ್ಲಜನಕವಿಲ್ಲದೆ ಅನೇಕರು ಜೀವ ಕಳೆದುಕೊಂಡಿದ್ದಾರೆ. ಮೂರನೇ ಅಲೆ ಬರುವುದಕ್ಕೂ ಮೊದಲು ಆಮ್ಲಜನಕದ ವ್ಯವಸ್ಥೆ ಸರಿಪಡಿಸಿಕೊಳ್ಳಬೇಕು. ಎರಡನೇ ಅಲೆಯಲ್ಲಿ ಆಗಿದ್ದೇ, ಮೂರನೇ ಅಲೆಯಲ್ಲಿ ಮರುಕಳಿಸಬಾರದು. ನಾವೆಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡಬೇಕು ಎಂದು ಹೇಳಿದ್ದಾರೆ.

ಹಾಗೇ, ಆಮ್ಲಜನಕಕ್ಕೆ ಅಗತ್ಯಕ್ಕಿಂತ ಜಾಸ್ತಿ ಬೇಡಿಕೆ ಇಟ್ಟಿದ್ದು ಹೌದು ಎಂದು ಈಗಾಗಲೇ ಒಪ್ಪಿಕೊಂಡಿರುವ ಅರವಿಂದ್ ಕೇಜ್ರಿವಾಲ್​, ನಾನು ಈ ಅಪರಾಧ ಮಾಡಿದ್ದು 2 ಕೋಟಿ ಜನರ ಜೀವ ರಕ್ಷಣೆಗಾಗಿ. ನೀವೆಲ್ಲ ಚುನಾವಣಾ ಪ್ರಚಾರದಲ್ಲಿ ಮೈಮರೆತಿದ್ದ ಸಂದರ್ಭದಲ್ಲಿ ನಾನು ಆಕ್ಸಿಜನ್​​ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಇದಕ್ಕಾಗಿ ಹಲವು ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದೇನೆ. ಅದೆಷ್ಟೋ ಜನರು ಆಕ್ಸಿಜನ್ ಕೊರತೆಯಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಸಂಕಟದಲ್ಲಿದ್ದಾರೆ. ಅವರನ್ನೂ ಸುಳ್ಳುಗಾರರು ಎಂದು ಕರೆಯಬೇಡಿ. ತುಂಬ ನೊಂದುಕೊಳ್ಳುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ.

ಇದನ್ನೂ ಓದಿ: Boat Catches Fire : ಮತ್ಸ್ಯಕಾ ಮೀನುಗಾರರ ಬೋಟ್​ಗೆ ಬೆಂಕಿ, ಹಡಗು ಸಂಪೂರ್ಣ ಭಸ್ಮ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್