ಸ್ಮಶಾನದಲ್ಲಿ ಅನುಮಾನಾಸ್ಪದ ಚಟುವಟಿಕೆ, ಸಿಸಿಟಿವಿ, ಲೈಟ್​ ಅಳವಡಿಸಿದಾಗ ರಾತ್ರಿ ಹೊತ್ತು ಕಂಡಿದ್ದೇನು?

ಮಧ್ಯಪ್ರದೇಶದ ಭೋಪಾನ್​ನ ಗ್ರಾಮವೊಂದರ ಸ್ಮಶಾನದಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಜನರಿಗೆ ಅನುಮಾನ ಬಂದಿತ್ತು., ಹಾಗಾಗಿ ಅದನ್ನು ತಿಳಿಯಲು ಸ್ಮಶಾನದಲ್ಲಿ ಸಿಸಿಟಿವಿ ಹಾಗೂ ಲೈಟ್​ಗಳನ್ನು ಅಳವಡಿಸಿದ್ದರು. ಗ್ರಾಮಸ್ಥರು ತಮ್ಮ ಸಂಬಂಧಿಕರ ಅಂತ್ಯಕ್ರಿಯೆಯನ್ನು ಮಾಡಲು ಬರುತ್ತಿದ್ದರು, ಮತ್ತು ಮರುದಿನ ಚಿತಾಭಸ್ಮವನ್ನು ಸಂಗ್ರಹಿಸಲು ಹಿಂತಿರುಗಿದಾಗ, ಎಲ್ಲವೂ ಅಸ್ತವ್ಯಸ್ತವಾಗಿರುತ್ತಿತ್ತು.

ಸ್ಮಶಾನದಲ್ಲಿ ಅನುಮಾನಾಸ್ಪದ ಚಟುವಟಿಕೆ, ಸಿಸಿಟಿವಿ, ಲೈಟ್​ ಅಳವಡಿಸಿದಾಗ ರಾತ್ರಿ ಹೊತ್ತು ಕಂಡಿದ್ದೇನು?
ಸ್ಮಶಾನ
Image Credit source: Los Angels Times

Updated on: Feb 13, 2025 | 12:23 PM

ಮಧ್ಯಪ್ರದೇಶದ ಭೋಪಾನ್​ನ ಗ್ರಾಮವೊಂದರ ಸ್ಮಶಾನದಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಜನರಿಗೆ ಅನುಮಾನ ಬಂದಿತ್ತು., ಹಾಗಾಗಿ ಅದನ್ನು ತಿಳಿಯಲು ಸ್ಮಶಾನದಲ್ಲಿ ಸಿಸಿಟಿವಿ ಹಾಗೂ ಲೈಟ್​ಗಳನ್ನು ಅಳವಡಿಸಿದ್ದರು. ಗ್ರಾಮಸ್ಥರು ತಮ್ಮ ಸಂಬಂಧಿಕರ ಅಂತ್ಯಕ್ರಿಯೆಯನ್ನು ಮಾಡಲು ಬರುತ್ತಿದ್ದರು, ಮತ್ತು ಮರುದಿನ ಚಿತಾಭಸ್ಮವನ್ನು ಸಂಗ್ರಹಿಸಲು ಹಿಂತಿರುಗಿದಾಗ, ಎಲ್ಲವೂ ಅಸ್ತವ್ಯಸ್ತವಾಗಿರುತ್ತಿತ್ತು.

ಅಲ್ಲಿನ ಪರಿಸ್ಥಿತಿ ನೋಡಿ ಅವರು ಅಸಮಾಧಾನಗೊಂಡರು. ಮಾಟಮಂತ್ರದ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು, ನಿಗೂಢತೆಯನ್ನು ಬಯಲು ಮಾಡಲು ಸ್ಮಶಾನದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ದೀಪಗಳನ್ನು ಅಳವಡಿಸಲು ನಿರ್ಧರಿಸಿದರು.

ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋದಲ್ಲಿ ಮಧ್ಯರಾತ್ರಿಯಲ್ಲಿ ಉರಿಯುತ್ತಿರುವ ಚಿತೆ ಬಳಿ ಮಾಂತ್ರಿಕರ ಗುಂಪೊಂದು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಈ ಜನರು ದೀರ್ಘಕಾಲದವರೆಗೆ ಸ್ಮಶಾನದಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸುತ್ತಿದ್ದರು.

ಪೊಲೀಸರು ಇಬ್ಬರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಮಾವಾಸ್ಯೆಯಲ್ಲಿ ಮಾಟ, ಮಂತ್ರ ಅಭ್ಯಾಸ ಮಾಡಲಾಗುತ್ತಿತ್ತು. ಅಲ್ಲಿಯೇ ಹತ್ತಿರದ ನಿವಾಸಿಯೊಬ್ಬರು ಮಾತನಾಡಿ, ಸ್ಮಶಾನದಲ್ಲಿ ಮಾಟಗಾರರು ಈ ರೀತಿಯ ತಂತ್ರಗಳನ್ನು ಮಾಡುತ್ತಿರುವುದು ನಿವಾಸಿಗಳಿಗೆ ಆತಂಕ ಉಂಟು ಮಾಡಿತ್ತು. ಅಮವಾಸ್ಯ ಮತ್ತು ಪೂರ್ಣಿಮೆಯಂದು, ಮಧ್ಯರಾತ್ರಿಯ ಸುಮಾರಿಗೆ ಅಪರಿಚಿತ ಜನರು ಸ್ಮಶಾನಕ್ಕೆ ಆಗಮಿಸುತ್ತಿದ್ದರು.

ಮತ್ತಷ್ಟು ಓದಿ: ಗದಗ: ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್ ಹೆಸರು, ಸ್ಮಶಾನ, ರೈತರ 50 ಎಕರೆ ಜಮೀನಿಗೂ ಕಂಟಕ

ಗ್ರಾಮಸ್ಥರು ಅಲ್ಲಿ ಹ್ಯಾಲೊಜೆನ್ ದೀಪಗಳನ್ನು ಸಹ ಅಳವಡಿಸಿದ್ದರು. ಆದರೂ, ಘಟನೆಗಳು ನಿಲ್ಲುತ್ತಿರಲಿಲ್ಲ. ಅದರ ನಂತರ, ಪರಸ್ಪರ ಒಪ್ಪಿಗೆಯಿಂದ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಲಾಯಿತು. ಮೂವರು ಪುರುಷರು ಮತ್ತು ಒಬ್ಬ ಮಹಿಳೆ ನವರಾತ್ರಿ 9ನೇ ರಾತ್ರಿ ಇವರು ತಾಂತ್ರಿಕ ವಿಧಿ ವಿಧಾನಗಳನ್ನು ನಡೆಸುತ್ತಿರುವುದನ್ನು ನಾವು ನೋಡಿದ್ದೇವೆ.

ಅಲ್ಲಿ ಕಪ್ಪು ಬಟ್ಟೆಯಿಂದ ಮಾಡಿದ ಪುಸ್ತಕಗಳನ್ನು ಇಡಲಾಗಿತ್ತು. ರೊಟ್ಟಿ ಮತ್ತು ಪೂರಿಗಳನ್ನು ಒಂದು ತಟ್ಟೆಯಲ್ಲಿ ಇರಿಸಲಾಗಿತ್ತು. ಗ್ರಾಮಸ್ಥರು ಎಲ್ಲರನ್ನೂ ವಶಕ್ಕೆ ಪಡೆದು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ವಶಕ್ಕೆ ಪಡೆದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:17 pm, Thu, 13 February 25

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us