AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಮಂದಿರ ‘ಏಕ್ ಭಾರತ್, ಶ್ರೇಷ್ಠ ಭಾರತ’ದ ಪ್ರತೀಕ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ

ರಾಮ ಜನ್ಮಭೂಮಿ-ಬಾಬರಿ ಮಸೀದಿ  ಪ್ರಕರಣದಲ್ಲಿ ನ್ಯಾಯಾಲಯದ 2019 ರ ತೀರ್ಪನ್ನು ಉಲ್ಲೇಖಿಸಿದ ಸ್ಪೀಕರ್ ಓಂ ಬಿರ್ಲಾ, ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನೀಡಿದ ಕೂಡಲೇ, ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯು "ಗೆಲುವು ಅಥವಾ ಸೋಲಿನ ಭಾವನೆಯ ಬದಲಿಗೆ ಶಾಂತಿಯ ಬಗ್ಗೆ ಸಮಾಜವನ್ನು ಪ್ರೇರೇಪಿಸಿತು" ಎಂದಿದ್ದಾರೆ.

ರಾಮ ಮಂದಿರ ‘ಏಕ್ ಭಾರತ್, ಶ್ರೇಷ್ಠ ಭಾರತ’ದ ಪ್ರತೀಕ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ
ಓಂ ಬಿರ್ಲಾ
ರಶ್ಮಿ ಕಲ್ಲಕಟ್ಟ
|

Updated on:Feb 10, 2024 | 8:33 PM

Share

ದೆಹಲಿ ಫೆಬ್ರುವರಿ 10: ಲೋಕಸಭೆಯ (Lok sabha) ಸ್ಪೀಕರ್ ಓಂ ಬಿರ್ಲಾ (Om Birla) ಅವರು  ಶನಿವಾರ ಲೋಕಸಭೆಯಲ್ಲಿ  ಅಯೋಧ್ಯೆ ರಾಮ ಮಂದಿರದ (Ram mandir) ಬಗ್ಗೆ ನಿರ್ಣಯವನ್ನು ಮಂಡಿಸಿದ್ದು, ದೇಗುಲದ ನಿರ್ಮಾಣವನ್ನು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ. ಸದನದಲ್ಲಿ ಮಾತನಾಡಿದ ಸ್ಪೀಕರ್, ರಾಮಮಂದಿರ ಭವಿಷ್ಯದ ಪೀಳಿಗೆಗೆ ಭರವಸೆ ಮತ್ತು ಏಕತೆಯ ಮೌಲ್ಯಗಳನ್ನು ನೀಡುತ್ತದೆ ಎಂದು ಹೇಳಿದರು. ಸದನದಲ್ಲಿ “ಐತಿಹಾಸಿಕ ಶ್ರೀರಾಮ ಮಂದಿರ ನಿರ್ಮಾಣ ಮತ್ತು ರಾಮಲಲ್ಲಾ  ಪ್ರಾಣ ಪ್ರತಿಷ್ಠೆ” ಕುರಿತು ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಚರ್ಚೆಯ ಕೊನೆಯಲ್ಲಿ ನಿರ್ಣಯವನ್ನು ಓದಿದ ಅವರು, ಶತಮಾನಗಳ ಕಾಯುವಿಕೆಯ ನಂತರ, ಅಯೋಧ್ಯೆಯ ರಾಮಮಂದಿರವು ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣದ ಹೊಸ ಯುಗಕ್ಕೆ ನಾಂದಿ ಹಾಡಿದೆ. ಈ ದೇವಾಲಯವು “ಏಕ್ ಭಾರತ್, ಶ್ರೇಷ್ಠ ಭಾರತ” ಎಂಬ ಮನೋಭಾವದ ಪ್ರತೀಕವಾಗಿದೆ ಎಂದಿದ್ದಾರೆ.

