ಮಧ್ಯಪ್ರದೇಶ: ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ಸಾವು
ಮನೆಯ ಗೋಡೆ ಕುಸಿದು 9 ಮಕ್ಕಳು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ದೇವಸ್ಥಾನದ ಪಕ್ಕದಲ್ಲಿ ಶೆಡ್ ಹಾಕಿಕೊಂಡು ಮಕ್ಕಳು ಶಿವಲಿಂಗ ಮಾಡುತ್ತಿದ್ದರು, ಪಕ್ಕದ ಮನೆಯ ಗೋಡೆ ಕುಸಿತ ಮಕ್ಕಳು ಸಾವನ್ನಪ್ಪಿದ್ದಾರೆ.
ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ದೇವಸ್ಥಾನದ ಪಕ್ಕದಲ್ಲಿ ಶೆಡ್ ಹಾಕಿಕೊಂಡು ಮಕ್ಕಳು ಶಿವಲಿಂಗ ಮಾಡುತ್ತಿದ್ದರು, ಶಿಥಿಲಗೊಂಡಿದ್ದ ದೇವಸ್ಥಾನದ ಗೋಡೆ ಕುಸಿತ ಮಕ್ಕಳು ಸಾವನ್ನಪ್ಪಿದ್ದಾರೆ.
ಎಲ್ಲರೂ 10 ರಿಂದ 14 ವರ್ಷದೊಳಗಿನವರು ಎನ್ನಲಾಗಿದೆ. ಗಾಯಗೊಂಡ ಮಕ್ಕಳಲ್ಲಿ ಒಬ್ಬನನ್ನು ದಾಮೋಹ್‌ಗೆ ಮತ್ತು ಉಳಿದವರನ್ನು ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಸ್ಥಾನದಲ್ಲಿ ನಡೆಯಲಿರುವ ಭಗವತ್ ಕಥಾಗಾಗಿ ಶಿವಲಿಂಗವನ್ನು ಮಕ್ಕಳು ಸಿದ್ಧಪಡಿಸುತ್ತಿದ್ದರು.
ಘಟನಾ ಸ್ಥಳದಲ್ಲಿ ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಗೋಪಾಲ ಭಾರ್ಗವ ಭೇಟಿ ನೀಡಿದ್ದಾರೆ. ದ್ಯ ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತದ ನಂತರ ಇದೀಗ ಸರ್ಕಾರವೂ ಕ್ರಮಕ್ಕೆ ಮುಂದಾಗಿದೆ. ಅಪಘಾತದ ತನಿಖೆಗೆ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಆದೇಶಿಸಿದ್ದಾರೆ.
ಮತ್ತಷ್ಟು ಓದಿ: ಮಧ್ಯಪ್ರದೇಶದಲ್ಲಿ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಗೋಡೆ ಕುಸಿದು ನಾಲ್ವರು ಮಕ್ಕಳ ಸಾವು
ಇದರೊಂದಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಮೋಹನ್ ಯಾದವ್ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಶಾಲೆಗಳ ಸ್ಥಿತಿ ಹದಗೆಟ್ಟಿದೆ. ಶಿಕ್ಷಕರಿಲ್ಲ. ಕಟ್ಟಡಗಳಿಲ್ಲದ ಸಾಕಷ್ಟು ಶಾಲೆಗಳಿವೆ. ಕಳೆದ 10 ವರ್ಷಗಳಲ್ಲಿ 50 ಲಕ್ಷ ಮಕ್ಕಳು ಶಾಲೆ ಬಿಟ್ಟಿದ್ದಾರೆ.
ನಿನ್ನೆಯೂ ಅಂಥದ್ದೇ ಘಟನೆ ನಡೆದಿತ್ತು ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಕಟ್ಟಡವೊಂದರ ಗೋಡೆ ಕುಸಿದು ನಾಲ್ವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮಕ್ಕಳು ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಶಿಥಿಲಗೊಂಡ ಕಟ್ಟಡದ ಗೋಡೆ ಮಕ್ಕಳ ಮೇಲೆ ಬಿದ್ದಿದೆ. ರೇವಾ ಜಿಲ್ಲೆಯ ಗಢ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಘಟನೆ ನಡೆದಿದೆ. ಶನಿವಾರ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ ಕಟ್ಟಡದ ಗೋಡೆಯೊಂದು ಕುಸಿದು 4 ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಖಾಸಗಿ ಶಾಲೆಯೊಂದರ ಬಳಿ ಈ ದುರಂತ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Sun, 4 August 24