AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ, ಉತ್ತರಾಖಂಡದಲ್ಲಿ ರೈಲು ಹಳಿ ತಪ್ಪಿಸುವ ಯತ್ನ

ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬವನ್ನು ಅಡ್ಡವಾಗಿರಿಸಿ ರೈಲು ಹಳಿ ತಪ್ಪಿಸುವ ಪ್ರಯತ್ನ ವಿಫಲವಾಗಿದೆ. ಉತ್ತರ ಪ್ರದೇಶ ಉತ್ತರಾಖಂಡ ಗಡಿಯಲ್ಲಿರುವ ಬಿಲಾಸ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಗ್ರಾಮದ ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬವೊಂದು ಪತ್ತೆಯಾಗಿದೆ.

ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ, ಉತ್ತರಾಖಂಡದಲ್ಲಿ ರೈಲು ಹಳಿ ತಪ್ಪಿಸುವ ಯತ್ನ
ರೈಲ್ವೆ ಹಳಿ
ನಯನಾ ರಾಜೀವ್
|

Updated on: Sep 20, 2024 | 11:50 AM

Share

ಉತ್ತರಾಖಂಡದಲ್ಲಿ ಕಿಡಿಗೇಡಿಗಳು ರೈಲನ್ನು ಹಳಿ ತಪ್ಪಿಸುವ ಯತ್ನ ಮಾಡಿದ್ದಾರೆ. ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ ಇರಿಸಿದ್ದರು. ಉತ್ತರ ಪ್ರದೇಶ ಉತ್ತರಾಖಂಡ ಗಡಿಯಲ್ಲಿರುವ ಬಿಲಾಸ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಗ್ರಾಮದ ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬವೊಂದು ಪತ್ತೆಯಾಗಿದೆ.

ಲೋಕೊ ಪೈಲಟ್ ಈ ಕಂಬವನ್ನು ನೋಡಿ ಬ್ರೇಕ್ ಹಾಕಿದ್ದಾರೆ, ಇಲ್ಲದಿದ್ದರೆ ದೊಡ್ಡ ರೈಲು ಅಪಘಾತ ಸಂಭವಿಸುತ್ತಿತ್ತು. ಘಟನೆ ಕುರಿತು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಅಧಿಕಾರಿಗಳು, ಪೊಲೀಸರು ಮತ್ತು ಜಿಆರ್‌ಪಿ ಸ್ಥಳಕ್ಕೆ ಆಗಮಿಸಿ ಪಿಲ್ಲರ್ ಅನ್ನು ಹಳಿಯಿಂದ ತೆಗೆದು ರೈಲನ್ನು ಕಳುಹಿಸಿದ್ದಾರೆ.

ರೈಲು ಸುಮಾರು 20 ನಿಮಿಷ ತಡವಾಗಿ ಪ್ರಯಾಣ ಆರಂಭಿಸಿತು. ಈ ಘಟನೆಯ ತನಿಖೆಯನ್ನು ಪ್ರಾರಂಭಿಸಲಾಗಿದೆ. ರೈಲ್ವೆ ಸಚಿವಾಲಯವೂ ವರದಿಯನ್ನು ಕೇಳಿದೆ. ರುದ್ರಪುರ ಬಿಲಾಸ್‌ಪುರ ಹೊರಠಾಣೆ ಉಸ್ತುವಾರಿ ಅಮಿತ್ ಕುಮಾರ್ ಘಟನೆಯನ್ನು ಖಚಿತಪಡಿಸಿದ್ದಾರೆ.

ಮತ್ತಷ್ಟು ಓದಿ: ರೈಲ್ವೆ ಹಳಿ ಮೇಲೆ ಕಿಡಿಗೇಡಿಗಳು ಇರಿಸಿದ್ದ ಸಿಮೆಂಟ್ ಮೈಲಿಗಲ್ಲಿಗೆ ಗುದ್ದಿದ ರೈಲು

ಉತ್ತರ ಪ್ರದೇಶದ ಕಾನ್ಪುರದಲ್ಲಿ ರೈಲು ಹಳಿಗಳ ಮೇಲೆ ಎಲ್‌ಪಿಜಿ ಸಿಲಿಂಡರ್‌ ಅನ್ನು ಇರಿಸಿ, ಕಾಳಿಂದಿ ಎಕ್ಸ್‌ಪ್ರೆಸ್‌ ರೈಲನ್ನು ಹಳಿ ತಪ್ಪಿಸುವ ಪ್ರಯತ್ನವನ್ನು ದುಷ್ಕರ್ಮಿಗಳು ನಡೆಸಿದ್ದರು. ರೈಲು ಹಳಿಯ ಮೇಲೆ ಸಿಲಿಂಡರ್‌ ಇರುವುದನ್ನು ದೂರದಿಂದಲೇ ಗಮನಿಸಿದ ಲೋಕೊ ಪೈಲಟ್ತು ತುರ್ತು ಬ್ರೇಕ್‌ ಹಾಕಿದ್ದರಿಂದಾಗಿ ಅದೃಷ್ಟವಶಾತ್‌ ಭಾರೀ ಅನಾಹುತವೊಂದು ತಪ್ಪಿ ಹೋಗಿ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.

ರಾಜಸ್ಥಾನದ ಅಜ್ಮೀರ್ ನಲ್ಲಿ ದುಷ್ಕರ್ಮಿಗಳು ರೈಲು ಹಳಿಗಳ ಮೇಲೆ ಸಿಮೆಂಟ್‌ ಬ್ಲಾಕ್‌ಗಳನ್ನು ಇರಿಸಿ, ರೈಲು ಹಳಿ ತಪ್ಪಿಸುವ ಯತ್ನ ನಡೆಸಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಅಜ್ಮೀರ್​ನ ಪಶ್ಚಿಮ ಮೀಸಲು ಸರಕು ಸಾಗಣೆ ಕಾರಿಡಾರ್‌ನ ರೈಲು ಹಳಿಗಳ ಮೇಲೆ ದೊಡ್ಡ ಗಾತ್ರದ ಎರಡು ಸಿಮೆಂಟ್‌ ಬ್ಲಾಕ್‌ಗಳು ಪತ್ತೆಯಾಗಿದ್ದವು. ಇದನ್ನು ಮೊದಲೇ ಇಲಾಖೆ ಸಿಬಂದಿ ಗಮನಿಸಿ, ರೈಲು ಹಳಿಗಳಿಂದ ತೆರವುಗೊಳಿಸಿದ್ದರಿಂದಾಗಿ ಇಲ್ಲೂ ಭಾರೀ ಅಪಘಾತವೊಂದು ತಪ್ಪಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