ರಾಮ ಜನ್ಮಭೂಮಿ-ಬಾಬರಿ ಮಸೀದಿ  ಪ್ರಕರಣದಲ್ಲಿ ನ್ಯಾಯಾಲಯದ 2019 ರ ತೀರ್ಪನ್ನು ಉಲ್ಲೇಖಿಸಿದ ಸ್ಪೀಕರ್, ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನೀಡಿದ ಕೂಡಲೇ, ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯು “ಗೆಲುವು ಅಥವಾ ಸೋಲಿನ ಭಾವನೆಯ ಬದಲಿಗೆ ಶಾಂತಿಯ ಬಗ್ಗೆ ಸಮಾಜವನ್ನು ಪ್ರೇರೇಪಿಸಿತು” ಎಂದಿದ್ದಾರೆ.

ಈ ನಿರ್ಣಯದ ಮೂಲಕ ಸದನದ ಸದಸ್ಯರು ಅಯೋಧ್ಯೆಯಲ್ಲಿ ನಡೆದ ಐತಿಹಾಸಿಕ ಕಾರ್ಯವನ್ನು ಶ್ಲಾಘಿಸುತ್ತಾರೆ ಎಂದರು.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರವು ಕಲ್ಲಿನಿಂದ ರಚಿಸಲ್ಪಟ್ಟ ರಚನೆಯಲ್ಲ, ಆದರೆ ನಂಬಿಕೆ ಮತ್ತು ಭಾವನೆಗಳಿಂದ ತುಂಬಿದೆ ಎಂದು ಬಿರ್ಲಾ ಹೇಳಿದರು. ಜನವರಿ 22 ರಂದು ದೇವಸ್ಥಾನದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿಯವರು ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ರಾಷ್ಟ್ರೀಯ ಏಕತೆಯ ಸಂದೇಶವನ್ನು ನೀಡಿದರು ಎಂದು ಬಿರ್ಲಾ ಸ್ಮರಿಸಿದ್ದಾರೆ.

ಈ ಕ್ಷಣದ ನೆರವೇರಿಕೆಯಲ್ಲಿ, ನ್ಯಾಯಾಂಗ ಮತ್ತು ಸಮಾಜದ ಹೆಚ್ಚಿನ ಭಾಗವು ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಎನ್​ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಆಶೀರ್ವಾದ ಸಿಗುವ ವಿಶ್ವಾಸವಿದೆ: ಲೋಕಸಭೆಯಲ್ಲಿ ಮೋದಿ ಭಾಷಣ

ಬಜೆಟ್ ಅಧಿವೇಶನಕ್ಕೆ ತೆರೆ

ಲೋಕಸಭೆ ಕಲಾಪವನ್ನು ಶನಿವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಬಜೆಟ್ ಅಧಿವೇಶನವು ಸಂಸತ್ತಿನ ಚುನಾವಣೆಗಳನ್ನು ಘೋಷಿಸುವ ಮೊದಲು 17 ನೇ ಲೋಕಸಭೆಯ ಕೊನೆಯ ಅಧಿವೇಶನವಾಗಿತ್ತು.ಕಳೆದ ಐದು ವರ್ಷಗಳಲ್ಲಿ 17 ಲೋಕಸಭೆಯು 222 ಮಸೂದೆಗಳನ್ನು ಅಂಗೀಕರಿಸಿದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಅಧಿವೇಶನದ ಕೊನೆಯ ದಿನದಂದು ಸದನವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಚರ್ಚಿಸಿ ನಿರ್ಣಯವನ್ನು ಅಂಗೀಕರಿಸಿತು.

ತಮ್ಮ ಸಮಾರೋಪ ಭಾಷಣದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷದ ಪೀಠಗಳನ್ನು ಸಮಾನವಾಗಿ ಪರಿಗಣಿಸಿದ್ದು ಸದನದ ಘನತೆ ಕಾಪಾಡಲು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದರು. ನಂತರ ಬಿರ್ಲಾ ಅವರು ಸದನವನ್ನು (ಅನಿರ್ದಿಷ್ಟ ಅವಧಿಗೆ) ಮುಂದೂಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:48 pm, Sat, 10 February 24