ಐಎನ್ಡಿಐಎಗೆ ಮತ್ತೊಂದು ಹಿನ್ನಡೆ; ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಆರ್‌ಎಲ್‌ಡಿ ಪಕ್ಷ
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಐಎನ್ಡಿಐಎಗೆ ಮತ್ತೊಂದು ಹಿನ್ನಡೆಯಾಗಿದೆ. ಆರ್‌ಎಲ್‌ಡಿ ಪಕ್ಷ ಎನ್‌ಡಿಎ ಸೇರ್ಪಡೆಯಾಗಿದೆ. ಚುನಾವಣೆ ಹೊಸ್ತಿಲಲ್ಲೇ ಐಎನ್ಡಿಐ ಮೈತ್ರಿಕೂಟಕ್ಕೆ ಮಿತ್ರ ಪಕ್ಷಗಳು ಶಾಕ್ ಮೇಲೆ ಶಾಕ್ ನೀಡುತ್ತಿವೆ. ಹೊಂದಾಣಿಕೆ ಕೊರತೆ, ಸೀಟು ಹಂಚಿಕೆಯಲ್ಲಿ ಗೊಂದಲ, ನಾಯಕತ್ವದಲ್ಲಿ ಹೊಂದಲ ಇತ್ಯಾದಿ ಕಾರಣಗಳಿಂದ ಮಿತ್ರ ಪಕ್ಷಗಳು ಒಂದೊಂದಾಗಿಯೇ ಇಂಡಿಯಾ ಮೈತ್ರಿಕೂಟದಿಂದ ಹೊರಬರುತ್ತಿದೆ.
ನವದೆಹಲಿ, ಮಾ.2: ಆರ್‌ಎಲ್‌ಡಿ (Rashtriya Lok Dal-RLD) ಪಕ್ಷ ಎನ್‌ಡಿಎ (NDA) ಸೇರ್ಪಡೆಯಾಗುವ ಮೂಲಕ ಲೋಕಸಭೆ ಚುನಾವಣೆ ಸಮೀಪದಲ್ಲಿ ಐಎನ್ಡಿಐಎಗೆ ಮತ್ತೊಂದು ಹಿನ್ನಡೆಯಾದಂತಾಗಿದೆ. ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರನ್ನು ಭೇಟಿಯಾಗಿ ಮಾತುಕತೆಯೂ ನಡೆಸಿದ್ದಾರೆ.
ಇಂದು ದೆಹಲಿಯಲ್ಲಿ ಬಿಜೆಪಿ ಚಾಣಕ್ಯ ಎಂದೇ ಕರೆಯಲ್ಪಡುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಜಯಂತ್ ಚೌಧರಿ ಅವರು ಸುದೀರ್ಘ ಮಾತುಕತೆ ನಡೆಸಿದ್ದು, ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಆರ್‌ಎಲ್‌ಡಿ ಪಕ್ಷ ಎನ್‌ಡಿಎ ಸೇರ್ಪಡೆ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಜೆಪಿ ನಡ್ಡಾ, ಇಂದು ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಆರ್‌ಎಲ್‌ಡಿ ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ ಅವರೊಂದಿಗೆ ಸಭೆ ನಡೆಯಿತು. ಎನ್‌ಡಿಎ ಕುಟುಂಬಕ್ಕೆ ಸೇರುವ ಜಯಂತ್ ನಿರ್ಧಾರವನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣ ಮತ್ತು ಉತ್ತರ ಪ್ರದೇಶದ ಅಭಿವೃದ್ಧಿಯಲ್ಲಿ ನೀವು ಪ್ರಮುಖ ಕೊಡುಗೆ ನೀಡುತ್ತೀರಿ ಎಂದು ಹೇಳಿದರು. ಅಲ್ಲದೆ, ಈ ಬಾರಿ ಎನ್‌ಡಿಎ 400 ದಾಟುತ್ತದೆ ಎಂದಿದ್ದಾರೆ.
