Edapaddi Palaniswami: ಒಪಿಎಸ್ ಅರ್ಜಿ ತಳ್ಳಿದ ಮದ್ರಾಸ್ ಹೈಕೋರ್ಟ್; ಇ ಪಳನಿಸ್ವಾಮಿ ಎಐಎಡಿಎಂಕೆ ಮುಖ್ಯಸ್ಥ
ಒ ಪನ್ನೀರಸೆಲ್ವಂ ಮತ್ತು ಅವರ ಬೆಂಬಲಿಗರಾದ ಪಿಎಚ್ ಮನೋಜ್ ಪಾಂಡಿಯನ್, ಆರ್ ವೈಥಿಲಿಂಗಂ ಮತ್ತು ಜೆಸಿಡಿ ಪ್ರಭಾಕರನ್ ಪಕ್ಷದ ಚುನಾವಣೆಗಳಿಗೆ ತಡೆ ಕೋರಿ ಮತ್ತು ಕಳೆದ ಜುಲೈ 11 ರಂದು ನಡೆದ ಸಾಮಾನ್ಯ ಮಂಡಳಿ ಸಭೆಯು ಅಂಗೀಕರಿಸಿದ ನಿರ್ಣಯಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಚುನಾವಣೆಯ ವಿರುದ್ಧ ಉಚ್ಚಾಟಿತ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (AIADMK) ನಾಯಕ ಒ ಪನ್ನೀರಸೆಲ್ವಂ (OPS) ಮತ್ತು ಇತರರು ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಇದರ ಬೆನ್ನಲ್ಲೇ ಎಐಎಡಿಎಂಕೆ ತನ್ನ ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಪಳನಿಸ್ವಾಮಿ (EPS) ಅವರ ಹೆಸರು ಘೋಷಿಸಿದೆ. ಒ ಪನ್ನೀರಸೆಲ್ವಂ ಮತ್ತು ಅವರ ಬೆಂಬಲಿಗರಾದ ಪಿಎಚ್ ಮನೋಜ್ ಪಾಂಡಿಯನ್, ಆರ್ ವೈಥಿಲಿಂಗಂ ಮತ್ತು ಜೆಸಿಡಿ ಪ್ರಭಾಕರನ್ ಪಕ್ಷದ ಚುನಾವಣೆಗಳಿಗೆ ತಡೆ ಕೋರಿ ಮತ್ತು ಕಳೆದ ಜುಲೈ 11 ರಂದು ನಡೆದ ಸಾಮಾನ್ಯ ಮಂಡಳಿ ಸಭೆಯು ಅಂಗೀಕರಿಸಿದ ನಿರ್ಣಯಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.
ತೀರ್ಪಿನ ನಂತರ, ಎಐಎಡಿಎಂಕೆಯ ಚುನಾವಣಾ ಉಸ್ತುವಾರಿ ನಾಥಮ್ ಆರ್ ವಿಶ್ವನಾಥನ್ ಮತ್ತು ಪೊಲ್ಲಾಚಿ ವಿ ಜಯರಾಮನ್ ಇಪಿಎಸ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡುವುದಾಗಿ ಘೋಷಿಸಿದರು. ತೀರ್ಪಿನ ನಂತರ, ಇಪಿಎಸ್ ಬೆಂಬಲಿಗರು ಬೀದಿಗಿಳಿದು ಸಿಹಿ ಹಂಚಿ,ಮತ್ತು ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು.
ಫೆಬ್ರವರಿ 23 ರಂದು, ಇಪಿಎಸ್ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಉಳಿಯಲು ಅನುಮತಿಸುವ ಮದ್ರಾಸ್ ಹೈಕೋರ್ಟ್ ನ ಸೆಪ್ಟೆಂಬರ್ 2 ರ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್ ವಿಭಾಗೀಯ ಪೀಠವು ಒಪಿಎಸ್ ಪರ ಏಕ ಪೀಠದ ಆದೇಶವನ್ನು ರದ್ದುಗೊಳಿಸಿತ್ತು. ವಿಭಾಗೀಯ ಪೀಠದ ಆದೇಶದ ವಿರುದ್ಧ ನಾಯಕ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಕಳೆದ ವರ್ಷ ಎಐಎಡಿಎಂಕೆ ನಾಯಕತ್ವದ ಜಗಳದಲ್ಲಿ ಪಳನಿಸ್ವಾಮಿ ಅವರು ಸಾಮಾನ್ಯ ಮಂಡಳಿ ಸಭೆಯನ್ನು ಸ್ಥಗಿತಗೊಳಿಸುವಂತೆ ಒಪಿಎಸ್ ಅವರ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್ ಆದೇಶದ ನಂತರ ಗೆದ್ದಿದ್ದರು. ಮಾಜಿ ಸಿಎಂ ಅವರನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಂದು ಹೆಸರಿಸಲಾಯಿತು ಅವರ ಒಪಿಎಸ್ ಅವರನ್ನು ಪಕ್ಷದಿಂದ ಹೊರಹಾಕಲಾಯಿತು.
ಉಚ್ಛಾಟನೆ ವೇಳೆ ಪಕ್ಷದ ಖಜಾಂಚಿಯಾಗಿದ್ದ ಪನ್ನೀರಸೆಲ್ವಂ ಅವರ ಸ್ಥಾನಕ್ಕೆ ದಿಂಡಿಗಲ್ ಶ್ರೀನಿವಾಸನ್ ಅವರನ್ನು ನೇಮಿಸಲಾಯಿತು. ಎಐಎಡಿಎಂಕೆ ನಾಯಕತ್ವದ ಬಹುತೇಕರು ಪಳನಿಸ್ವಾಮಿ ಅವರನ್ನು ಬೆಂಬಲಿಸಿದ್ದರು. ಪನ್ನೀರಸೆಲ್ವಂ ಅವರು 2001 ಮತ್ತು 2014ರಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು, ಆಗ ದಿವಂಗತ ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ರಾಜೀನಾಮೆ ನೀಡಬೇಕಾಯಿತು. ನಂತರ ಅವರು 2016 ರಲ್ಲಿ ಜಯಾ ನಿಧನದ ನಂತರ ಮತ್ತೆ ಮುಖ್ಯಮಂತ್ರಿಯಾದರು,. ಆದರೆ ಎರಡು ತಿಂಗಳ ನಂತರ ಪಕ್ಷ ವಿಭಜನೆಯಾದ ನಂತರ ರಾಜೀನಾಮೆ ನೀಡಬೇಕಾಯಿತು. ಅಂದಿನ ರಾಜ್ಯಪಾಲರು ಇಪಿಎಸ್ ಅವರನ್ನು ಸಿಎಂ ಆಗಿ ನೇಮಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Tue, 28 March 23