ಐದೈದು ಮದುವೆಯಾಗಿ ನಾನಿನ್ನು ಬ್ರಹ್ಮಚಾರಿ ಎನ್ನುತ್ತಾ ಓಡಾಡುತ್ತಿದ್ದ ಇಂಜಿನಿಯರ್​ ವಿರುದ್ಧ ದೂರು

|

Updated on: Sep 20, 2024 | 2:53 PM

ಐದೈದು ಮದುವೆಯಾಗಿ ನಾನಿನ್ನು ಬ್ರಹ್ಮಚಾರಿ ಎಂದು ಹೇಳುತ್ತಾ ಓಡಾಡುತ್ತಿದ್ದ ಸಾಫ್ಟ್​ವೇರ್ ಇಂಜಿನಿಯರ್ ವಿರುದ್ಧ ದೂರು ದಾಖಲಾಗಿದೆ. ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ, ರುಸ್ತುಂ ಸಿಂಗ್ ಶೇಖರ್ ಎಂಜಿನಿಯರ್​ ಆಗಿದ್ದು 2018ರ ಮಾರ್ಚ್​ 13ರಂದು ಮೊದಲ ಮದುವೆಯಾಗಿದ್ದ. ಮದುವೆಯಾಗಿ ಕೆಲಸದ ನಿಮಿತ್ತ ಹೊರಗಡೆ ಹೋದವನು ಬೇರೆ ಬೇರೆ ಕಡೆ ಮದುವೆಯಾಗಿದ್ದಾನೆ.

ಐದೈದು ಮದುವೆಯಾಗಿ ನಾನಿನ್ನು ಬ್ರಹ್ಮಚಾರಿ ಎನ್ನುತ್ತಾ ಓಡಾಡುತ್ತಿದ್ದ ಇಂಜಿನಿಯರ್​ ವಿರುದ್ಧ ದೂರು
ಮದುವೆ
Follow us on

ಐದೈದು ಮದುವೆಯಾಗಿ ನಾನಿನ್ನು ಬ್ರಹ್ಮಚಾರಿ ಎಂದು ಹೇಳುತ್ತಾ ಓಡಾಡುತ್ತಿದ್ದ ಸಾಫ್ಟ್​ವೇರ್ ಇಂಜಿನಿಯರ್ ವಿರುದ್ಧ ದೂರು ದಾಖಲಾಗಿದೆ. ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ, ರುಸ್ತುಂ ಸಿಂಗ್ ಶೇಖರ್ ಎಂಜಿನಿಯರ್​ ಆಗಿದ್ದು 2018ರ ಮಾರ್ಚ್​ 13ರಂದು ಮೊದಲ ಮದುವೆಯಾಗಿದ್ದ. ಮದುವೆಯಾದ ಬಳಿಕ ಕೆಲಸದ ನಿಮಿತ್ತ ಹೊರಗಡೆ ಹೋದವನು ಬೇರೆ ಬೇರೆ ಕಡೆ ಬೇರೆ ಮಹಿಳೆಯರನ್ನು ಮದುವೆಯಾಗಿದ್ದ.

ಆತನ ಮೊದಲ ಪತ್ನಿ ಗ್ವಾಲಿಯರ್ ಎಸ್ಪಿಗೆ ಬಂದು ದೂರು ನೀಡಿದ್ದಾಳೆ. ಆಕೆ ಈಗಾಗಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು, ಆದರೆ ಇದುವರೆಗೆ ಯಾವುದೇ ಬಂಧನವಾಗಿಲ್ಲ.

ಆತ ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾನೆ ಎಂದು ಅನುಮಾನ ವ್ಯಕ್ತ ಪಡಿಸಿರುವ ಪತ್ನಿ ಆಕೆ ಈಗ ಆತನ ಪಾಸ್‌ಪೋರ್ಟ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಮಹಿಳಾ ಅಪರಾಧ ವಿಭಾಗದ ಡಿಎಸ್‌ಪಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆತ ಮನೆಗೆ ಸರಿಯಾಗಿ ಬಾರದಿರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತ್ನಿ ಗೂಢಾಚಾರಿಕೆ ಮಾಡಿದಾಗ ಆತ ಬೇರೆ ಬೇರೆ ಮಹಿಳೆಯರನ್ನು ಮದುವೆಯಾಗಿರುವುದನ್ನು ಕಂಡುಕೊಂಡಿದ್ದರು.

ಮತ್ತಷ್ಟು ಓದಿ: ಹೆಣ್ಣುಮಕ್ಕಳ ಮದುವೆ ವಯಸ್ಸಿನ ಮಿತಿ 18 ರಿಂದ 21ಕ್ಕೆ ಏರಿಕೆ

ಪತ್ನಿ 2022ರಲ್ಲಿ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದರು, ಅದು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

ವಾರಂಟ್ ಜಾರಿಯಾಗಿ ಎರಡು ವರ್ಷ ಕಳೆದರೂ ಪೊಲೀಸರು ಇನ್ನೂ ಬಂಧಿಸಿಲ್ಲ. ವರದಕ್ಷಿಣೆ ಕಿರುಕುಳವಲ್ಲದೆ ಜೀವನಾಂಶಕ್ಕಾಗಿ ಕೇಸ್ ಹಾಕಿದ್ದರೂ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