ಬಿಎಸ್​ಪಿ ಉತ್ತರಾಧಿಕಾರಿ ಸ್ಥಾನದಿಂದ ಸೋದರಳಿಯ ಆಕಾಶ್​ ಆನಂದ್​ರನ್ನು ಕೆಳಗಿಳಿಸಿದ ಮಾಯಾವತಿ

ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮಂಗಳವಾರ ಉತ್ತರಾಧಿಕಾರಿ ಆಕಾಶ್ ಆನಂದ್ ಅವರನ್ನು ಎರಡು ಪ್ರಮುಖ ಹುದ್ದೆಗಳಿಂದ ವಜಾಗೊಳಿಸಿದ್ದಾರೆ. ಉತ್ತರಾಧಿಕಾರಿ ಆಕಾಶ್ ಆನಂದ್‌ಗೆ ಸೀತಾಪುರದಲ್ಲಿ ಉದ್ರೇಕಕಾರಿ ಭಾಷಣ ಮಾಡಿರುವುದು ಅವರಿಗೆ ಸಂಕಷ್ಟ ತಂದಿದೆ.

ಬಿಎಸ್​ಪಿ ಉತ್ತರಾಧಿಕಾರಿ ಸ್ಥಾನದಿಂದ ಸೋದರಳಿಯ ಆಕಾಶ್​ ಆನಂದ್​ರನ್ನು ಕೆಳಗಿಳಿಸಿದ ಮಾಯಾವತಿ
ಮಾಯಾವತಿ

Updated on: May 08, 2024 | 10:33 AM

ಕಳೆದ ಡಿಸೆಂಬರ್​ನಲ್ಲಷ್ಟೇ ಉತ್ತರ ಪ್ರದೇಶದ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಬಿಎಸ್​ಪಿ ಹೊಸ ಉತ್ತರಾಧಿಕಾರಿಯನ್ನಾಗಿ ಮಾಯಾವತಿ(Mayawati) ಸೋದರಳಿಯ ಆಕಾಶ್​ ಆನಂದ್​(Akash Anand)ರನ್ನು ನೇಮಕ ಮಾಡಿತ್ತು. ಇದೀಗ ಐದು ತಿಂಗಳಲ್ಲೇ ಆಕಾಶ್​ ಗದ್ದುಗೆಯಿಂದ ಕೆಳಗಿಳಿದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದ ಆಕಾಶ್ ಆನಂದ್ ಮಾಯಾವತಿಯ ಬಹುತೇಕ ಎಲ್ಲಾ ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಮಾಯಾವತಿ ಈ ನಿರ್ಧಾರ ತೆಗೆದುಕೊಳ್ಳಲು ಇದ್ದ ಕಾರಣವೇನೆಂಬುದು ಎಂಬುದು ಬಹಿರಂಗವಾಗಬೇಕಿದೆ.

ಸೀತಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆಕಾಶ್ ಆನಂದ್ ಬಿಜೆಪಿ ನಾಯಕರನ್ನು ಭಯೋತ್ಪಾದಕರಿಗೆ ಹೋಲಿಸಿದ್ದರು.
ಆಕಾಶ್ ಆನಂದ್ ಅವರ ಈ ಉದ್ರೇಕಕಾರಿ ಭಾಷಣದ ನಂತರ, ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಯಿತು, ಅದರಲ್ಲಿ ಪಕ್ಷದ ಮೂವರು ಅಭ್ಯರ್ಥಿಗಳನ್ನೂ ಹೆಸರಿಸಲಾಯಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಎಸ್ಪಿ ವರಿಷ್ಠೆ ಮಾಯಾವತಿ ಆಕಾಶ್ ಆನಂದ್ ರ್ಯಾಲಿಗಳಿಗೆ ನಿಷೇಧ ಹೇರಿದ್ದರು.

