ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ 25 ಲಕ್ಷ ರೂ ಆರೋಗ್ಯ ವಿಮೆ

Madhya Pradesh Congress Manifesto: ಮುಂಬರಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರಾಜ್ಯದ ಎಲ್ಲಾ ನಾಗರಿಕರಿಗೆ 25 ಲಕ್ಷ ರೂ ಆರೋಗ್ಯ ವಿಮೆ, ಒಬಿಸಿಗಳಿಗೆ ಶೇ. 27 ಮೀಸಲಾತಿ ಮತ್ತು ಐಪಿಎಲ್ ತಂಡವನ್ನು ರಚಿಸುವುದು ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ತನ್ನ 106 ಪುಟಗಳ ಪ್ರಣಾಳಿಕೆಯಲ್ಲಿ 59 ಭರವಸೆಗಳನ್ನು ಪಟ್ಟಿ ಮಾಡಿದ್ದು, ರೈತರು, ಮಹಿಳೆಯರು ಮತ್ತು ಸರ್ಕಾರಿ ನೌಕರರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೆ ಹಲವು ಭರವಸೆಗಳನ್ನು ನೀಡಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ 25 ಲಕ್ಷ ರೂ ಆರೋಗ್ಯ ವಿಮೆ
ಮಧ್ಯಪ್ರದೇಶ ಕಾಂಗ್ರೆಸ್ ಪ್ರಣಾಳಿಕೆ
Image Credit source: Jagaran

Updated on: Oct 17, 2023 | 2:36 PM

ಮುಂಬರಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ(Assembly Election)ಗೆ ಕಾಂಗ್ರೆಸ್(Congress) ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರಾಜ್ಯದ ಎಲ್ಲಾ ನಾಗರಿಕರಿಗೆ 25 ಲಕ್ಷ ರೂ ಆರೋಗ್ಯ ವಿಮೆ, ಒಬಿಸಿಗಳಿಗೆ ಶೇ. 27 ಮೀಸಲಾತಿ ಮತ್ತು ಐಪಿಎಲ್ ತಂಡವನ್ನು ರಚಿಸುವುದು ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ತನ್ನ 106 ಪುಟಗಳ ಪ್ರಣಾಳಿಕೆಯಲ್ಲಿ 59 ಭರವಸೆಗಳನ್ನು ಪಟ್ಟಿ ಮಾಡಿದ್ದು, ರೈತರು, ಮಹಿಳೆಯರು ಮತ್ತು ಸರ್ಕಾರಿ ನೌಕರರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೆ ಹಲವು ಭರವಸೆಗಳನ್ನು ನೀಡಿದೆ.

ಪಕ್ಷವು ತನ್ನ ಪ್ರಣಾಳಿಕೆಗೆ ವಚನಪತ್ರ ಎಂದು ಹೆಸರಿಟ್ಟಿದೆ, ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಹೊರಬರಲಿದೆ. ರಾಜಸ್ಥಾನ, ಛತ್ತೀಸ್​ಗಢ, ತೆಲಂಗಾಣ, ಮಿಜೋರಾಂನಲ್ಲೂ ಅಂದೇ ಮತಎಣಿಕೆ ನಡೆಯಲಿದೆ.

ಹೆಣ್ಣುಮಕ್ಕಳ ಮದುವೆಗೆ 1 ಲಕ್ಷ ರೂ ನೀಡಲಾಗುತ್ತದೆ, ನಮ್ಮ ಪ್ರಣಾಳಿಕೆಗೆ 9 ಸಾವಿರಕ್ಕೂ ಹೆಚ್ಚು ಸಲಹೆಗಳನ್ನು ಕಳುಹಿಸಿದ್ದಕ್ಕಾಗಿ ಮಧ್ಯಪ್ರದೇಶದ ಜನರಿಗೆ ಧನ್ಯವಾದಗಳು ಎಂದಿದ್ದಾರೆ.

