Honeytrap: ‘ಮಾರುಕಟ್ಟೆಗೆ ಹೊಸ ಹುಡುಗಿ ಬಂದಿದ್ದಾಳೆ’ ಎಂಬ ಸಂದೇಶಕ್ಕೆ ಸೋತು, ಹನಿಟ್ರ್ಯಾಪ್​​ಗೆ ಸಿಲುಕಿಕೊಂಡ ಉದ್ಯಮಿ

ಗುಜರಾತಿನ ಸೂರತ್‌ನ ಬಟ್ಟೆ ವ್ಯಾಪಾರಿಯೊಬ್ಬರು ಹನಿಟ್ರ್ಯಾಪ್‌ನಲ್ಲಿ ಸಿಲುಕಿ 50 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಬಟ್ಟೆ ವ್ಯಾಪಾರಿ ಪೊಲೀಸ್​​​ ಠಾಣೆಗೆ ದೂರು ನೀಡಿದ್ದು, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಆರೋಪಿಗಳನ್ನು ಬಂಧಿಸಿದ್ದಾರೆ

Honeytrap: ‘ಮಾರುಕಟ್ಟೆಗೆ ಹೊಸ ಹುಡುಗಿ ಬಂದಿದ್ದಾಳೆ’ ಎಂಬ ಸಂದೇಶಕ್ಕೆ ಸೋತು, ಹನಿಟ್ರ್ಯಾಪ್​​ಗೆ ಸಿಲುಕಿಕೊಂಡ ಉದ್ಯಮಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jun 03, 2023 | 12:56 PM

ಸೂರತ್: ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್​​​ಗಳು (Honeytrap) ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಅನೇಕ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿದ್ದು, ಲಕ್ಷ, ಲಕ್ಷ ಹಣಗಳನ್ನು ಕಳೆದುಕೊಂಡಿರುವ ಘಟನೆಗಳು ಕೂಡ ನಡೆದಿದೆ. ಇಂತಹದೇ ಒಂದು ಘಟನೆ ಗುಜರಾತಿನ ಸೂರತ್‌ನಲ್ಲಿ ನಡೆದಿದೆ. ಬಟ್ಟೆ ವ್ಯಾಪಾರಿಯೊಬ್ಬರು ಹನಿಟ್ರ್ಯಾಪ್‌ನಲ್ಲಿ ಸಿಲುಕಿ 50 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಬಟ್ಟೆ ವ್ಯಾಪಾರಿ ಪೊಲೀಸ್​​​ ಠಾಣೆಗೆ ದೂರು ನೀಡಿದ್ದು, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಆರೋಪಿಗಳನ್ನು ಬಂಧಿಸಿದ್ದಾರೆ, ಒಬ್ಬ ಮಹಿಳೆ ಸೇರಿದಂತೆ ತಂಡದ ಇತರ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕುತ್ತಿದ್ದಾರೆ. ಪೊಲೀಸರ ಪ್ರಕಾರ, ಈ ಪ್ರಕರಣವು ನವೆಂಬರ್ 2022 ನಡೆದಿದೆ. ಪುಣಗಾಂ ಗಂಗಾನಗರದ ನಿವಾಸಿ ಪುರುಷೋತ್ತಮ ಸೋಲಂಕಿ ಹಾಗೂ ಉತ್ರನ್ ಅಭಿನಂದನ್, ಸೊಸೈಟಿ ನಿವಾಸಿ ಪಿಯೂಷ್ ವೋರಾ, ಸೇರಿದಂತೆ ನಾಲ್ವರು ಸ್ನೇಹಿತರ ಜತೆ ಸೇರಿ ಜವಳಿ ವ್ಯಾಪಾರಿಯೊಬ್ಬರನ್ನು ಟ್ರ್ಯಾಪ್ ಮಾಡಿ 50 ಲಕ್ಷ ಸುಲಿಗೆ ಮಾಡಿದ್ದಾರೆ .