ಜೆಪಿ ನಡ್ಡಾ ಟ್ವೀಟ್
आज माननीय गृहमंत्री श्री @amitshah जी की उपस्थिति में @RLDparty के अध्यक्ष @jayantrld जी से मुलाक़ात हुई। मैं उनके एनडीए परिवार में शामिल होने के निर्णय का हृदय से स्वागत करता हूँ। आदरणीय @narendramodi जी के नेतृत्व में विकसित भारत की यात्रा और उत्तर प्रदेश के विकास में आप… pic.twitter.com/3cJtQ9sS03
— Jagat Prakash Nadda (@JPNadda) March 2, 2024
ರಾಷ್ಟ್ರೀಯ ಲೋಕದಳದ ಅಧ್ಯಕ್ಷರಾದ ಜಯಂತ್ ಅವರನ್ನು ನಾನು NDA ಕುಟುಂಬಕ್ಕೆ ಸ್ವಾಗತಿಸುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೀತಿಗಳಲ್ಲಿ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಅವರು ಎನ್‌ಡಿಎಗೆ ಸೇರ್ಪಡೆಯಿಂದ ರೈತರು, ಬಡವರು ಮತ್ತು ವಂಚಿತ ವರ್ಗಗಳ ಉನ್ನತಿಗಾಗಿ ತೊಟ್ಟಿರುವ ನಮ್ಮ ಸಂಕಲ್ಪವನ್ನು ಇನ್ನಷ್ಟು ಬಲ ಸಿಕ್ಕಂತಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400 ದಾಟಲಿದೆ ಎಂದು ಅಮಿತ್ ಶಾ ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಮಿತ್ ಶಾ ಟ್ವೀಟ್
राष्ट्रीय लोकदल के अध्यक्ष श्री @jayantrld जी का एनडीए परिवार में स्वागत करता हूँ।
प्रधानमंत्री श्री @narendramodi जी की नीतियों में विश्वास प्रकट करते हुए उनके एनडीए में आने से किसान, गरीब और वंचित वर्ग के उत्थान के हमारे संकल्प को और बल मिलेगा।
आगामी लोकसभा चुनाव में एनडीए… pic.twitter.com/o6rjkiWId6
— Amit Shah (@AmitShah) March 2, 2024
ಐಎನ್ಡಿಐಎ ಜೊತೆಗಿನ ಮೈತ್ರಿ ಮುರಿದುಕೊಂಡ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳುವುದಾಗಿ ಫೆಬ್ರವರಿ 13 ರಂದು ಘೋಷಿಸಿತ್ತು. ಜನರಿಗೆ ಒಳ್ಳೆಯದನ್ನು ಮಾಡುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಜಯಂತ್ ಚೌಧರಿ ಹೇಳಿದ್ದರು. ಪಕ್ಷದ ಎಲ್ಲಾ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಮಾತನಾಡಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: What India Thinks Today: ಬಿಜೆಪಿ 370, ಎನ್‌ಡಿಎ 400 ಹೇಗಿದೆ ಚಾಣಕ್ಯನ ಪ್ಲ್ಯಾನ್? ಟಿವಿ9 ವೇದಿಕೆಯಲ್ಲಿ ಅಮಿತ್ ಶಾ
RLD ಸಾಂಪ್ರದಾಯಿಕವಾಗಿ ರೈತರ ಪಕ್ಷವಾಗಿದ್ದು, ಜಾಟ್ ಸಮುದಾಯದ ಬೆಂಬಲವಿದೆ. ಜಯಂತ್ ಚೌಧರಿ ಅವರು ಉತ್ತರ ಭಾರತದ ಪ್ರಬಲ ರೈತ ನಾಯಕ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ. ಆರ್‌ಎಲ್‌ಡಿ ಪಕ್ಷವನ್ನು ಸ್ಥಾಪಿಸಿದವರು ಚರಣ್ ಸಿಂಗ್ ಅವರ ಮಗ ಅಜಿತ್ ಸಿಂಗ್. ಪಶ್ಚಿಮ ಉತ್ತರ ಪ್ರದೇಶದ ಸುಮಾರು 15 ಜಿಲ್ಲೆಗಳಾದ ಬಾಗ್‌ಪತ್, ಮುಜಾಫರ್‌ನಗರ, ಶಾಮ್ಲಿ, ಮೀರತ್, ಬಿಜ್ನೋರ್, ಘಾಜಿಯಾಬಾದ್, ಹಾಪುರ್, ಬುಲಂದ್‌ಶಹರ್, ಮಥುರಾ, ಅಲಿಘರ್, ಹತ್ರಾಸ್, ಆಗ್ರಾ ಮತ್ತು ಮೊರಾದಾಬಾದ್ನಲ್ಲಿ ಜನಪ್ರಿಯತೆಯನ್ನು ಹೊಂದಿದೆ.
ಆರ್‌ಎಲ್‌ಡಿ ಸೇರ್ಪಡೆಯಿಂದ ಎನ್‌ಡಿಎಗೆ ಏನು ಲಾಭ?
RLD ಬಹಳ ಹಿಂದಿನಿಂದಲೂ ಪ್ರಬಲವಾದ ಪಕ್ಷವಾಗಿದೆ. ಈ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್ಗಳಾದ ರೈತರು, ಮುಸ್ಲಿ, ಯಾದವ್, ಜಾಟ್, ಗುಜ್ಜರ್, ರಜಪೂತ ಸಮುದಾಯಗಳು ಬಿಜೆಪಿಯನ್ನು ಅಥವಾ ಎನ್ಡಿಎಯನ್ನು ಬೆಂಬಲಿಸುವುದಿಲ್ಲ. ಅದಾಗ್ಯೂ, ಈ ಪಕ್ಷ ಸೇರ್ಪಡೆಯಿಂದ ಎನ್‌ಡಿಎಗೆ ಆಗುವ ಲಾಭವೇನೆಂದು ನೋಡುವುದಾರೆ; ಐಎನ್ಡಿಐ ಮೈತ್ರಿಕೂಟವನ್ನು ಒಡೆದಂತಾಗಲಿದೆ. ವಿಪಕ್ಷ ಮೈತ್ರಿಕೂಟದ ಬಲ ಮತ್ತಷ್ಟು ಕಡಿಮೆಯಾಗುತ್ತದೆ. ಉತ್ತರ ಭಾರತದಲ್ಲಿ ನಿತೀಶ್ ಕುಮಾರ್ ನಂತರ ಐಎನ್ಡಿಐಎ ತೊರೆದ ಜಯಂತ್ ಚೌಧರಿ ಎರಡನೇ ಪ್ರಬಲ ನಾಯಕರಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 pm, Sat, 2 March 24