ಮತ್ತಷ್ಟು ಓದಿ: ತೆಲಂಗಾಣ: ಕಾಂಗ್ರೆಸ್​​​ನಿಂದ ವಧುವಿಗೆ 10 ಗ್ರಾಂ ಚಿನ್ನ, ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ ಯೋಜನೆ ಭರವಸೆ ಸಾಧ್ಯತೆ

ಅನೇಕ ಸಂಘ, ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಿದ್ದೇವೆ, ಅಂಚೆ ಮೂಲಕವೂ ಸಲಹೆಗಳು ಬಂದಿವೆ. ಅವುಗಳ ಆಧಾರದ ಮೇಲೆ ಪ್ರಾಮಿಸರಿ ನೋಟ್ ಸಿದ್ಧಪಡಿಸಿದ್ದೇವೆ, ಸಾಮಾನ್ಯ ಜನರಿಗೆ ಸಂಬಂಧಿಸಿದ 59 ಸಮಸ್ಯೆಗಳನ್ನು ಪ್ರಾಮಿಸರಿ ನೋಟ್​ನಲ್ಲಿ ಸೇರಿಸಲಾಗಿದೆ. ರಾಜ್ಯಕ್ಕೆ ಕಾಂಗ್ರೆಸ್​ ಬಂದರೆ ಸಮೃದ್ಧಿಯೂ ಬರುತ್ತದೆ ಎಂದು ಕಮಲ್​ನಾಥ್ ಹೇಳಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್​​​ನಿಂದ ವಧುವಿಗೆ 10 ಗ್ರಾಂ ಚಿನ್ನ ಭರವಸೆ
ತೆಲಂಗಾಣ ಕಾಂಗ್ರೆಸ್  ತನ್ನ ಪ್ರಣಾಳಿಕೆಯಲ್ಲಿ(manifesto) ವಿವಾಹದ ಸಮಯದಲ್ಲಿ ಅರ್ಹ ವಧುಗಳಿಗೆ ಹತ್ತು ಗ್ರಾಂ ಚಿನ್ನ ಮತ್ತು ವಿದ್ಯಾರ್ಥಿಗಳಿಗೆ 1 ಲಕ್ಷ ರೂಪಾಯಿ ನಗದು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ ನೀಡುವುದಾಗಿ ಭರವಸೆ ನೀಡಿದೆ.

ಕಾಂಗ್ರೆಸ್​ ಮಧ್ಯಪ್ರದೇಶ ಜನರಿಗೆ ನೀಡಿದ ಭರವಸೆಗಳು
-ಹಳೆಯ ಪಿಂಚಣಿ ಯೋಜನೆ ಅನುಷ್ಠಾನ
-100 ಯೂನಿಟ್​ವರೆಗೆ ಉಚಿತ ವಿದ್ಯುತ್
-200 ಯೂನಿಟ್​ವರೆಗೆ ಅರ್ಧದಷ್ಟು ವಿದ್ಯುತ್ ಬಿಲ್
-ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂ.
-ರೈತರ ಸಾಲ ಮನ್ನಾ
-ಎಲ್​ಪಿಜಿ ಗ್ಯಾಸ್​ ಸಿಲಿಂಡರ್ 500 ರೂ.
-ರೈತರಿಂದ ಗೋಧಿ ಕ್ವಿಂಟಾಲ್​ಗೆ 2,600 ರೂ. ಕೊಟ್ಟು ಖರೀದಿ
-ಪ್ರತಿ ಕ್ವಿಂಟಾಲ್​ಗೆ 2,500 ರೂ,ನಂತೆ ಭತ್ತ ಖರೀದಿ
-25 ಲಕ್ಷ ರೂ ಆರೋಗ್ಯ ವಿಮೆ
-10 ಲಕ್ಷ ರೂ. ಅಪಘಾತ ವಿಮೆ
-ಹೆಣ್ಣುಮಕ್ಕಳ ಮದುವೆ 1 ಲಕ್ಷ ರೂ.
-ಐಪಿಎಲ್ ಮಧ್ಯಪ್ರದೇಶ ತಂಡ ರಚನೆ
-ಗ್ರಾಮ ಮಟ್ಟದಲ್ಲಿ ಒಂದು ಲಕ್ಷ ಹೊಸ ಹುದ್ದೆಗಳನ್ನು ಸೃಷ್ಟಿಸುವ ಭರವಸೆ

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:35 pm, Tue, 17 October 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us