ತಿಹಾರ್​ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್​ಗೆ ಅನಾರೋಗ್ಯ, 4.5 ಕೆಜಿ ತೂಕ ಕಳೆದುಕೊಂಡ ದೆಹಲಿ ಸಿಎಂ

ಮದ್ಯನೀತಿ ಪ್ರಕರಣ(Liquor Policy Case )ದಲ್ಲಿ ತಿಹಾರ್ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​(Arvind Kejriwal)ಗೆ ಅನಾರೋಗ್ಯ ಕಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಏರುಪೇರಾಗಿದ್ದು, 4.5 ಕೆಜಿಯಷ್ಟು ತೂಕ ಕಳೆದುಕೊಂಡಿದ್ದಾರೆ.

ತಿಹಾರ್​ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್​ಗೆ ಅನಾರೋಗ್ಯ, 4.5 ಕೆಜಿ ತೂಕ ಕಳೆದುಕೊಂಡ ದೆಹಲಿ ಸಿಎಂ
ಅರವಿಂದ್ ಕೇಜ್ರಿವಾಲ್

Updated on: Apr 03, 2024 | 10:04 AM

ಮದ್ಯನೀತಿ ಪ್ರಕರಣ(Liquor Policy Case)ದಲ್ಲಿ ತಿಹಾರ್ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​(Arvind Kejriwal)ಗೆ ಅನಾರೋಗ್ಯ ಕಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಏರುಪೇರಾಗಿದ್ದು, 4.5 ಕೆಜಿಯಷ್ಟು ತೂಕ ಕಳೆದುಕೊಂಡಿದ್ದಾರೆ.

ಅವರನ್ನು ಮಾರ್ಚ್​ 21ರಂದು ಬಂಧಿಸಲಾಗಿತ್ತು, ಆದರೆ ತಿಹಾರ್ ಜೈಲಿನಲ್ಲಿರುವ ಅಧಿಕಾರಿಗಳು ಅವರು ಚೆನ್ನಾಗಿಯೇ ಇದ್ದಾರೆ ಎಂದು ಹೇಳಿದ್ದಾರೆ. ದೆಹಲಿಯ ಈಗ ರದ್ದಾದ ನ್ಯಾಯಾಂಗ ಬಂಧನಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕೇಜ್ರಿವಾಲ್ ಅವರನ್ನು ಇಲ್ಲಿನ ನ್ಯಾಯಾಲಯವು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರಲು ಔಷಧಿಗಳನ್ನು ನೀಡಲಾಗಿದೆ. ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮನೆಯ ಅಡುಗೆಯನ್ನೇ ನೀಡಲಾಗುತ್ತಿದೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಎಎಪಿ ನಾಯಕ ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಪತ್ನಿ ಸುನೀತಾ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಅವರ ವಕೀಲರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ.

ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಮದ್ಯನೀತಿ ಪ್ರಕರಣದ ಕಿಂಗ್​ ಪಿನ್ ಅರವಿಂದ್ ಕೇಜ್ರಿವಾಲ್ ಎಂದು ಇಡಿ ಹೇಳಿದೆ. ಇದಲ್ಲದೇ ಹಲವು ಆಪ್ ನಾಯಕರೂ ಶಾಮೀಲಾಗಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳುತ್ತಿದೆ.

ಮತ್ತಷ್ಟು ಓದಿ: ಇಡಿ ವಿಚಾರಣೆ ವೇಳೆ ಅತಿಶಿ ಹೆಸರು ಪ್ರಸ್ತಾಪಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರಿಗೆ ಪ್ರಕರಣದಲ್ಲಿ ರಿಲೀಫ್ ನೀಡಿದ ನ್ಯಾಯಾಲಯ ಮಂಗಳವಾರ (ಏಪ್ರಿಲ್ 3, 2024) ಜಾಮೀನು ನೀಡಿದೆ. ಪ್ರಕರಣದಲ್ಲಿ ಸಿಂಗ್‌ಗೆ ಜಾಮೀನು ನೀಡಲು ನಮ್ಮ ಅಭ್ಯಂತರವಿಲ್ಲ ಎಂದು ಇಡಿ ಹೇಳಿತ್ತು. ಇಡಿ ಆರೋಪ ನಿರಾಧಾರ ಎಂದು ಪಕ್ಷ ಹೇಳಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:03 am, Wed, 3 April 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us