ಬೆಲ್ಟ್​, ಪೈಪ್​ನಿಂದ ಯುವತಿಗೆ ಥಳಿಸಿ, ಗಾಯಕ್ಕೆ ಖಾರದ ಪುಡಿ ಎರಚಿ, ಬಾಯಿಗೆ ಫೆವಿಕ್ವಿಕ್​ ಹಾಕಿ ಚಿತ್ರಹಿಂಸೆ

|

Updated on: Apr 18, 2024 | 3:27 PM

ಮಧ್ಯಪ್ರದೇಶದ ಗುನಾದಲ್ಲಿ ಯುವಕನೊಬ್ಬ ಯುವತೊಯೊಬ್ಬಳ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಕೋಪಗೊಂಡ ಯುವಕನೊಬ್ಬ ಮೊದಲು ಹುಡುಗಿಗೆ ಬೆಲ್ಟ್ ಮತ್ತು ನೀರಿನ ಪೈಪ್‌ನಿಂದ ತೀವ್ರವಾಗಿ ಥಳಿಸಿದ್ದಾನೆ. ನಂತರ ಅವರ ಗಾಯದ ಮೇಲೆ ಮೆಣಸಿನ ಪುಡಿಯನ್ನು ಹಚ್ಚಿದ್ದಾನೆ.

ಬೆಲ್ಟ್​, ಪೈಪ್​ನಿಂದ ಯುವತಿಗೆ ಥಳಿಸಿ, ಗಾಯಕ್ಕೆ ಖಾರದ ಪುಡಿ ಎರಚಿ, ಬಾಯಿಗೆ ಫೆವಿಕ್ವಿಕ್​ ಹಾಕಿ ಚಿತ್ರಹಿಂಸೆ
Image Credit source: Kicklighter Law
Follow us on

ಯುವತಿಯೊಬ್ಬಳು ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಚಿತ್ರಹಿಂಸೆ ನೀಡಿರುವ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಮೊದಲು ಬೆಲ್ಟ್​ ಹಾಗೂ ಪೈಪ್​ನಿಂದ ತೀವ್ರವಾಗಿ ಥಳಿಸಿದ್ದಾನೆ, ನಂತರ ಗಾಯದ ಮೇಲೆ ಮೆಣಸಿನ ಪುಡಿಯನ್ನು ಎರಚಿದ್ದಾನೆ. ಆಕೆ ನೋವಿನಿಂದ ನರಳಲು ಪ್ರಾರಂಭಿಸಿದಾಗ ಆಕೆಯ ತುಟಿಗೆ ಫೆವಿಕ್ವಿಕ್​ನಿಂದ ಅಂಟಿಸಿ ಕುಕೃತ್ಯ ಮೆರೆದಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. 23 ವರ್ಷದ ಯುವತಿ ತನ್ನ ತಾಯಿಯೊಂದಿಗೆ ಇಲ್ಲಿ ವಾಸವಿದ್ದಾಳೆ, ತಂದೆ ಬಹಳ ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಅದೇ ಊರಿನವನಾದ ಅಯಾನ್ ಪಠಾಣ್ ಆಕೆಯನ್ನು ಮದುವೆಯಾಗುತ್ತೇನೆ ಎಂದು ಮುಂದೆ ಬಂದಿದ್ದ.

ಆದರೆ ಆಕೆ ಅಯಾನ್ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಅದರಿಂದ ಅಯಾನ್ ಕೋಪಗೊಂಡಿದ್ದ, ಆಕೆಯನ್ನಯ ಕಿಡ್ನ್ಯಾಪ್​ ಮಾಡಿ ತನ್ನ ಮನೆಗೆ ಕರೆದೊಯ್ದಿದ್ದ. ಮನೆಯಿಂದ ಹೊರ ಹೋಗಲು ಬಿಟ್ಟಿರಲಿಲ್ಲ ಎಂದು ಆಕೆ ಹೇಳಿದ್ದಾಳೆ. ಯುವತಿಯ ತಾಯಿ ಆಕೆಯ ಮನೆಯನ್ನು ಮಾರಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಕೋಪ ತಾರಕಕ್ಕೇರಿತ್ತು.

ಮತ್ತಷ್ಟು ಓದಿ: ಕುದಿಯುವ ನೀರು ಎರಚಿ, ಮನೆಯ ತಾರಸಿಯಿಂದ ಪತಿಯ ಕೆಳಗೆ ತಳ್ಳಿದ ಪತ್ನಿ

ಮನೆಯನ್ನು ತನ್ನ ಹೆಸರಿಗೆ ಮಾರುವಂತೆ ಆತ ಒತ್ತಡ ಹೇರಿದ್ದ. ಈ ವಿಚಾರವಾಗಿ ಒಂದು ತಿಂಗಳ ಕಾಲ ಅಯಾನ್ ಬಾಲಕಿಗೆ ಚಿತ್ರಹಿಂಸೆ ನೀಡುತ್ತಿದ್ದ. ನಂತರ ಮಂಗಳವಾರ ರಾತ್ರಿ ಯುವತಿಗೆ ಬೆಲ್ಟ್ ಹಾಗೂ ನೀರಿನ ಪೈಪ್​ನಿಂದ ಹೊಡೆದಿದ್ದಾನೆ.
ಬಳಿಕ ಗಾಯದ ಮೇಲೆ ಮೆಣಸಿನ ಪುಡಿ ಹಾಕಲಾಗಿದೆ, ಯುವತಿ ನೋವಿನಿಂದ ನರಳಲು ಶುರು ಮಾಡಿದಾಗ ಆಕೆಯ ಅಳು ಹೊರಗೆ ಕೇಳಬಾರದೆಂದು ಫೆವಿಕ್ವಿಕ್​ನಿಂದ ಆಕೆಯ ಬಾಯಿ ಮುಚ್ಚಿದ್ದಾನೆ.

ಹೇಗೋ ಮರುದಿನ ಆಕೆ ಪೊಲೀಸ್​ ಠಾಣೆ ತಲುಪಿದ್ದಾಳೆ, ಪೊಲೀಸರಿಗೆ ತನಗಾದ ಸಂಕಷ್ಟವನ್ನು ವಿವರಿಸಿದ್ದಾರೆ. ಬಾಲಕಿಯ ದೂರಿನ ಮೇರೆಗೆ ಪೊಲೀಸರು ಅಯಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಯಾನ್‌ನನ್ನು ಬಂಧಿಸಲಾಯಿತು. ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಯುವತಿ ಸ್ಥಿತಿ ಚಿಂತಾಜನಕವಾಗಿದೆ, ಅವರ ಇಡೀ ದೇಹದ ತುಂಬೆಲ್ಲಾ ಗಾಯಗಳಾಗಿವೆ. ರಡೂ ಕಣ್ಣುಗಳಲ್ಲಿ ಊತವಿದೆ. ಅಲ್ಲದೆ, ಫೆವಿಕ್ವಾಕ್‌ನಿಂದ ಬಾಧಿತವಾದ ತುಟಿಗಳನ್ನು ವೈದ್ಯರು ಕಷ್ಟಪಟ್ಟು ಸರಿಪಡಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