ಪ್ರಧಾನಿ ಮೋದಿ ಸಂದರ್ಶನಕ್ಕಾಗಿ 45 ಗಂಟೆಗಳ ಕಾಲ ಉಪವಾಸ ಮಾಡಿದ ಲೆಕ್ಸ್ ಫ್ರೀಡ್​​ಮ್ಯಾನ್

ಪ್ರಧಾನಿ ನರೇಂದ್ರ ಮೋದಿ ಅವರು ಸಂದರ್ಶನಕ್ಕಾಗಿ ಅಮೆರಿಕನ್ ಪೋಡ್​ಕ್ಯಾಸ್ಟರ್ ಹಾಗೂ ಸಂಶೋಧಕ ವಿಜ್ಞಾನಿ ಲೆಕ್ಸ್ ಫ್ರೀಡ್​​ಮ್ಯಾನ್ 45 ಗಂಟೆ ಅಂದರೆ ಎರಡು ದಿನ ನೀರು ಸೇವಿಸುವುದರ ಮೂಲಕ ಉಪವಾಸ ಮಾಡಿರುವುದಾಗಿ ಹೇಳಿದ್ದಾರೆ. ಇದು ಪ್ರಧಾನಿ ಮೋದಿ ಅವರನ್ನು ಅಚ್ಚರಿಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಮೋದಿ ಲೆಕ್ಸ್ ಫ್ರೀಡ್​​ಮ್ಯಾನ್​ಗೆ ಕೃತಜ್ಞತೆ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸಂದರ್ಶನಕ್ಕಾಗಿ 45 ಗಂಟೆಗಳ ಕಾಲ ಉಪವಾಸ ಮಾಡಿದ ಲೆಕ್ಸ್ ಫ್ರೀಡ್​​ಮ್ಯಾನ್
ಪ್ರಧಾನಿ ಮೋದಿ ಸಂದರ್ಶನಕ್ಕಾಗಿ 45 ಗಂಟೆಗಳ ಕಾಲ ಉಪವಾಸ ಮಾಡಿದ ಲೆಕ್ಸ್ ಫ್ರೀಡ್​​ಮ್ಯಾನ್

Updated on: Mar 16, 2025 | 9:23 PM

ನವದೆಹಲಿ, ಮಾರ್ಚ್ 16: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅಮೆರಿಕನ್ ಪೋಡ್​​ಕ್ಯಾಸ್ಟರ್ ಲೆಕ್ಸ್ ಫ್ರೀಡ್​​ಮ್ಯಾನ್ (Lex Fridman)​ ಮೂರು ಗಂಟೆ ಹದಿನೇಳು ನಿಮಿಷಗಳ ಸುದೀರ್ಘ ಸಂದರ್ಶನ ಮಾಡಿದ್ದಾರೆ. ಮೊದಲಿಗೆ ಮಾತು ಆರಂಭಿಸಿದ ಲೆಕ್ಸ್ ಫ್ರೀಡ್​​ಮ್ಯಾನ್, ಈ ಒಂದು ಸಂದರ್ಶನಕ್ಕಾಗಿ ಸುಮಾರು 45 ಗಂಟೆಗಳು ಅಂದರೆ ಎರಡು ದಿನ ಕೇವಲ ನೀರು ಸೇವಿಸುವುದರ ಮೂಲಕ ಉಪವಾಸ ಮಾಡಿರುವುದಾಗಿ ಹೇಳಿದ್ದಾರೆ. ಇದು ಪ್ರಧಾನಿ ಮೋದಿ ಅವರ ಅಚ್ಚರಿಗೂ ಕಾರಣವಾಗಿದೆ. ನೀವು ನನ್ನ ಮೇಲಿನ ಗೌರವಾರ್ಥವಾಗಿ ಉಪವಾಸ ಮಾಡುತ್ತಿದ್ದೀರಿ ಅನಿಸುತ್ತದೆ ಎಂದು ಮೋದಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಉಪವಾಸದ ಬಗ್ಗೆ ಪ್ರಧಾನಿ ಮೋದಿ ಮಾತು

ಈ ವೇಳೆ ಉಪವಾಸದ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಇಂದ್ರಿಯಗಳನ್ನು ಚುರುಕುಗೊಳಿಸುವುದು, ಮಾನಸಿಕ ಸ್ಥಿರತೆ ಹೆಚ್ಚಿಸುವುದು ಮತ್ತು ಶಿಸ್ತನ್ನು ಬೆಳೆಸುವಲ್ಲಿ ಬಹಳ ಪ್ರಯೋಜವಾಗಿದೆ. ಉಪವಾಸವು ಕೇವಲ ಆಹಾರವನ್ನು ತ್ಯಜಿಸುವುದಕ್ಕಿಂತ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಸಾಂಪ್ರದಾಯಿಕ ಮತ್ತು ಆಯುರ್ವೇದ ಪದ್ಧತಿಗಳೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ ಎಂದು ವಿವರಿಸಿದರು.

