AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುದಿಯುವ ನೀರು ಎರಚಿ, ಮನೆಯ ತಾರಸಿಯಿಂದ ಪತಿಯ ಕೆಳಗೆ ತಳ್ಳಿದ ಪತ್ನಿ

ಪತ್ನಿಯೊಬ್ಬಳು ಪತಿಗೆ ಕುದಿಯುವ ನೀರು ಎರಚಿ, ತಾರಸಿಯಿಂದ ಕೆಳಗೆ ತಳ್ಳಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿಯನ್ನು ಆಶಿಶ್ ರೈ ಎಂದು ಗುರುತಿಸಲಾಗಿದ್ದು, ಮಾವ ಕೂಡ ಆತನನ್ನು ಥಳಿಸಿದ್ದಾರೆ ಮತ್ತು ತನ್ನ ಹೆಂಡತಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ತಾರಸಿಯಿಂದ ತಳ್ಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಕುದಿಯುವ ನೀರು ಎರಚಿ, ಮನೆಯ ತಾರಸಿಯಿಂದ ಪತಿಯ ಕೆಳಗೆ ತಳ್ಳಿದ ಪತ್ನಿ
ನಯನಾ ರಾಜೀವ್
|

Updated on: Apr 16, 2024 | 12:19 PM

Share

ಪತಿ ವಿವಾಹೇತರ ಸಂಬಂಧ ಹೊಂದಿರುವುದು ತಿಳಿದು ಪತ್ನಿಯೊಬ್ಬಳು ಆತನಿಗೆ ಕುದಿಯುವ ನೀರು ಎರಚಿ, ತಾರಸಿಯಿಂದ ಕೆಳಗೆ ತಳ್ಳಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ವ್ಯಕ್ತಿಯನ್ನು ಆಶಿಶ್ ರೈ ಎಂದು ಗುರುತಿಸಲಾಗಿದ್ದು, ಮಾವ ಕೂಡ ಆತನನ್ನು ಥಳಿಸಿದ್ದಾರೆ ಮತ್ತು ತನ್ನ ಹೆಂಡತಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಮಾವ ಟೆರೇಸ್​ನಿಂದ ಕೆಳಗೆ ತಳ್ಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಘಟನೆಯ ನಂತರ, ಆಶಿಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಹೆಚ್ಚಿನ ಆರೈಕೆಗಾಗಿ ನಗರದ ಮಹರ್ಷಿ ದೇವ್ರಹಾ ಬಾಬಾ ವೈದ್ಯಕೀಯ ಕಾಲೇಜಿಗೆ ಕಳುಹಿಸುವ ಮೊದಲು ಪ್ರಾಥಮಿಕ ಚಿಕಿತ್ಸೆ ಪಡೆದರು. ಆಶಿಶ್ ಪ್ರಕಾರ, ಏಪ್ರಿಲ್ 13 ರಂದು ಅವರು ಅನಾರೋಗ್ಯದಿಂದ ಬಳಲುತ್ತಿರುವ ಸಹೋದರನನ್ನು ನೋಡಲು ಪತ್ನಿಯ ಕೋರಿಕೆಯ ಮೇರೆಗೆ ಅತ್ತೆಯ ಮನೆಗೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ. ತನ್ನ ಅತ್ತೆಯ ಮನೆಗೆ ತಲುಪಿದ ನಂತರ, ಅಮೃತಾ ರಾತ್ರಿಯಲ್ಲಿ ಉಳಿಯುವಂತೆ ಕೇಳಿಕೊಂಡಿದ್ದಳು.

ಮತ್ತಷ್ಟು ಓದಿ: ದಲ್ಲಾಳಿಗಳಿಬ್ಬರ ಜಗಳ: ಬೆಂಕಿಗಾಹುತಿಯಾಯ್ತು 1 ಕೋಟಿ ರೂ. ಮೌಲ್ಯದ ಲಂಬೋರ್ಗಿನಿ ಕಾರು

ಇಬ್ಬರೂ ಕೋಣೆಯಲ್ಲಿ ಮಲಗಿದ್ದಾಗ, ರಾತ್ರಿಯಲ್ಲಿ ಎಚ್ಚರಗೊಂಡ ಅಮೃತಾ, ಅಡುಗೆಮನೆಯಿಂದ ಕುದಿಯುವ ನೀರನ್ನು ತೆಗೆದುಕೊಂಡು ತನ್ನ ಮೇಲೆ ಎಸೆದರು ಎಂದು ಆಶಿಶ್ ಆರೋಪಿಸಿದ್ದಾರೆ. ಓಡಲು ಪ್ರಯತ್ನಿಸಿದಾಗ, ಮಾವ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಟೆರೇಸ್​ನಿಂದ ಅವರನ್ನು ತಳ್ಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ವರು ಮತ್ತು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಅನೇಕ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಮಹಿಳೆಯನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