ನವೆಂಬರ್ ತಿಂಗಳಿನಲ್ಲಿ ಜವಳಿ ವ್ಯಾಪಾರಿಯ ಫೋನ್‌ಗೆ ‘ಮಾರುಕಟ್ಟೆಗೆ ಹೊಸ ಹುಡುಗಿ ಬಂದಿದ್ದಾಳೆ’ ಎಂಬ ಸಂದೇಶ ಬಂದಿತ್ತು. ಇದರೊಂದಿಗೆ ಹುಡುಗಿಯ ಫೋಟೋ ಮತ್ತು ನಾನ್ಪುರದ ಅಪಾರ್ಟ್‌ಮೆಂಟ್ ವಿಳಾಸವನ್ನೂ ಸಂದೇಶದಲ್ಲಿ ಕಳುಹಿಸಲಾಗಿದೆ. ಈ ಇದನ್ನು ನಂಬಿ ಉದ್ಯಮಿ, ಅವರು ನೀಡಿದ ವಿಳಾಸಕ್ಕೆ ಹೋಗಿ, ಹನಿಟ್ರ್ಯಾಪ್​​​​ಗೆ ಸಿಲುಕಿಕೊಂಡಿದ್ದಾರೆ.

ಉದ್ಯಮಿ ಫ್ಲಾಟ್‌ಗೆ ತಲುಪುವವರೆಗೆ ಎಲ್ಲವೂ ಸರಿಯಾಗಿತ್ತು, ಆದರೆ 5 ನಿಮಿಷಗಳ ನಂತರ ಮೂರು ಜನರು ಫ್ಲಾಟ್‌ಗೆ ಬಂದು, ನಾವು ಪೊಲೀಸರು ಎಂದು ಹೇಳಿದ್ದಾರೆ. ಪೊಲೀಸರ ಹೆಸರು ಕೇಳಿ ಉದ್ಯಮಿ ಭಯಗೊಂಡ. ಪ್ರಕರಣ ದಾಖಲಿಸಿ ಬಂಧಿಸುವಂತೆ ಆರೋಪಿಗಳು ಉದ್ಯಮಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಉದ್ಯಮಿ ಹೆದರಿ ಈ ವಿಷಯ ಎಲ್ಲಿಯುವ ತಿಳಿಯದಂತೆ ಮಾಡಬೇಕಾದರೆ ಮೊದಲು 10 ಲಕ್ಷ ರೂ. ನೀಡುವಂತೆ ಹೇಳಿದ್ದಾರೆ. ಆದರೆ ಒಂದು ತಿಂಗಳ ನಂತರ ಮತ್ತೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಮತ್ತೊಮ್ಮೆ 40 ಲಕ್ಷ ರೂ. ನೀಡುವಂತೆ ಉದ್ಯಮಿ ಒತ್ತಡ ಹಾಕಿದ್ದಾರೆ.

ಇದನ್ನೂ ಓದಿ:Honeytrap: ಮಠ, ರಾಜಕಾರಣ, ಕಾಮ ಮತ್ತು ಹನಿಟ್ರ್ಯಾಪ್; ಬಸವಲಿಂಗಶ್ರೀ ಆತ್ಮಹತ್ಯೆ ಮೊಗೆದುಕೊಟ್ಟ ನೆನಪುಗಳು

ಜವಳಿ ಉದ್ಯಮಿಯಿಂದ 50 ಲಕ್ಷ ಸುಲಿಗೆ ಮಾಡಿದ ಕೆಲವು ದಿನಗಳ ನಂತರ ಆರೋಪಿಗಳು ಮತ್ತೆ 20 ಲಕ್ಷ ರೂ. ನೀಡುವಂತೆ ನಕಲಿ ಪೋಲೀಸರು, ಉದ್ಯಮಿಗೆ ಕರೆ ಮಾಡಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಬೆದರಿಕೆ ಹಾಕಿದ್ದು, ಇಲ್ಲವಾದರೆ 20 ಲಕ್ಷ ನೀಡಬೇಕು ಎಂದು ಹೇಳಿದ್ದಾರೆ. ಈ ವೇಳೆ ಬಟ್ಟೆ ವ್ಯಾಪಾರಿಗೆ ಅನುಮಾನ ಬಂದು ವೇಸು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