ಇದರ ಹೊರತಾಗಿಯೂ ಅವರು ದೆಹಲಿಯಲ್ಲಿ ಪಕ್ಷದ ಬೆಂಬಲಿಗರು, ವಿದ್ಯಾರ್ಥಿಗಳು, ಶಿಕ್ಷಕರು ಮುಂತಾದವರನ್ನು ಸಂಪರ್ಕಿಸುತ್ತಲೇ ಇದ್ದರು ಮತ್ತು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಮುಂದುವರೆಸಿದರು.
ಪಕ್ಷ ಮತ್ತು ಚಳವಳಿಯ ಹಿತದೃಷ್ಟಿಯಿಂದ ಮೊದಲಿನಂತೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಂತೆ ಅವರು ಆಕಾಶ್ ಆನಂದ್ ಅವರ ತಂದೆ ಮತ್ತು ಅವರ ಸಹೋದರ ಆನಂದ್ ಕುಮಾರ್ ಅವರನ್ನು ಕೇಳಿದ್ದಾರೆ.

ಮತ್ತಷ್ಟು ಓದಿ: ಬಿಎಸ್​ಪಿಗೆ ತನ್ನ ಸೋದರಳಿಯನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ ಮಾಯಾವತಿ

ಪಕ್ಷ ಮತ್ತು ಚಳವಳಿಯ ಹಿತಾಸಕ್ತಿ ಮತ್ತು ಡಾ.ಅಂಬೇಡ್ಕರ್ ಅವರ ರಥವನ್ನು ಮುನ್ನಡೆಸುವಲ್ಲಿ ಬಿಎಸ್‌ಪಿ ನಾಯಕತ್ವವು ಯಾವುದೇ ರೀತಿಯ ತ್ಯಾಗಕ್ಕೂ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ಒಂದು ದಶಕದ ಹಿಂದೆ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿದ್ದಂತಹ ಬಿಎಸ್​ಪಿ ಈಗ ಸಧ್ಯಕ್ಕೆ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿದೆ. ಯಾವುದೇ ಲೋಕಸಭಾ ಸದಸ್ಯರನ್ನು ಹೊಂದಿರದ ಬಿಎಸ್​ಪಿ, ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬೆರಳೆಣಿಕೆ ಸದಸ್ಯರನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಚುನಾವಣೆಯಿಂದ ಚುನಾವಣೆಗೆ ಬಿಎಸ್​ಪಿಯ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ.

ಯಾರು ಈ ಆಕಾಶ್ ಆನಂದ್?
ಮಾಯಾವತಿ ಅವರ ಸೋದರಳಿಯ ಆಕಾಶ್ ಆನಂದ್ ಲಂಡನ್‌ನಲ್ಲಿ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಓದಿದ್ದಾರೆ. ಆಕಾಶ್ ರಾಜಕೀಯ ಪ್ರವೇಶಿಸಿದ್ದು 2017ರಲ್ಲಿ , ಸಹರಾನ್‌ಪುರ ಸಮಾವೇಶದಲ್ಲಿ ಮೊದಲ ಬಾರಿಗೆ ಮಾಯಾವತಿಯೊಂದಿಗೆ ಆಕಾಶ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು‌. ಮಾಯಾವತಿ ಅವರು 2017 ರಲ್ಲಿ ದೊಡ್ಡ ಸಮಾವೇಶ ನಡೆಸುವ ಮೂಲಕ ಆಕಾಶ್ ಆನಂದ್ ಅವರನ್ನು ರಾಜಕೀಯಕ್ಕೆ ಕರೆತರುವುದಾಗಿ ಘೋಷಿಸಿದ್ದರು. ಈ ಹಿಂದೆ ಆಕಾಶ್ ಅವರು ಬಿಎಸ್ಪಿ ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮತ್ತಷ್ಟು ಓದಿ: ಮಯಾವತಿ ಉತ್ತರಾಧಿಕಾರಿಯಾಗಿ ನೇಮಕವಾದ ಆಕಾಶ್ ಆನಂದ್ ಯಾರು? ಇಲ್ಲಿದೆ ವಿವರ

ಅಲ್ಲದೇ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದ ಆಕಾಶ್ ಆನಂದ್ ಮಾಯಾವತಿಯ ಬಹುತೇಕ ಎಲ್ಲಾ ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇದೀಗ ಮಾಯಾವತಿ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us