ಇದನ್ನೂ ಓದಿ: ತಮ್ಮ ಜೀವನದಲ್ಲಿ ಆರೆಸ್ಸೆಸ್, ಸ್ವಾಮಿ ವಿವೇಕಾನಂದ, ಗಾಂಧೀಜಿಯ ಪ್ರಭಾವ ಹೇಗೆ? ಪೋಡ್​ಕ್ಯಾಸ್ಟ್​​ನಲ್ಲಿ ಕುತೂಹಲಕಾರಿ ವಿಚಾರ ಬಿಚ್ಚಿಟ್ಟ ನರೇಂದ್ರ ಮೋದಿ

ದೇಹದ ನಿರ್ವಿಶೀಕರಣಕ್ಕೆ ಸಹಾಯ ಮಾಡಲು ಉಪವಾಸದ ಮೊದಲು ಅವರು ಚೆನ್ನಾಗಿ ಹೈಡ್ರೇಟ್ ಮಾಡುತ್ತಾರೆ. ಆಲಸ್ಯ ಅನುಭವಿಸುವ ಬದಲು, ಉಪವಾಸವು ಅವರನ್ನು ಹೆಚ್ಚು ಶಕ್ತಿಯುತವಾಗಿಸುತ್ತದೆ ಮತ್ತು ಇನ್ನಷ್ಟು ಕಠಿಣ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಲೆಕ್ಸ್ ಫ್ರೀಡ್​​ಮ್ಯಾನ್ ಪೋಡ್​​ಕ್ಯಾಸ್ಟ್​ನಲ್ಲಿ ಪ್ರಧಾನಿ ಮೋದಿ ಅವರು, ತಮ್ಮ ರಾಜಕೀಯ ಜೀವನ, ಗುಜರಾತ್​ ಅಭಿವೃದ್ಧಿ, ಗಲಭೆಗಳು ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಬಾಲ್ಯದ ಘಟನೆಗಳನ್ನು ಕೂಡ ಹಂಚಿಕೊಂಡಿದ್ದಾರೆ.

ತಮ್ಮ ಬಾಲ್ಯದ ಬುತ್ತಿ ಬಿಚ್ಚಿಟ್ಟ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ತಮ್ಮ ಮುದ್ದಾದ ಬಾಲ್ಯವನ್ನು ನೆನಪಿಸಿಕೊಂಡಿದ್ದು, ಬಡತನದಲ್ಲಿ ಬೆಳೆದರೂ ಅದರ ಭಾರವನ್ನು ಅವರು ಎಂದಿಗೂ ಅನುಭವಿಸಲಿಲ್ಲ. ಕಷ್ಟಗಳ ನಡುವೆಯೂ ಎಂದಿಗೂ ವಿಚಲಿತರಾಗಲಿಲ್ಲ. ತಮ್ಮ ಚಿಕ್ಕಪ್ಪ ಒಮ್ಮೆ ತಮಗೆ ಬಿಳಿ ಕ್ಯಾನ್ವಾಸ್ ಬೂಟುಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂದರು.

ಇದನ್ನೂ ಓದಿ: ಲೆಕ್ಸ್ ಫ್ರೀಡ್​ಮ್ಯಾನ್ ಪಾಡ್‌ಕ್ಯಾಸ್ಟ್‌ನಲ್ಲಿ ಗೋಧ್ರಾ ದುರಂತದ ಅಸಲಿಯತ್ತು ಬಿಚ್ಚಿಟ್ಟ ಪ್ರಧಾನಿ ಮೋದಿ

ಅದನ್ನು ಶಾಲೆಯಲ್ಲಿ ಬಿಸಾಡಿದ ಸೀಮೆಸುಣ್ಣವನ್ನು ಬಳಸಿ ಪಾಲಿಶ್ ಮಾಡುತ್ತಿದ್ದೆ. ಜೀವನದ ಪ್ರತಿಯೊಂದು ಹಂತವನ್ನು ಕೃತಜ್ಞತೆಯಿಂದ ಸ್ವೀಕರಿಸಿದ್ದೇನೆ ಮತ್ತು ಬಡತನವನ್ನು ಎಂದಿಗೂ ಹೋರಾಟವೆಂದು ನೋಡಿಲ್ಲ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.